ಉಪ್ಪಿನಂಗಡಿಗೆ ಐಜಿಪಿ ಭೇಟಿ ; ಪೊಲೀಸರ ಬಗ್ಗೆ ನಂಬಿಕೆ ಇಡಿ, ಒತ್ತಡ ಹೇರಿ ಬಗ್ಗಿಸಬಹುದೆಂಬ ಹುಂಬತನ ಬೇಡ - ಎಸ್ಪಿ ಎಚ್ಚರಿಕೆ

16-12-21 02:08 pm       HK Desk news   ಕರಾವಳಿ

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾಣೆ, ಎಎಸ್ಪಿ ಶಿವಕುಮಾರ್ ಗುಣಾರೆ ಉಪ್ಪಿನಂಗಡಿಗೆ ಭೇಟಿ ನೀಡಿದ್ದು, ಅಹಿತಕರ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು, ಡಿ.16 : ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನವಾಣೆ, ಎಎಸ್ಪಿ ಶಿವಕುಮಾರ್ ಗುಣಾರೆ ಉಪ್ಪಿನಂಗಡಿಗೆ ಭೇಟಿ ನೀಡಿದ್ದು, ಅಹಿತಕರ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಎಸ್ಪಿ ಋಷಿಕೇಶ್ ಸೋನವಾಣೆ, ಪೊಲೀಸರ ಮೇಲಿನ ದಾಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶಿಸ್ತು ಕ್ರಮ ಜರುಗಿಸುತ್ತೇವೆ. ಈಗಾಗ್ಲೇ ಆರೋಪಿಗಳು ಯಾರಿದ್ದಾರೆ ಅನ್ನುವುದನ್ನು ಗುರುತಿಸಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮೊನ್ನೆಯ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, ಮೂವರು ಪಿಎಫ್ಐ ಕಾರ್ಯಕರ್ತರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ, ಪಿಎಫ್ಐ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದು, ಒಳನುಗ್ಗಲು ಯತ್ನಿಸಿದ್ದಾರೆ. ಪೊಲೀಸರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಆನಂತರ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರಿಂದಾಗಿ ಲಾಠಿಚಾರ್ಜ್ ನಡೆಸಿದ್ದು, ಈ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಹಲವರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಟ್ಟು ಉದ್ರಿಕ್ತರಾಗಬಾರದು. ಯಾವುದೇ ವಿಚಾರದಲ್ಲಿ ಸಂಶಯ, ಪ್ರಶ್ನೆಗಳಿದ್ದರೆ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡಬಹುದು. ಪೊಲೀಸರು ಜನರ ರಕ್ಷಣೆಗೆ ಇದ್ದಾರೆ ಅನ್ನುವ ಕಾಳಜಿ ಮತ್ತು ನಂಬಿಕೆಯನ್ನು ಇಟ್ಟುಕೊಳ್ಳಿ. ಯಾವುದೇ ಬಲವಂತದಿಂದ ಪೊಲೀಸರನ್ನು ಬಗ್ಗಿಸಬಹುದು ಎಂಬ ಹುಂಬತನ ಇಟ್ಟುಕೊಳ್ಳಬೇಡಿ. ಯಾವುದೇ ನಿರಪರಾಧಿಗಳನ್ನು ಪೊಲೀಸರು ಶಿಕ್ಷಿಸುವುದಿಲ್ಲ. ಈ ಬಗ್ಗೆ ನಾವು ನಿಗಾ ಇಟ್ಟಿದ್ದೇವೆ ಎಂದು ಎಸ್ಪಿ ಸೋನವಾಣೆ ಹೇಳಿದ್ದಾರೆ.

ಉಪ್ಪಿನಂಗಡಿಯ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ತರಿಸಲಾಗಿದೆ. ಮೂರು ರಾಜ್ಯಗಳ ಸಿಆರ್ ಪಿಎಫ್ ಪಡೆಯನ್ನು ಕರೆಸಲಾಗಿದ್ದು, ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದು ಎಸ್ಪಿ ಋಷಿಕುಮಾರ್ ಸೋನವಾಣೆ ಹೇಳಿದ್ದಾರೆ.

ಪೊಲೀಸರ ಮೇಲೆ ಪಿಎಫ್ಐ ಕಾರ್ಯಕರ್ತರ ಹಲ್ಲೆಗೆ ವಿಹಿಂಪ ಖಂಡನೆ ; ಪಿಎಫ್ಐ ನಿಷೇಧಕ್ಕೆ ಒತ್ತಾಯ 

ಆಂಬುಲೆನ್ಸ್ ನಲ್ಲಿ ಮಾರಕಾಯುಧ ತಂದಿಟ್ಟು ದಾಳಿ, ಡಿವೈಎಸ್ಪಿ, ಎಸ್ಐ, ಇನ್ಸ್ ಪೆಕ್ಟರ್ ಸೇರಿ ಹಲವರಿಗೆ ಗಾಯ ; ಇಲಾಖೆ ವಾಹನ ಧ್ವಂಸ, ಠಾಣೆಗೆ ಕಲ್ಲು ತೂರಿ ನುಗ್ಗಲು ಯತ್ನಿಸಿದ್ದ ಪುಂಡರು!

ಲಾಠಿಚಾರ್ಜ್ ಖಂಡಿಸಿ ಡಿ.17ರಂದು ಎಸ್ಪಿ ಕಚೇರಿಗೆ ಮುತ್ತಿಗೆ ; ಸುಳ್ಳು ಕೇಸಿನಲ್ಲಿ ಸಿಕ್ಕಿಸಿದರೆ ಬಿಡಲ್ಲ ಎಂದ ಪಿಎಫ್ಐ ಮುಖಂಡರು

ಬೂದಿ ಮುಚ್ಚಿದ ಕೆಂಡ ಉಪ್ಪಿನಂಗಡಿ ; ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ವದಂತಿ, ನಾಲ್ಕು ತಾಲೂಕು ವ್ಯಾಪ್ತಿಗೆ 144 ಸೆಕ್ಷನ್ ವಿಸ್ತರಣೆ

ಉಪ್ಪಿನಂಗಡಿ ಠಾಣೆ ಮುಂದೆ ಪಿಎಫ್ಐ ಧರಣಿ, ನಮಾಜ್ ಮಾಡಲು ಯತ್ನ ; ಗುಂಪುಗಳ ನಡುವೆ ಸಂಘರ್ಷ, ಕಲ್ಲು ತೂರಾಟ ! ಪೊಲೀಸರ ಲಾಠಿಚಾರ್ಜ್, 144 ಸೆಕ್ಷನ್ ಜಾರಿ, ಹಲವರಿಗೆ ಗಾಯ 

Westran range inspector general of police (IGP), Devajyoti Ray, district superintendent of police (SP), Rishikesh Sonawane, along with additional SP, Shivakumar Gunare, visited Uppinangady on Wednesday December 15, and reviewed the situation. Speaking to media persons, the SP said that the investigation into the saber attack is going on at a brisk pace. He said that the actual accused in the case will be identified and legal steps will be taken.