ಬ್ರೇಕಿಂಗ್ ನ್ಯೂಸ್
16-12-21 09:34 pm HK Desk news ಕರಾವಳಿ
ಮಂಗಳೂರು, ಡಿ.16 : ಉಪ್ಪಿನಂಗಡಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರತ್ಯೇಕ ಮೂರು ಎಫ್ಐಆರ್ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದ್ದು ಹತ್ತು ಮಂದಿಯನ್ನು ಬಂಧಿಸಲಾಗಿದೆ. ಮೊಹಮ್ಮದ್ ತಾಹಿರ್, ಸಾದ್ವಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮೊಹಮ್ಮದ್ ಫೈಜಲ್, ಮೊಹಮ್ಮದ್ ಹನೀಫ್, ಎನ್.ಕಾಸಿಂ, ಮೊಹಮ್ಮದ್ ಆಸಿಫ್, ತುಫೈಲ್ ಮೊಹಮ್ಮದ್ ಬಂಧಿತರು.
ಬಂಟ್ವಾಳ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಕುಮಾರ್, ಉಪ್ಪಿನಂಗಡಿ ಠಾಣೆ ಪಿಎಸೈ ಓಮನಾ ಎನ್.ಕೆ. ದೂರಿನಂತೆ ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಪಿಎಸ್ಐ ಓಮನಾ ಅವರು ನೀಡಿರುವ ಒಂದು ದೂರಿನಲ್ಲಿ ಪಿಎಫ್ಐ ಕಾರ್ಯಕರ್ತರು ಸಂಜೆ 6 ಗಂಟೆ ವೇಳೆಗೆ ಠಾಣೆಯ ಒಳನುಗ್ಗಲು ಯತ್ನಿಸಿ, ಪೊಲೀಸರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಠಾಣೆಯೊಳಗೆ ನುಗ್ಗಿ ವಶಕ್ಕೆ ಪಡೆದಿದ್ದ ಆರೋಪಿತರನ್ನು ಕರೆದೊಯ್ಯಲು ಯತ್ನಿಸಿದ್ದಾರೆ. ಠಾಣೆಯ ಹೊರಭಾಗದಲ್ಲಿ ಗುಂಪು ಕಟ್ಟಿಕೊಂಡು ಠಾಣೆಗೆ ಬರುವ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಡಿಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ.
ಪಿಎಸ್ಐ ಒಮನಾ ಅವರು ನೀಡಿರುವ ಇನ್ನೊಂದು ದೂರಿನಲ್ಲಿ ಸೆಕ್ಷನ್ 144 ಜಾರಿ ಇರುವ ಬಗ್ಗೆ ಡಿವೈಎಸ್ಪಿ ಗಾನ ಕುಮಾರ್ ಅಕ್ರಮವಾಗಿ ಸೇರಿದ್ದ ಜನರಲ್ಲಿ ತಿಳಿಸಿದ್ದರೂ ಪ್ರತಿಭಟನಾ ನಿರತರು ಚದುರಿ ಹೋಗಿರಲಿಲ್ಲ. ರಾತ್ರಿ 9.30ರ ಸುಮಾರಿಗೆ ಠಾಣೆಗೆ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ. ಸಿಬಂದಿಗಳು ತಡೆದಾಗ, ಠಾಣೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ ಗಾಜು ಪುಡಿಗೈದು ಇಲಾಖಾ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಫಿರ್ಯಾದಿದಾರ ಓಮನಾ ಮತ್ತು ಹೆಡ್ ಕಾನ್ಸ್ ಟೇಬಲ್ ರೇಣುಕಾ ಅವರ ಮೇಲೆ ಹಲ್ಲೆಗೈದಿದ್ದಲ್ಲದೆ ಎದೆಗೆ ಕೈಹಾಕಿ ಸಮವಸ್ತ್ರ ಎಳೆದಾಡಿದ್ದಾರೆ. ಕೈಯಿಂದ ಎದೆಯ ಭಾಗಕ್ಕೆ ಗುದ್ದಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ಕೊಲೆಯತ್ನ ನಡೆಸಿದ್ದಾರೆ. ನಂತರ ಸ್ಥಳದಲ್ಲಿದ್ದ ಮೇಲಧಿಕಾರಿಗಳಿಗೂ ಹಲ್ಲೆ ನಡೆಸಿದ್ದಾರೆ. ಫಿರ್ಯಾದಿದಾರ ಓಮನಾ ಮತ್ತು ಸಿಬಂದಿ ರೇಣುಕಾ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಬಂಟ್ವಾಳ ಪಿಎಸ್ಐ ಪ್ರಸನ್ನ ನೀಡಿರುವ ದೂರಿನಲ್ಲಿ ರಾತ್ರಿ 9.30ರ ಸುಮಾರಿಗೆ ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಸ್ಥಳದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಹಿಳಾ ಪೇದೆಗಳ ಮೇಲೆ ಕೈಮಾಡಿರುವುದನ್ನು ನೋಡಿ, ಇತರ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ವಿಷಮಕ್ಕೆ ಹೋಗುವುದನ್ನು ಅರಿತು ಚದುರಿಸಲು ಯತ್ನಿಸಿದ್ದಾರೆ. ಆದರೆ, ಈ ವೇಳೆ ತಾವು ಮೊದಲೇ ತಂದಿಟ್ಟಿದ್ದ ಸೋಡಾ ಬಾಟ್ಲಿಗಳನ್ನು ಆಂಬುಲೆನ್ಸ್ ವಾಹನದಿಂದ ತೆಗೆದು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ, ಫಿರ್ಯಾದಿದಾರ ಪ್ರಸನ್ನ ಕುಮಾರ್ ಮೇಲೆ ವ್ಯಕ್ತಿಯೊಬ್ಬ ಚೂರಿಯಿಂದ ಹೊಟ್ಟೆಗೆ ಇರಿಯಲು ಬಂದಿದ್ದು, ಕೈಯಿಂದ ತಡೆದಾಗ ಚೂರಿಯ ಪೆಟ್ಟು ಕೈಗೆ ತಾಗಿತ್ತು. ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಗಾನ ಕುಮಾರ್ ಮೇಲೆ ಕಲ್ಲಿನ ಪೆಟ್ಟು ಬಿದ್ದಿದೆ. ಇದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೇ ಒಬ್ಬರ ಮೇಲೊಬ್ಬರಂತೆ ಓಡಿದ್ದು, ತಪ್ಪಿಸಿಕೊಂಡು ಮಸೀದಿಯಲ್ಲಿ ಅಡಗಿಕೊಂಡು ಪೊಲೀಸರ ಮೇಲೆ ಸೋಡಾ ಬಾಟ್ಲಿ ಎಸೆದಿದ್ದಾರೆ. ಇದರಿಂದ ಪೊಲೀಸ್ ಠಾಣೆ, ಇಲಾಖಾ ವಾಹನಕ್ಕೆ ಹಾನಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪೊಲೀಸರ ಮೇಲೆ ಪಿಎಫ್ಐ ಕಾರ್ಯಕರ್ತರ ಹಲ್ಲೆಗೆ ವಿಹಿಂಪ ಖಂಡನೆ ; ಪಿಎಫ್ಐ ನಿಷೇಧಕ್ಕೆ ಒತ್ತಾಯ
Police arrested 10 people on Thursday December 16 in connection with the incident where hundreds of Popular Front of India (PFI) activists went on a rampage outside Uppinangady police station demanding the release of persons arrested in connection with an assault case. The arrested are identified as Mohammed Tahir, Swadik, Abdul Mubarak, Abdul Sharin, Mohammed Zahir, Zujir Mohammed Faizal, Mohammed Haneef, N Kaseem, Mohammed Asif and Tufail Mohammed. The police have booked the accused under sections 143, 147, 151, 341, 354, 332, 353, 427, 307, 269, 270 and 149 of IPC and section 2(a) of KPDL act.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
07-09-25 11:24 pm
Mangalore Correspondent
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm