ಬ್ರೇಕಿಂಗ್ ನ್ಯೂಸ್
20-12-21 04:04 pm HK Desk news ಕರಾವಳಿ
ಮಂಗಳೂರು, ಡಿ.20: ಮಂಗಳೂರಿನ ಮಟ್ಟಿಗೆ ಸೈಂಟ್ ಆಗ್ನೆಸ್ ಕಾಲೇಜು ಅಂದ್ರೆ, ಅಲ್ಲಿ ಹೆಣ್ಮಕ್ಕಳಿಗೆ ಮಾತ್ರ ಪ್ರವೇಶ. ಹೆಣ್ಮಕ್ಕಳ ಕಾಲೇಜು ಅಂತಲೇ ಹಿಂದಿನಿಂದಲೂ ಲೋಕ ಪ್ರಸಿದ್ಧಿ. ಅಲ್ಲಿ ಎತ್ತ ನೋಡಿದರೂ, ಚೂಡಿದಾರ್, ಸೀರೆ ಉಟ್ಟ ನಾರಿಯರು ಬಿಟ್ಟರೆ ಪ್ಯಾಂಟ್, ಕೋಟ್ ಹಾಕಿದ ಹುಡುಗರು ಕಾಣಸಿಗಲ್ಲ. ಕೆಲವು ಹೆತ್ತವರು ತಮ್ಮ ಹೆಣ್ಮಕ್ಕಳನ್ನು ಹುಡುಗರು ನೋಡಲೇ ಬಾರದು ಅಂತ ಆಗ್ನೆಸ್ ಕಾಲೇಜಿಗೆ ಸೇರಿಸುವ ಪದ್ಧತಿ ಇತ್ತು.
ಕಳೆದ ನೂರು ವರ್ಷಗಳಿಂದ ಹೆಣ್ಮಕ್ಕಳ ಶಾಲೆಯೆಂದೇ ಪರಿಗಣಿತವಾಗಿದ್ದ ಆಗ್ನೆಸ್ ಕಾಲೇಜಿನಲ್ಲಿ ಮುಂದಿನ ವರ್ಷದಿಂದ ಹುಡುಗರಿಗೂ ಪ್ರವೇಶ ನೀಡಲು ಕಾಲೇಜಿನ ಆಡಳಿತ ಚಿಂತನೆ ಮಾಡಿದೆ. ಪಶ್ಚಿಮ ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಾಪಿಸಿದ್ದ ಮೊಟ್ಟಮೊದಲ ಹೆಣ್ಮಕ್ಕಳ ಕಾಲೇಜು ಎಂಬ ಹಿರಿಮೆ ಹೊಂದಿರುವ ಮಂಗಳೂರಿನ ಆಗ್ನೆಸ್ ಸಂಸ್ಥೆಯಲ್ಲಿ 2022ರ ಸಾಲಿನಿಂದ ಹುಡುಗರ ಪ್ರವೇಶಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕೆಥೋಲಿಕ್ ಕ್ರಿಸ್ತಿಯನ್ ಆಡಳಿತ ಹೊಂದಿರುವ ದೇಶದ ಮೊದಲ ಹೆಣ್ಮಕ್ಕಳ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಆಗ್ನೆಸ್ ಸಂಸ್ಥೆ ಹೊಂದಿದೆ.
ಮುಂದಿನ ವರ್ಷದಿಂದ ಕೋ ಎಜುಕೇಶನ್ ನಡೆಸುವುದಕ್ಕೆ ಆಗ್ನೆಸ್ ಕಾಲೇಜು ಆಡಳಿತದಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ ಹಿಂದೆಯೇ ಪ್ರಸ್ತಾವನೆ ಹೋಗಿತ್ತು. ಡಿ.17ರಂದು ಉಪ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಕ್ ಕೌನ್ಸಿಲ್ ಮೀಟಿಂಗ್ ನಲ್ಲಿ ಈ ಬಗ್ಗೆ ಅನುಮತಿ ನೀಡಲಾಗಿದ್ದು, ಸಹವರ್ತಿ ಶಿಕ್ಷಣಕ್ಕೆ ತಮ್ಮದೇನೂ ಆಕ್ಷೇಪ ಇಲ್ಲ. ಈ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಉಪ ಕುಲಪತಿ ತಿಳಿಸಿದ್ದಾರೆ. ಹುಡುಗರಿಗೆ ಪ್ರವೇಶ ನೀಡುವ ಬಗ್ಗೆ ಕಾಲೇಜಿನ ಆಡಳಿತ ಪೋಷಕರು, ಸಿಬಂದಿ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದು, ಪಾಸಿಟಿವ್ ಆಗಿಯೇ ಸ್ಪಂದಿಸಿದ್ದಾರೆ ಎಂಬುದಾಗಿ ಕಾಲೇಜಿನ ಆಡಳಿತ ಮಂಗಳೂರು ವಿವಿಗೆ ವರದಿ ನೀಡಿತ್ತು.
ಹೆಣ್ಮಕ್ಕಳಿಗೆ ಮಾತ್ರ ಆಗಿದ್ದರಿಂದಲೋ ಏನೋ, ಕಳೆದ ಕೆಲವು ವರ್ಷಗಳಿಂದ ಆಗ್ನೆಸ್ ಕಾಲೇಜಿನಲ್ಲಿ ಪ್ರವೇಶಾತಿ ಕಡಿಮೆಯಾಗಿತ್ತು. ಕೆಲವು ವಿಭಾಗದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಸ್ಥಿತಿ ಎದುರಾಗಿತ್ತು. ಈ ಬಗ್ಗೆ ಹಿಂದಿನ ಪ್ರಾಂಶುಪಾಲರೇ, ಸಹವರ್ತಿ ಶಿಕ್ಷಣಕ್ಕೆ ತೆರೆದುಕೊಂಡರೆ ವಿದ್ಯಾರ್ಥಿಗಳ ಕೊರತೆಯನ್ನು ನೀಗಿಸಬಹುದು ಎಂದು ಕಾಲೇಜಿನ ಆಡಳಿತಕ್ಕೆ ಸಲಹೆ ನೀಡಿದ್ದರು. ಮೂರು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆದಿದ್ದು, ಕೊನೆಗೆ ಸಂದರ್ಭದ ಅನಿವಾರ್ಯತೆಯನ್ನು ಪರಿಗಣಿಸಿ ಹುಡುಗರ ಪ್ರವೇಶಕ್ಕೂ ಅನುಮತಿ ನೀಡಲು ಮ್ಯಾನೇಜ್ಮೆಂಟ್ ಮುಂದಾಗಿದೆ. ಅಂದಹಾಗೆ, ಖಾಸಗಿ ಆಡಳಿತದಲ್ಲಿ 100 ವರ್ಷಗಳನ್ನು ಪೂರೈಸಿದ ದೇಶದ ಮೊದಲ ಹೆಣ್ಮಕ್ಕಳ ಕಾಲೇಜು ಎಂಬ ಹಿರಿಮೆಯೂ ಸೈಂಟ್ ಆಗ್ನೆಸ್ ಸಂಸ್ಥೆಗಿದೆ. ಕಾಲೇಜು ಆರಂಭಿಸಿದಾಗ, ಕೇವಲ 14 ಬಾಲಕಿಯರಿಂದ ತೊಡಗಿದ್ದ ಆಗ್ನೆಸ್ ಕಾಲೇಜು ಪ್ರಸಕ್ತ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತಿದೆ.
ಸೈಂಟ್ ಆಗ್ನೆಸ್ ಸಂಸ್ಥೆ ಸ್ನಾತಕೋತ್ತರ ಶಿಕ್ಷಣದಲ್ಲಿ ಸಹವರ್ತಿ ಶಿಕ್ಷಣವನ್ನು 15 ವರ್ಷಗಳ ಹಿಂದೆಯೇ ಆರಂಭಿಸಿತ್ತು. ಎ ಪ್ಲಸ್ ನ್ಯಾಕ್ ಗ್ರೇಡ್ ಪಡೆದು ಸ್ನಾತಕೋತ್ತರ ಶಿಕ್ಷಣ ಆರಂಭಿಸಿದ್ದರಿಂದ 2007-08ರಲ್ಲೇ ಯುಜಿಸಿ ಈ ಕೇಂದ್ರಕ್ಕೆ ಆಟೋನಾಮಸ್ ಮಾನ್ಯತೆಯನ್ನೂ ನೀಡಿತ್ತು.
For over 100-years, the FIRST Women’s college in Mangaluru. the St Agnes College-Bendore, which saw students clad in sarees, salwar kameez, Churidar, frocks etc entering the college gate, come next year male students dressed to thrill to impress the females in slacks, blazers, suits, jackets etc will be seen entering the college gate. Yes, sources reveal that St Agnes College, the first women’s college on the West Coast of India as well as the first Catholic women’s college in the country, will open its door to boys from the next academic year of 2022. When St Agnes college started it had just 14 girls in the first batch. It is learnt that the institution, also the first women’s college under private management in the country to complete 100 years of existence, had sent a proposal to Mangalore University for permission to go co-educational.
21-01-25 10:59 pm
HK News Desk
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
21-01-25 11:51 pm
Mangalore Correspondent
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
Mangalore Kotekar Bank Robbery, Accused Photo...
21-01-25 12:21 pm
21-01-25 06:00 pm
Mangaluru Correspondent
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm