ಪಿಎಸ್ಐ ಪರೀಕ್ಷೆ ಅಕ್ರಮದ ನಡುವಲ್ಲೇ ರಾಜ್ಯದಲ್ಲಿ 179 ಇನ್ಸ್ ಪೆಕ್ಟರ್ ವರ್ಗಾವರ್ಗಿ ; ಮಂಗಳೂರಿನಲ್ಲಿ ಮಾತ್ರ ಅದಲು ಬದಲು !

23-04-22 10:26 pm       Mangalore Correspondent   ಕರಾವಳಿ

ಅತ್ತ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮದಿಂದಾಗಿ ಸಿಐಡಿ ತನಿಖೆ ನಡೆಯುತ್ತಿರುವಾಗಲೇ ರಾಜ್ಯ ಸರಕಾರ ದಿಢೀರ್ ಆಗಿ 179 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾಯಿಸಿ ಆದೇಶ ಮಾಡಿದೆ.

ಮಂಗಳೂರು, ಎ.23: ಅತ್ತ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮದಿಂದಾಗಿ ಸಿಐಡಿ ತನಿಖೆ ನಡೆಯುತ್ತಿರುವಾಗಲೇ ರಾಜ್ಯ ಸರಕಾರ ದಿಢೀರ್ ಆಗಿ 179 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾಯಿಸಿ ಆದೇಶ ಮಾಡಿದೆ. ಮಂಗಳೂರು, ಬೆಂಗಳೂರು, ವಿಜಯಪುರ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವರ್ಗಾವರ್ಗಿ ಆಗಿದ್ದು, ಕೆಲವರನ್ನು ಈ ಕಡೆಯಿಂದ ಆ ಕಡೆಗೆ ದಬ್ಬಲಾಗಿದೆ. ಯಾರನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಕೊಟ್ಟಿರುವ ಪಟ್ಟಿಯಲ್ಲಿ ನೋಡಬಹುದಾಗಿದೆ.

ಮಂಗಳೂರು ನಗರದ ಮಟ್ಟಿಗೆ ಹೇಳುವುದಾದರೆ, ಬರ್ಕೆ ನಗರ ಠಾಣೆಯಲ್ಲಿದ್ದ ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಬೆಂಗಳೂರು ಸಿಸಿಬಿಗೆ ವರ್ಗಾಯಿಸಲಾಗಿದೆ. ಮಂಗಳೂರು ನಗರ ಸಿಸಿಆರ್ ಬಿಯಲ್ಲಿದ್ದ ಸಿದ್ದಗೌಡ ಹೆಚ್. ಬಜಂತ್ರಿ ಅವರನ್ನು ಕಂಕನಾಡಿ ನಗರ ಠಾಣೆಗೆ ವರ್ಗ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ನಾಲ್ಕು ವರ್ಷಗಳಿಂದ ಇನ್ಸ್ ಪೆಕ್ಟರ್ ಆಗಿದ್ದ ಅಶೋಕ್ ಪಿ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಹಿಳಾ ಠಾಣೆಗೆ ವರ್ಗ ಮಾಡಲಾಗಿದೆ.

 

ಮಂಗಳೂರು ದಕ್ಷಿಣ ಪಾಂಡೇಶ್ವರ ಠಾಣೆಯಲ್ಲಿದ್ದ ಲೋಕೇಶ್ ಎ.ಸಿ. ಅವರನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಗೆ ವರ್ಗ ಮಾಡಲಾಗಿದೆ. ಮಹಿಳಾ ಠಾಣೆಯಲ್ಲಿದ್ದ ರೇವತಿ ಎನ್. ಅವರನ್ನು ಕರಾವಳಿ ಪೊಲೀಸ್ ಠಾಣೆಗೆ ವರ್ಗ ಮಾಡಲಾಗಿದೆ. ಮಂಗಳೂರು ಡಿಸಿಆರ್ ಇ ಯಲ್ಲಿದ್ದ ವಿನಾಯಕ ಬಿಲ್ಲವ ಅವರನ್ನ ಮಂಗಳೂರು ಎಸಿಬಿಗೆ ವರ್ಗಾಯಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿದ್ದ ಗುರುದತ್ ಕಾಮತ್ ಅವರನ್ನು ಸಿಸಿಆರ್ ಬಿ ಮಂಗಳೂರು ನಗರ ಘಟಕಕ್ಕೆ ವರ್ಗ ಮಾಡಲಾಗಿದೆ.

Karnataka 179 police inspectors ordered for transfer, Revathi, Ashok and other few inspectors from Mangalore transferred.