ಅಮೆರಿಕನ್ ಚೀಸ್ ಕೇಕ್ ತಯಾರಿಸಿ ಮಾರ್ಕೆಟ್ ; ಮಂಗಳೂರಿನಲ್ಲಿ ವೈದ್ಯ ಗೆಳೆಯರಿಂದ ಕಮಾಲ್

03-11-20 05:11 pm       Mangalore correspondent | Source TOI   ಸ್ಪೆಷಲ್ ಕೆಫೆ

ಮಂಗಳೂರಿನಲ್ಲಿ ಎಂಡಿಎಸ್ ಕಲಿಯುವ ಡಾಕ್ಟರ್ ಗೆಳೆಯರಿಬ್ಬರು ತಾವೇ ಕೇಕ್ ತಯಾರಿಸಿ, ಈಗ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ.

ಮಂಗಳೂರು, ನವೆಂಬರ್ 03: ಸಾಮಾನ್ಯವಾಗಿ ಬೇಕರಿ ಕೇಕ್ ಗಳಂದ್ರೆ ವಿದ್ಯಾರ್ಥಿಗಳಿಗೆ ಇಷ್ಟದ ತಿಂಡಿ. ದಿನವೂ ಕೇಕ್ ತಂದು ತಿನ್ನುವ ಯುವಜನರಿದ್ದಾರೆ. ಉತ್ತರ ಭಾರತದ ಮೆಡಿಕಲ್ ವಿದ್ಯಾರ್ಥಿಗಳಂತೂ ಕೇಕ್ ಪ್ರಿಯರು. ಆದರೆ, ಲಾಕ್ಡೌನ್ ಟೈಮಲ್ಲಿ ಈ ತಿಂಡಿ ಪ್ರಿಯರಿಗೆ ಬಾಯಿ ಕಟ್ಟಿಹೋಗಿತ್ತು. ಅತ್ತ ತಿಂಡಿನೂ ಇಲ್ಲ. ಕೇಕೂ ಸಿಗುತ್ತಿರಲಿಲ್ಲ. ಇಂಥ ಸಮಯದಲ್ಲಿ ಮಂಗಳೂರಿನಲ್ಲಿ ಎಂಡಿಎಸ್ ಕಲಿಯುವ ಡಾಕ್ಟರ್ ಗೆಳೆಯರಿಬ್ಬರು ತಾವೇ ಕೇಕ್ ತಯಾರಿಸಿ, ಈಗ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ.

ಅವರ ಹೆಸರು ಸಂಜಿತ್ ಮಹಾಜನ್ ಮತ್ತು ಸಾಕ್ಷಿ. ಇಬ್ಬರೂ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಎಂಡಿಎಸ್ ಕಲಿಯುತ್ತಿದ್ದು, ಸದ್ಯಕ್ಕೆ ಇಂಟರ್ನ್ ಶಿಪ್ ಮಾಡುತ್ತಿದ್ದಾರೆ. ಇಬ್ಬರೂ ದೆಹಲಿ ಮೂಲದವರಾಗಿದ್ದು, ಕೊರೊನಾ ಲಾಕ್ಡೌನ್ ಕಾಲದಲ್ಲಿ ತಿನ್ನಲು ಸ್ಪೆಷಲ್ ಏನೂ ಸಿಗದೆ ಬೋರ್ ಹಿಡಿಸಿತ್ತು. ಬಳಿಕ ವಾರಾಂತ್ಯದಲ್ಲಿ ಹಾಗೇ ಕೂರುವುದು ಬೇಡ ಅಂತ ಯೂಟ್ಯೂಬ್ ಹುಡುಕಾಡಿ, ಕೇಕ್ ಮಾಡಲು ಕಲಿತಿದ್ದಾರೆ. ಅದರಲ್ಲೂ ಅಮೆರಿಕನ್ ಸ್ಪೆಷಲ್ ಕೇಕ್ ತಯಾರಿಸಿದ್ದು ಮೊದಲಿಗೆ ತಮ್ಮ ಗೆಳೆಯರಿಗೆ ನೀಡಿದ್ದಾರೆ. ಟೇಸ್ಟ್ ನೋಡಿದವರು ಬಾಯಲ್ಲಿ ನೀರೂರಿಸಿಕೊಂಡಿದ್ದು, ಇವರನ್ನು ಮತ್ತಷ್ಟು ಉತ್ತೇಜಿಸಿತ್ತು.

ಹೀಗಾಗಿ ಲಾಕ್ಡೌನ್ ಮುಗಿದ ಬಳಿಕ ವಾರದ ಕೊನೆಯಲ್ಲಿ ಕೇಕ್ ತಯಾರಿಸಿ, ಮಾರಾಟ ಮಾಡಲು ಪ್ಲಾನ್ ಮಾಡಿದ್ದಾರೆ. ಅಮೆರಿಕನ್ ಚೀಜ್ ಕೇಕ್ ಮತ್ತು ಕ್ಯಾರಿಮಲ್ ಕೇಕ್ ತಯಾರಿಸುತ್ತಿದ್ದು ಅದಕ್ಕಾಗಿ ಡಾ.ಗುಲ್ಟನ್‌ ಎನ್ನುವ ಇನ್ ಸ್ಟಾ ಗ್ರಾಮ್ ಪೇಜ್ ಓಪನ್ ಮಾಡಿದ್ದಾರೆ. ಈಗ ಇವರ ಕೇಕ್ ಕೊಳ್ಳಲು ಬಹಳಷ್ಟು ಅಭಿಮಾನಿಗಳು ತುಂಬಿಕೊಂಡಿದ್ದು, ಪ್ರತೀ ವಾರ ಕೇಕ್ ಬುಕ್ ಮಾಡುತ್ತಿದ್ದಾರೆ. ಒಂದು ಪೀಸ್ ಕೇಕ್ ದರ 120 ಆಗಿದ್ದು, ಏಳು ಇಂಚು ವ್ಯಾಸದ ಇಡೀ ಕೇಕನ್ನು 720 ರೂ. ದರ ಇಟ್ಟಿದ್ದಾರೆ, ಎಂಟು ಇಂಚು ಅಗಲದ ಕೇಕ್ ದರ 960 ರೂ. ಆಗಿದೆ. ಶನಿವಾರ ಸಂಜೆ ಕೇಕ್ ರೆಡಿ ಮಾಡುತ್ತಿದ್ದು, ಭಾನುವಾರ ಡೆಲಿವರಿ ಕೊಡುತ್ತಾರೆ. ಡೆಲಿವರಿಗೆ ಗ್ರಾಹಕರೇ ಬರಬೇಕು, ಅಲ್ಲದೆ, ಸ್ವಿಗ್ಗಿ ಜಿನ್ ಮೂಲಕವೂ ಡೆಲಿವರಿ ವ್ಯವಸ್ಥೆ ಮಾಡಿದ್ದಾರೆ.

ಒಟ್ಟಿನಲ್ಲಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು, ಹೈಫೈ ಆಗಿರುವ ಇವರು ಸ್ವತಃ ಕೇಕ್ ತಯಾರಿಸಿ ನಾಮಿನಲ್ ದರಕ್ಕೆ ಸ್ನೇಹಿತರಿಗೆ ನೀಡುತ್ತಿರುವುದು ಮಂಗಳೂರಿನಲ್ಲಿ ಹೊಸ ಆಕರ್ಷಣೆಗೆ ಕಾರಣವಾಗಿದೆ. 

Video:

Dr Sakshi Sachdeva and Dr Sanchit Mahajan, PG Students from Manipal College of Dental Sciences, Mangalore have turned into weekend bakers after lockdown. Their special cakes have won cake lovers in Mangalore.