ಬ್ರೇಕಿಂಗ್ ನ್ಯೂಸ್
16-06-22 08:26 pm HK News Desk ಕ್ರೀಡೆ
ಮುಂಬೈ, ಜೂ 16: ಗಾಯದ ಕಾರಣ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳಿಂದ ಹೊರಬಿದ್ದಿರುವ ಕನ್ನಡಿಗ ಕೆ. ಎಲ್. ರಾಹುಲ್ ಮುಂಬರುವ ಇಂಗ್ಲೆಂಡ್ ಪ್ರವಾಸದಿಂದಲೂ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ನಾಯಕನಾಗಿ ನೇಮಕಗೊಂಡಿದ್ದರು. ಆದರೆ ಸರಣಿ ಆರಂಭಕ್ಕೆ ಒಂದೆರಡು ದಿನಗಳಿರುವಾಗ ಸ್ನಾಯುಸೆಳೆತಕ್ಕೆ ಒಳಗಾಗಿ ಸರಣಿಯಿಂದಲೇ ಹೊರಬಿದ್ದಿದ್ದರು. ಇದೀಗ ಗಾಯದಿಂದ ಬಳಲುತ್ತಿರುವ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿರುವುದರಿಂದ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಸರಣಿಯಿಂದಲೂ ಹೊರ ಬಿದ್ದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಉಪನಾಯಕ ಮುಂಬರುವ ಇಂಗ್ಲೆಂಡ್ ಪ್ರವಾಸದಿಂದ ಔಟ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಗುರುವಾರ ಮುಂಬೈನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದೆ. ಈ ತಂಡದೊಂದಿಗೆ ರಾಹುಲ್ ತೆರಳಿಲ್ಲ. ಗಾಯದಿಂದ ಚೇತರಿಸಿಕೊಳ್ಳದ ರಾಹುಲ್ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ.
ಆರಂಭಿಕ ಬ್ಯಾಟರ್‌ರನ್ನು ಶನಿವಾರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಟೆಸ್ಟ್‌ಗೆ ಒಳಗಾಗಲು ಸೂಚಿಸಲಾಗಿತ್ತು. ಆದರೆ ಅವರ ಗಾಯದ ಚೇತರಿಕೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದಕ್ಕೆ ಬಿಸಿಸಿಐ ಮುಂಬರು ವಿದೇಶಿ ಪ್ರವಾಸಗಳಿಂದ ಹೊರಗಿಟ್ಟಿತ್ತು. ಇದರ ಬದಲಾಗಿ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, "ರಾಹುಲ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳುತ್ತಿದ್ದಾರೆ, ಹಾಗಾಗಿ ಇಂಗ್ಲೆಂಡ್ ವಿರುದ್ಧದ ಮರುಹೊಂದಿಸಲಾಗಿರುವ ಎಡ್ಗಬಸ್ಟನ್ ಟೆಸ್ಟ್ ನಂತರ ನಡೆಯುವ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುವುದಿಲ್ಲ. ಮಂಡಳಿ ರಾಹುಲ್ ಫಿಟ್‌ನೆಸ್ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದೆ" ಎಂದು ತಿಳಿಸಿದ್ದಾರೆ. ರಾಹುಲ್ ಈ ತಿಂಗಳ ಅಂತ್ಯದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಜರ್ಮನಿಗೆ ತೆರಳುವ ಸಾಧ್ಯತೆಯಿದೆ.
ಇತ್ತೀಚೆಗೆ ಭಾರತ ತಂಡದಲ್ಲಿ ಮೂರು ಮಾದರಿಯಲ್ಲೂ ಖಾಯಂ ಆಟಗಾರನಾಗಿದ್ದ ಕೆ. ಎಲ್. ರಾಹುಲ್ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಲೇ ಇದ್ದಾರೆ. ಭವಿಷ್ಯದ ನಾಯಕನಾಗಿ ಗುರುತಿಸಿಕೊಂಡಿರುವ ರಾಹುಲ್‌ರಲ್ಲಿ ಇನ್ನೂ ಮುಂದಿನ ಏಳೆಂಟು ವರ್ಷಗಳ ಕಾಲ ಕ್ರಿಕೆಟ್ ಇರುವುದರಿಂದ ಫಿಟ್‌ನೆಸ್ ಕಡೆ ಹೆಚ್ಚಿನ ಗಮನ ನೀಡಬೇಕಿದೆ.
In what is terrible news for Indian cricket, senior player KL Rahul is seemingly set to be out for a while due to injury. The BCCI is also set to send him to Germany for treatment and Rahul will miss the tour of England too. The Karnataka man is down with a recurring groin injury.
02-07-22 10:15 pm
HK News Desk
ಮಕ್ಕಳನ್ನು ಮನೆಗೆ ಕರೆಸಿ ವಿಕೃತಿ ; 40ಕ್ಕೂ ಹೆಚ್ಚು...
02-07-22 11:17 am
ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿಯಿವೆ, ತಾಕತ್ತ...
01-07-22 05:32 pm
ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ...
30-06-22 02:12 pm
ಜುಲೈ 1 ರಿಂದ ಬೆಂಗಳೂರಿನ NICE ರಸ್ತೆಯ ಟೋಲ್ ಹೆಚ್ಚಳ...
30-06-22 01:54 pm
02-07-22 10:54 am
HK News Desk
ದೇಶದಲ್ಲಿನ ಅನಾಹುತಗಳಿಗೆ ನೂಪುರ್ ಶರ್ಮಾ ಒಬ್ಬಳೇ ಕಾರ...
01-07-22 08:50 pm
ಭಾರತಕ್ಕೆ ರಷ್ಯಾ ತೈಲ ಪ್ರವಾಹ ; ಇರಾಕ್, ಸೌದಿ ಅರೇಬಿ...
01-07-22 03:14 pm
ಮೋದಿ, ಅಮಿತ್ ಷಾ, ಯೋಗಿಗೆ ಕೊಲೆ ಬೆದರಿಕೆ ಪೋಸ್ಟ್ ;...
01-07-22 02:16 pm
ಒಂದು ಕಾಲದ ಆಟೋ ಡ್ರೈವರ್, ಪ್ರಬಲ ಹಿಂದುತ್ವದ ಪ್ರತಿಪ...
30-06-22 11:06 pm
02-07-22 10:10 pm
HK News Desk
ಗೋಹತ್ಯೆಗೆ ಅವಕಾಶವೇ ಇಲ್ಲ ; ಬಕ್ರೀದ್ ವೇಳೆ ಗೋಮಾಂಸ...
01-07-22 11:25 pm
ಅಡ್ಯಾರ್, ವಳಚ್ಚಿಲ್ ನಲ್ಲಿ ಮೇಘಸ್ಫೋಟ ಆಗಿತ್ತೇ? ಜನ...
30-06-22 11:16 pm
ಮಂಗಳೂರು ನಗರ ಡಿಸಿಪಿ ಹುದ್ದೆಗೆ ಅನ್ಶು ಕುಮಾರ್ ಶ್ರೀ...
30-06-22 08:43 pm
ಮುಂದುವರಿದ ಮಳೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ...
30-06-22 07:24 pm
02-07-22 10:45 pm
HK News Desk
ಸಿಮೆಂಟ್, ಸ್ಟೀಲ್ ಮೇಲೆ ಹೂಡಿಕೆ ಮಾಡಿದರೆ ಭರಪೂರ ಲಾಭ...
02-07-22 10:24 pm
ಕನ್ನಯ್ಯಲಾಲ್ ಕೊಲೆಗೂ ಮೊದಲೇ ಮಹಾರಾಷ್ಟ್ರದಲ್ಲಿ ಫಾರ್...
02-07-22 05:02 pm
ವಿದೇಶದಿಂದ ಬಂದಿದ್ದ ಕಾಸರಗೋಡಿನ ಯುವಕನ ಅಪಹರಿಸಿ ಕೊಲ...
01-07-22 07:42 pm
ಕೇಸರಿ ಶಾಲು ಹಾಕಿದವರಿಂದ ಹಲ್ಲೆಯೆಂದು ಬಿಂಬಿಸಿ ಕೋಮು...
30-06-22 10:28 pm