ಬ್ರೇಕಿಂಗ್ ನ್ಯೂಸ್
18-07-22 10:55 pm Source: one india ಕ್ರೀಡೆ
ಲಂಡನ್, ಜುಲೈ 18: ಭಾರತ ತಂಡದ ವಿರುದ್ಧ ಏಕದಿನ ಸರಣಿಯನ್ನು 2-1ರಲ್ಲಿ ಸೋಲು ಕಾಣುತ್ತಿದ್ದಂತೆ ಇಂಗ್ಲೆಂಡ್‌ನ 2019ರ ವಿಶ್ವಕಪ್ ಹೀರೋ ಹಾಗೂ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ 50 ಓವರ್‌ಗಳ ಕ್ರಿಕೆಟ್‌ಗೆ ನಿವೃತ್ತಿ ದಿಢೀರ್ ಘೋಷಿಸಿದ್ದಾರೆ.
ಜೋ ರೂಟ್ ನಂತರ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿರುವ ಬೆನ್ ಸ್ಟೋಕ್ಸ್ ದೀರ್ಘಮಾದರಿಯ ತಂಡದಲ್ಲಿ ನಾಯಕತ್ವಕ್ಕೆ ಹೆಚ್ಚಿನ ಗಮನ ನೀಡುವ ಸಲುವಾಗಿ ಏಕದಿನ ಕ್ರಿಕೆಟ್‌ನಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಾರೆ. 31 ವರ್ಷದ ಕ್ರಿಕೆಟಿಗ ಡುರಾಮ್‌ನಲ್ಲಿ ಮಂಗಳವಾರ (ನಾಳೆ)ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಅವರ ಕೊನೆಯ ಏಕದಿನ ಪಂದ್ಯವಾಗಲಿದೆ.
ಬೆನ್‌ಸ್ಟೋಕ್ಸ್ ಆಂಗ್ಲರ ಪರ 104 ಏಕದಿನ ಪಂದ್ಯಗಳನ್ನಾಡಿದ್ದಾರೆ. 2019ರ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದು ಅವರ ಏಕದಿನ ಕ್ರಿಕೆಟ್‌ನ ಜೀವನದ ಅತ್ಯುತ್ತಮ ಮೈಲುಗಲ್ಲಾಗಿದೆ. ಹೆಚ್ಚು ಕಡಿಮೆ 7 ದಶಕಗಳ ನಂತರ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ ಕಿವೀಸ್ ವಿರುದ್ಧ ಅಜೇಯ 84 ರನ್‌ಗಳಿಸಿದ್ದರು.
" ಇದು ನಂಬಲಾಗದಷ್ಟು ಕಠಿಣ ನಿರ್ಧಾರವಾಗಿದೆ, ಆದರೆ ಇಂಗ್ಲೆಂಡ್‌ಗಾಗಿ ನನ್ನ ಸಹ ಆಟಗಾರರೊಂದಿಗೆ ಆಡುವ ಪ್ರತಿ ನಿಮಿಷವನ್ನು ನಾನು ಪ್ರೀತಿಸುತ್ತೇನೆ. ನಾವು ಈ ದಾರಿಯಲ್ಲಿ ನಂಬಲಾಗದ ಪಯಣವನ್ನು ಹೊಂದಿದ್ದೇವೆ. ಈ ನಿರ್ಧಾರಕ್ಕೆ ಬರುವುದು ತುಂಬಾ ಕಷ್ಟಕರವಾಗಿದೆ. ಆದರೆ ನಾನು ಇನ್ನು ಮುಂದೆ ಈ ಸ್ವರೂಪದಲ್ಲಿ ತಂಡಕ್ಕೆ ಶೇಕಡಾ100 ರಷ್ಟನ್ನು ನೀಡಲು ಸಾಧ್ಯವಿಲ್ಲ ಎನ್ನುವ ಭಾವನೆ ನನ್ನಲ್ಲಿದೆ".
ನನಗೆ ಮೂರು ಸ್ವರೂಪದಲ್ಲಿ ನಾನು ಆಡುವುದಕ್ಕೆ ಆಗುವುದಿಲ್ಲ, ಮುಂದಿರುವ ವೇಳಾಪಟ್ಟಿಗಳ ಕಾರಣದಿಂದಾಗಿ ನನ್ನ ದೇಹವು ನನ್ನನ್ನು ನಿರಾಸೆಗೊಳಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಜೊತೆಗೆ ಜೋಸ್ ಬಟ್ಲರ್ ಮತ್ತು ತಂಡದ ಉಳಿದವರಿಗೆ ಎಲ್ಲಾ ರೀತಿಯಲ್ಲಿ ನೆರವಾಗಬಲ್ಲ ಇನ್ನೊಬ್ಬ ಆಟಗಾರನ ಸ್ಥಾನವನ್ನು ನಾನು ಕಸಿದುಕೊಳ್ಳುತ್ತಿದ್ದೇನೆ ಎಂದು ನಾನು ಭಾವಿಸುತ್ತಿದ್ದೇನೆ. ಬೇರೆಯವರು ಕ್ರಿಕೆಟಿಗರಾಗಿ ಪ್ರಗತಿ ಹೊಂದಲು ಮತ್ತು ಕಳೆದ 11 ವರ್ಷಗಳಲ್ಲಿ ನನ್ನಂತೆ ಹಲವಾರು ನಂಬಲಾಸಾಧ್ಯವಾ ನೆನಪುಗಳನ್ನು ಹೊಂದಲು ಅವಕಾಶ ಮಾಡಿಕೊಡುವುದಕ್ಕೆ ಇದು ಸುಸಮಯ ಎಂದು ಸ್ಟೋಕ್ಸ್ ಹೇಳಿದ್ದಾರೆ.
ಮುಂದುವರಿಸಿ, "ನಾನು ಟೆಸ್ಟ್ ಕ್ರಿಕೆಟ್‌ಗೆ ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ನೀಡುತ್ತೇನೆ ಮತ್ತುಏಕದಿನ ಕ್ರಿಕೆಟ್ ಆಡದಿರುವ ಈ ನಿರ್ಧಾರದಿಂದ, ಟಿ 20 ಸ್ವರೂಪಕ್ಕೆ ನನ್ನ ಸಂಪೂರ್ಣ ಬದ್ಧತೆಯನ್ನೂ ನೀಡಬಹುದು ಎಂದು ನಾನು ಭಾವಿಸುತ್ತೇನೆ. ಈ ಪಯಣದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಮತ್ತು ಜೋಶ್ ಹಾಗೂ ತಂಡದ ಎಲ್ಲಾ ಆಟಗಾರರಿಗೂ ಭವಿಷ್ಯದಲ್ಲಿ ಸಾಕಷ್ಯ ಯಶಸ್ಸು ಸಿಗಲೆಂದು ಹಾರೈಸುತ್ತೇನೆ" ಎಂದು ಸ್ಟೋಕ್ಸ್ ತಿಳಿಸಿದ್ದಾರೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ 104 ಏಕದಿನ ಪಂದ್ಯಗಳಿಂದ 3 ಶತಕ ಮತ್ತು 21 ಅರ್ಧಶತಕಗಳ ನೆರವಿನಿಂದ 3093 ರನ್‌ಗಳಿಸಿದ್ದಾರೆ. 83 ಟೆಸ್ಟ್ ಪಂದ್ಯಗಳಿಂದ 11 ಶತಕಗಳ ಸಹಿತ 2919 ರನ್, 34 ಟಿ20 ಪಂದ್ಯಗಳಿಂದ 442 ರನ್‌ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 182, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 74 ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದಾರೆ.
❤️🏴 pic.twitter.com/xTS5oNfN2j
— Ben Stokes (@benstokes38) July 18, 2022
England Test captain Ben Stokes announced his sudden retirement from ODI cricket.
18-08-22 01:02 pm
HK News Desk
'ಸಿದ್ದರಾಮಯ್ಯ ಸಿಎಂ' ಹೇಳಿಕೆಯಿಂದ ಬಿಜೆಪಿಗೆ ಮುಜುಗರ...
18-08-22 12:40 pm
ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ...
17-08-22 10:58 pm
ಮಠ, ದೇಗುಲಗಳಿಗೆ ಕೋಟ್ಯಂತರ ಅನುದಾನ ಬಿಡುಗಡೆ ; ಚುನಾ...
17-08-22 10:31 pm
ಆಂಧ್ರ - ಬೆಂಗಳೂರು ಖಾಸಗಿ ಬಸ್ ಪಲ್ಟಿ ; ಸ್ಥಳದಲ್ಲೇ...
17-08-22 11:41 am
18-08-22 11:01 am
HK News Desk
ಚುನಾವಣೆ ವೇಳೆ ಉಚಿತ ಯೋಜನೆ ಯಾವುದಿರಬೇಕು ; ರಾಜಕೀಯ...
17-08-22 10:43 pm
ಸುಕೇಶ್ ಚಂದ್ರಶೇಖರ್ ಬಹುಕೋಟಿ ಹಗರಣ ; ಪ್ರಕರಣದಲ್ಲಿ...
17-08-22 05:59 pm
ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್ ಯಡಿಯೂರಪ್ಪ ; ನಿತಿ...
17-08-22 05:30 pm
ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಂದೆಯ ವಿರುದ್ಧವೇ...
17-08-22 02:21 pm
17-08-22 03:44 pm
Mangalore Correspondent
ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ; ಫಾಜಿಲ್ ಕೊಲೆ...
17-08-22 01:00 pm
ಹಟ್ಟಿಯಿಂದ ದನ ಕಳವು ; ಐವರನ್ನು ಬಂಧಿಸಿದ ಕಂಕನಾಡಿ ಪ...
16-08-22 11:01 pm
ದಕ್ಷ ಅಧಿಕಾರಿ ಉಡುಪಿ ಎಸ್ಪಿ ವಿಷ್ಣುವರ್ಧನ್ ವರ್ಗ ;...
16-08-22 10:29 pm
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ; ದೆಹಲಿಯಲ್ಲಿ ಎನ...
16-08-22 09:20 pm
18-08-22 12:54 pm
HK News Desk
ದುಬೈನಿಂದ ಅಕ್ರಮ ಚಿನ್ನ ತರುತ್ತಿದ್ದ ಭಟ್ಕಳದ ವ್ಯಕ್ತ...
17-08-22 10:52 pm
ಫಾಜಿಲ್ ಕೊಲೆ ಪ್ರಕರಣ ; ಆರೋಪಿಗಳಿಗೆ ಪರಾರಿಯಾಗಲು ಸ...
17-08-22 10:25 pm
ಬಾನಲ್ಲಿ ಮಧುಚಂದ್ರಕೆ ಸಿನಿಮಾ ಸ್ಟೋರಿ ; ಹೆಂಡ್ತಿ ಗಯ...
17-08-22 12:04 pm
ಶಿವಮೊಗ್ಗದಲ್ಲಿ ಚಾಕು ತೋರಿಸಿ ಪೊಲೀಸರಿಗೆ ಹಲ್ಲೆ ಯತ್...
16-08-22 12:10 pm