ಐಪಿಎಲ್ 2020 : ರೈನಾ ದಾಖಲೆಯನ್ನು ಹಿಂದಿಕ್ಕಿದ ಧೋನಿ

03-10-20 10:28 am       Headline Karnataka News Network   ಕ್ರೀಡೆ

ಸಿ ಎಸ್ ಕೆ ‌ ತಂಡದ ನಾಯಕ ಎಂಎಸ್‌ ಧೋನಿ ಶುಕ್ರವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಸಾಧನೆಯನ್ನು ಮುಡಿಗೇರಿಸಿಕೊಂಡರು

ದುಬೈ,ಅಕ್ಟೋಬರ್,03 : ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನೆಂಬ ದಾಖಲೆ ಬರೆದರು.

ದುಬೈ ಇಂಟೆರ್ ನ್ಯಾಷನಲ್ ಸ್ಟೇಡಿಯಂನಲ್ಲಿ  ಶುಕ್ರವಾರ ನಡೆದ ಐಪಿಎಲ್ 14 ನೇ  ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಈ ಪಂದ್ಯದಲ್ಲಿ ಆಡುವ ಮೂಲಕ ಧೋನಿ 164 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿ  ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಾಯಕ ಎಂಬ ಗೌರವಕ್ಕೆ ಪಾತ್ರರಾದರು. 

ಜೊತೆಗೆ  ಸಹ ಆಟಗಾರ ಸುರೇಶ್‌ ರೈನಾ ಐಪಿಎಲ್‌ನಲ್ಲಿ 193 ಪಂದ್ಯಗಳನ್ನು ಆಡಿ ದಾಖಲೆ ಬರೆದಿದ್ದನ್ನು, ಧೋನಿ 194 ಐಪಿಎಲ್ ಪಂದ್ಯಗಳಲ್ಲಿ ಆಡುವ ಮೂಲಕ ರೈನಾ ದಾಖಲೆಯನ್ನು ಹಿಂದಿಕ್ಕಿದರು. ರೈನಾ ಈ ಸೀಸನ್‌ನಲ್ಲಿ ಆಡುತ್ತಿಲ್ಲವಾದ್ದರಿಂದ ದಾಖಲೆ ಧೋನಿ ಹೆಸರಲ್ಲೇ ಉಳಿಯಲಿದೆ.