T20 World cup 2022:'3ನೇ ಆರಂಭಿಕನ ಸ್ಥಾನಕ್ಕೆ ಪೃಥ್ವಿ ಶಾಗೆ ಅವಕಾಶ ನೀಡಿ', ದೀಪ್‌ ದಾಸ್‌ಗುಪ್ತಾ!

06-08-22 01:51 pm       Source: Vijayakarnataka   ಕ್ರೀಡೆ

Deep Dasgupta backs Prithvi Shaw: ಮುಂದಿನ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯರ ಭಾರತ ತಂಡದ ಮೂರನೇ ಆಯ್ಕೆಯ ಆರಂಭಿಕ ಸ್ಥಾನಕ್ಕೆ ಪೃಥ್ವಿ ಶಾ ಅವರನ್ನು...

ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಅತ್ಯುತ್ತಮ ಆರಂಭಿಕ ಜೋಡಿಯನ್ನು ಗುರುತಿಸಲು ಪ್ರಯತ್ನಿಸುತ್ತಿರುವ ಟೀಮ್ ಇಂಡಿಯಾಗೆ ಮಾಜಿ ಕ್ರಿಕೆಟಿಗ ದೀಪ್‌ದಾಸ್‌ಗುಪ್ತಾ, ಮೂರನೇ ಆಯ್ಕೆಯ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಗಾಯಕ್ಕೆ ತುತ್ತಾಗಿರುವ ಕಾರಣ ಕೆ.ಎಲ್‌ ರಾಹುಲ್‌ ಅವರು ಕಳೆದ ಫೆಬ್ರವರಿಯಿಂದ ಟೀಮ್‌ ಇಂಡಿಯಾದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದಲ್ಲಿ ರೋಹಿತ್‌ ಶರ್ಮಾ ಅವರ ಜೊತೆ ಸಾಕಷ್ಟು ಆಟಗಾರರಿಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ಕಲ್ಪಿಸಲಾಗಿತ್ತು.

Do We Actually Need KL Rahul?": Ex-New Zealand Cricketer's Big Statement |  Cricket News

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ಜೊತೆ ರಿಷಭ್‌ ಪಂತ್‌ ಇನಿಂಗ್ಸ್‌ ಆರಂಭಿಸಿದ್ದರು. ಪ್ರಸ್ತುತ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಪ್ರಯತ್ನಿಸಲಾಗಿದೆ. ಆದರೆ, ಟೀಮ್‌ ಮ್ಯಾನೇಜ್‌ಮಂಟ್‌ನ ಈ ಪ್ರಯೋಗ ಹೇಳಿಕೊಳ್ಳುವಂತೆ ವರ್ಕ್‌ಔಟ್‌ ಆಗಿಲ್ಲ ಆದರೆ, ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್‌ 44 ಎಸೆತಗಳಲ್ಲಿ 76 ರನ್‌ ಗಳಿಸಿದ್ದು, ಸಮಾಧಾನದ ವಿಷಯ.

IND vs WI: Rohit Sharma explains why Rishabh Pant was sent to open the  innings in 2nd ODI | CricketTimes.com

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ಜೊತೆ ರಿಷಭ್‌ ಪಂತ್‌ ಇನಿಂಗ್ಸ್‌ ಆರಂಭಿಸಿದ್ದರು. ಪ್ರಸ್ತುತ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಪ್ರಯತ್ನಿಸಲಾಗಿದೆ. ಆದರೆ, ಟೀಮ್‌ ಮ್ಯಾನೇಜ್‌ಮಂಟ್‌ನ ಈ ಪ್ರಯೋಗ ಹೇಳಿಕೊಳ್ಳುವಂತೆ ವರ್ಕ್‌ಔಟ್‌ ಆಗಿಲ್ಲ ಆದರೆ, ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್‌ 44 ಎಸೆತಗಳಲ್ಲಿ 76 ರನ್‌ ಗಳಿಸಿದ್ದು, ಸಮಾಧಾನದ ವಿಷಯ.

IPL 2022: Big SETBACK for Delhi Capitals as Prithvi Shaw FAILS to clear  fitness test | Cricket News | Zee News

ಕಳೆದ 2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಪೃಥ್ವಿ ಶಾ ಕೊನೆಯ ಬಾರಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅವರು ಅತ್ಯುತ್ತಮವಾಗಿ ಆಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದ 10 ಇನಿಂಗ್ಸ್‌ಗಳಲ್ಲಿ ಅವರು 152.97ರ ಸ್ಟ್ರೈಕ್‌ ರೇಟ್‌ನಲ್ಲಿ 283 ರನ್‌ ಗಳಿಸಿದ್ದರು.

ಮೂರನೇ ಆರಂಭಿಕ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ಆರಂಭಿಕ ಇಶಾನ್‌ ಕಿಶನ್‌ ಅವರನ್ನು ಬೇಕಾದರೂ ಪ್ರಯತ್ನಿಸಬಹುದು. ಆದರೆ, ಎಡಗೈ ಬ್ಯಾಟ್ಸ್‌ಮನ್‌ ಇತ್ತೀಚೆಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆಂದು ಅವರು ಹೇಳಿದ್ದಾರೆ.

"ಇಶಾನ್ ಕಿಶನ್‌ ಅವರ ಅಂತಾರಾಷ್ಟ್ರೀಯ ದಾಖಲೆಗಳನ್ನು ನೀವು ನೋಡಬಹುದು. ಅವರು ಅತ್ಯುತ್ತಮವಾಗಿ ಆಡಿದ್ದಾರೆ. ವೃತ್ತಿ ಜೀವನವನ್ನು ಅತ್ಯುತ್ತಮವಾಗಿ ಆರಂಭಿಸಿದ್ದರು. ಆದರೆ, ಅವರು ಇತ್ತೀಚೆಗೆ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಡಿಸುವುದು ಅನುಮಾನ," ಎಂದಿದ್ದಾರೆ.

But He Can Give You A Brisk Start Deep Dasgupta Backs Prithvi Shaw As Indias Third Choice Opener For T20 World Cup.