ರೋಹಿತ್‌ ಶರ್ಮಾ ಜೊತೆ ಈ ಆಟಗಾರನೇ ಇನಿಂಗ್ಸ್‌ ಆರಂಭಿಸಬೇಕೆಂದ ದಾನೀಶ್‌ ಕನೇರಿಯಾ!

12-08-22 07:25 pm       Source: Vijayakarnataka   ಕ್ರೀಡೆ

ದೀರ್ಘಾವಧಿ ಬಳಿಕ ಭಾರತ ತಂಡಕ್ಕೆ ಮರಳಿರುವ ಕೆ.ಎಲ್‌ ರಾಹುಲ್‌ ಅವರ ಬದಲು 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ನಾಯಕ ರೋಹಿತ್‌...

ಹೊಸದಿಲ್ಲಿ: ಯುಎಇ ಆತಿಥ್ಯದಲ್ಲಿ ಆಗಸ್ಟ್‌ 27 ರಿಂದ ಆರಂಭವಾಗುವ 2022ರ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಸೂರ್ಯಕುಮಾರ್‌ ಯಾದವ್‌ ಇನಿಂಗ್ಸ್‌ ಆರಂಭಿಸಬೇಕೆಂದು ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದಾನೀಶ್‌ ಕನೇರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವರ್ಷಾಂತ್ಯದಲ್ಲಿ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಗೂ ಮುನ್ನ ಭಾರತ ತಂಡ ಸಂಯೋಜನೆಯನ್ನು ಟೆಸ್ಟ್‌ ಮಾಡಲು ಏಷ್ಯಾ ಕಪ್‌ ಟೂರ್ನಿಯು ಅತ್ಯುತ್ತಮ ವೇದಿಕೆಯಾಗಿದೆ. ಈ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಅವರನ್ನು ಮೊದಲ ಆಯ್ಕೆಯ ಆರಂಭಿಕರನ್ನಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಪ್ರಯತ್ನಿಸಬಹುದು.

ಪೆಬ್ರವರಿಯಿಂದ ರೋಹಿತ್‌ ಶರ್ಮಾ ಹಾಗೂ ಕೆಎಲ್‌ ರಾಹುಲ್‌ ಟಿ20 ಸ್ವರೂಪದಲ್ಲಿ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ, 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಬಳಿಕ ಕೆಎಲ್‌ ರಾಹುಲ್‌ ಗಾಯಕ್ಕೆ ತುತ್ತಾದ ಬಳಿಕ, ಆರಂಭಿಕ ಸ್ಥಾನಕ್ಕೆ ಇಶಾನ್‌ ಕಿಶನ್‌, ರಿಷಭ್‌ ಪಂತ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರನ್ನು ಪ್ರಯತ್ನಿಸಲಾಗಿತ್ತು.

Rohit has backed me and stood by me a lot of times, says KL Rahul On  Cricketnmore

ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡಕ್ಕೆ ಕೆ.ಎಲ್‌ ರಾಹುಲ್‌ ಇದೀಗ ಮರಳಿದ್ದಾರೆ. ಇದರ ಹೊರತಾಗಿಯೂ ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20 ಸರಣಿಯಲ್ಲಿ ಕ್ರಮವಾಗಿ 24, 11, 76 ಹಾಗೂ 24 ರನ್‌ ಗಳಿಸಿದ್ದ ಸೂರ್ಯಕುಮಾರ್‌ ಯಾದವ್‌ ಅವರಿಗೆ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಲು ಅವಕಾಶ ಕಲ್ಪಿಸಬೇಕೆಂದು ದಾನೀಶ್‌ ಕನೇರಿಯಾ ಸಲಹೆ ನೀಡಿದ್ದಾರೆ.

"ರೋಹಿತ್‌ ಶರ್ಮಾ ಜೊತೆ ಸೂರ್ಯಕುಮಾರ್‌ ಯಾದವ್‌ ಇನಿಂಗ್ಸ್ ಆರಂಭಿಸುವುದನ್ನು ಮುಂದುವರಿಸಬೇಕು. ರೋಹಿತ್‌ ಶರ್ಮಾ ಜೊತೆ ಓಪನರ್‌ ಆಗಿ ಸೂರ್ಯ ಸ್ಥಿರ ಪ್ರದರ್ಶನ ತೋರಿದ್ದಾರೆ. ಕೆ.ಎಲ್‌ ರಾಹುಲ್‌ ತಂಡಕ್ಕೆ ಮರಳಿದ್ದಾರೆ. ಆದರೆ, ಅವರು ಕೆಲ ಕ್ರಮಾಂಕದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ," ಎಂದರು.

"ಈ ರೀತಿ ಯಾಕೆ ಹೇಳುತ್ತಿದ್ದೇನೆ ಎಂದರೆ, ಕೆ.ಎಲ್‌ ರಾಹುಲ್‌ ಈ ಹಿಂದೆ ವಿಭಿನ್ನ ಸನ್ನಿವೇಶಗಳಲ್ಲಿ ಬ್ಯಾಟ್‌ ಮಾಡಿದ್ದಾರೆ ಹಾಗೂ ಎಲ್ಲಾ ಸಂದರ್ಭಗಳಲ್ಲಿಯೂ ರನ್‌ ಗಳಿಸಿದ್ದಾರೆ. ಹಾಗಾಗಿ, ರೋಹಿತ್‌ ಶರ್ಮಾ ಜೊತೆ ಸೂರ್ಯಕುಮಾರ್‌ ಯಾದವ್‌ ಇನಿಂಗ್ಸ್‌ ಆರಂಭಿಸಬೇಕು," ಎಂದು ದಾನೇಶ್‌ ಕನೇರಿಯಾ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

2022ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್‌ ಪಂತ್ (ವಿಕೆಟ್‌ ಕೀಪರ್‌), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಹಲ್‌, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ , ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ ಬೈ ಆಟಗಾರರು: ಶ್ರೇಯಸ್‌ ಅಯ್ಯರ್‌, ಅಕ್ಷರ್ ಪಟೇಲ್‌ ಹಾಗೂ ದೀಪಕ್‌ ಚಹರ್‌.

Asia Cup 2022 I Would Like Suryakumar Yadav To Continue As Opener Danish Kaneria Gives His View On Indias TopOrder Conundrum.