Asia Cup 2022 There Are Better Fast Bowlers Than Mohammed Shami In Indian T20 Cricket Says Ricky Ponting.

">

ಭಾರತ ಟಿ20 ತಂಡದಲ್ಲಿ ಮೊಹಮ್ಮದ್‌ ಶಮಿಗಿಂತ ಉತ್ತಮ ಬೌಲರ್‌ಗಳಿದ್ದಾರೆ: ರಿಕಿ ಪಾಂಟಿಂಗ್‌!

13-08-22 01:24 pm       Source: Vijayakarnataka   ಕ್ರೀಡೆ

2022ರ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಿಂದ ಚೇತೇಶ್ವರ್‌ ಪೂಜಾರ ಅವರನ್ನು ಕೈ ಬಿಟ್ಟಿರುವುದು ಅರ್ಥ...

ಹೊಸದಿಲ್ಲಿ: ಭಾರತ ಟಿ20 ತಂಡದಲ್ಲಿ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರಿಗಿಂತ ಅತ್ಯುತ್ತಮ ಬೌಲರ್‌ಗಳಿದ್ದಾರೆಂದು ಹೇಳಿದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌, ಏಷ್ಯಾ ಕಪ್‌ ಭಾರತ ತಂಡದಿಂದ ಹಿರಿಯ ವೇಗಿಯನ್ನು ಕೈ ಬಿಟ್ಟಿರುವುದು ಅರ್ಥ ಮಾಡಿಕೊಳ್ಳಬಹುದಾದ ಸಂಗತಿಯಾಗಿದೆ ಎಂದಿದ್ದಾರೆ.

ಆಗಸ್ಟ್‌ 27 ರಿಂದ ಯುಎಇ ಆತಿಥ್ಯದಲ್ಲಿ ಆರಂಭವಾಗುವ 2022ರ ಏಷ್ಯಾ ಕಪ್‌ ಟೂರ್ನಿಗೆ ಇತ್ತೀಚೆಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು 15 ಸದಸ್ಯರ ಭಾರತ ಟಿ20 ತಂಡವನ್ನು ಪ್ರಕಟಿಸಿತ್ತು. ಅಷ್ಟೇ ಅಲ್ಲದೆ, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌ ಹಾಗೂ ದೀಪಕ್‌ ಚಹರ್‌ ಅವರನ್ನು ಸ್ಟ್ಯಾಂಡ್‌ ಬೈ ಆಟಗಾರರನ್ನಾಗಿ ಆಯ್ಕೆ ಮಾಡಿತ್ತು.

ಪ್ರಸ್ತುತ ಭಾರತ ಟಿ20 ತಂಡದಲ್ಲಿ ಮೊಹಮ್ಮದ್‌ ಶಮಿ ಅವರಿಗಿಂತ ಅತ್ಯುತ್ತಮ ಬೌಲರ್‌ಗಳಿದ್ದಾರೆ. ಮುಂಬರುವ ಏಷ್ಯಾ ಕಪ್ ಟೂರ್ನಿಯಲ್ಲದೆ, 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಭಾರತ ತಂಡ, ಹೆಚ್ಚಿನ ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯಲು ಎದುರು ನೋಡುತ್ತಿದೆ ಎಂದು ರಿಕಿ ಪಾಂಟಿಂಗ್‌ ಐಸಿಸಿ ರಿವ್ಯೂವ್‌ ಜೊತೆ ಮಾತನಾಡಿದ್ದಾರೆ.

The Ashes: Ricky Ponting labels England the worst-performing team to have  toured Australia | Cricket News | Sky Sports

"ದೀರ್ಘಾವಧಿಯಿಂದ ಭಾರತ ತಂಡಕ್ಕೆ ಅತ್ಯುತ್ತಮ ಬೌಲರ್‌ ಮೊಹಮ್ಮದ್‌ ಶಮಿ. ಅವರ ಸಾಮರ್ಥ್ಯವನ್ನು ಒಮ್ಮೆ ನೋಡಿದರೆ, ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿ ಕಾಣುತ್ತಾರೆ. ಆದರೆ, ಪ್ರಸ್ತುತ ಭಾರತ ಟಿ20 ತಂಡದಲ್ಲಿ ಶಮಿಗಿಂತ ಅತ್ಯುತ್ತಮ ಬೌಲರ್‌ಗಳಿದ್ದಾರೆ. ಅದರಂತೆ ಅವರನ್ನು ಏಷ್ಯಾ ಕಪ್‌ಗೆ ಕಡೆಗಣಿಸಿ, ಯುವ ವೇಗಿಗಳಿಗೆ ಅವಕಾಶ ನೀಡಲಾಗಿದೆ," ಎಂದು ಹೇಳಿದ್ದಾರೆ.

"ಏಷ್ಯಾ ಕಪ್‌ ಟೂರ್ನಿಯ ಬಳಿಕ ಆಸ್ಟ್ರೇಲಿಯಾಗೆ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆಡಲು ಬರುವ ಭಾರತ ತಂಡ, ನಾಲ್ವರು ವೇಗಿಗಳೊಂದಿಗೆ ಬರಬಹುದೆಂದು ಭಾವಿಸುತ್ತೇನೆ. ಇಲ್ಲಿನ ಪರಿಸ್ಥಿತಿಗಳು ಸ್ಪಿನ್‌ಗೆ ಸಹಕಾರಿಯಾಗಿಲ್ಲವಾದರೂ, ಹೆಚ್ಚಿನ ಸ್ಪಿನ್ನರ್‌ಗಳೊಂದಿಗೆ ಇಲ್ಲಿಗೆ ಆಗಮಿಸಲು ಅವರು ಬಯಸುತ್ತಾರೆ," ಎಂದು ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bhuvneshwar Kumar News | India vs South Africa T20Is: Bhuvneshwar Kumar,  The Comeback Man, Augurs Well For India | Ind vs SA | Team India

ಜಸ್‌ಪ್ರೀತ್‌ ಬುಮ್ರಾ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದಾರೆ. ಭುವಿ ಜೊತೆ ಅರ್ಷದೀಪ್‌ ಸಿಂಗ್‌ ಹಾಗೂ ಆವೇಶ್‌ ಖಾನ್‌ ಆಯ್ಕೆಯಾಗಿರುವ ಇನ್ನುಳಿದ ವೇಗಿಗಳು. ಅಂದಹಾಗೆ ಮತ್ತೊಬ್ಬ ವೇಗಿ ದೀಪಕ್‌ ಚಹರ್‌ ಸ್ಟ್ಯಾಂಡ್‌ ಬೈನಲ್ಲಿದ್ದಾರೆ.

ಇದರ ಜೊತೆಗೆ ಒಟ್ಟು ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ಆರ್‌ ಅಶ್ವಿನ್‌, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್‌ ಹಾಗೂ ರವಿ ಬಿಷ್ಣೋಯ್ ತಂಡದಲ್ಲಿದ್ದಾರೆ. ಅಂದಹಾಗೆ ಯುಎಇ ಪರಿಸ್ಥಿತಿಗಳಿಗೆ ತಕ್ಕಂತೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದರೆ ತಪ್ಪಾಗಲಾರದು.

ಮೊಹಮ್ಮದ್‌ ಶಮಿ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಚುಟುಕು ತಂಡದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಆದರೆ, ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಓಡಿಐ ಸರಣಿಯಲ್ಲಿ ಭಾರತ ತಂಡದ ಪರ ಮೊಹಮ್ಮದ್‌ ಶಮಿ ಆಡಿದ್ದರು. ಇದಾದ ಬಳಿಕ ವೆಸ್ಟ್‌ ಇಂಡೀಸ್‌ ಹಾಗೂ ಜಿಂಬಾಬ್ವೆ ಪ್ರವಾಸಗಳಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Asia Cup 2022 There Are Better Fast Bowlers Than Mohammed Shami In Indian T20 Cricket Says Ricky Ponting.