Gautam Gambhir Confirms His Participation In Second Season Of Legends League Cricket.
">ಬ್ರೇಕಿಂಗ್ ನ್ಯೂಸ್
19-08-22 06:26 pm Source: Vijayakarnataka ಕ್ರೀಡೆ
ಬೆಂಗಳೂರು: ಎರಡು ಬಾರಿಯ ಐಪಿಎಲ್ ಚಾಂಪಿಯನ್ಸ್ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ಮುಂಬರುವ ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟೂರ್ನಿಯಲ್ಲಿ ಇಂಡಿಯಾ ಮಹಾರಾಜಾಸ್ ತಂಡದ ಪರ ಆಡುತ್ತಿರುವುದಾಗಿ ಖಾತ್ರಿ ಪಡಿಸಿದ್ದಾರೆ. ಸೆಪ್ಟೆಂಬರ್ 17ರಿಂದ ಶುರುವಾಗಲಿರುವ ಟೂರ್ನಿಯಲ್ಲಿ ಭಾರತ ತಂಡದ ಮಾಜಿ ದಿಗ್ಗಜ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಓಪನರ್ ಆಗಿ ಯಶಸ್ಸು ತಂದುಕೊಟ್ಟಿದ್ದ ಗಂಭೀರ್, ಇದೀಗ ಮಹಾರಾಜಾಸ್ ತಂಡದ ಬಲ ಹೆಚ್ಚಿಸಿದ್ದಾರೆ.
"ಸೆಪ್ಟೆಂಬರ್ 17ರಂದು ಶುರುವಾಗಲಿರುವ ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ನಾನು ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವಿದೆ. ಮತ್ತೊಮ್ಮೆ ಕ್ರಿಕೆಟ್ ಅಂಗಣಕ್ಕೆ ಇಳಿಯಲು ಬಹಳಾ ಕಾತುರದಿಂದ ಎದುರು ನೋಡುತ್ತಿದ್ದೇನೆ. ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ ದಿಗ್ಗಜ ಆಟಗಾರರ ಎದುರು ಮತ್ತೊಮ್ಮೆ ಆಡುವ ಅವಕಾಶ ಸಿಕ್ಕಿರುವುದು ಬಹುದೊಡ್ಡ ಗೌರವದ ಸಂಗತಿ," ಎಂದು ಗಂಭೀರ್ ಹೇಳಿಕೆ ನೀಡಿದ್ದಾರೆ.
2007ರಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಫೈನಲ್ ಪಂದ್ಯಗಳಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಪರ ಗರಿಷ್ಠ ರನ್ ಸ್ಕೋರರ್ ಆಗಿದ್ದರು. 2007ರಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿ ಜಯ ತಂದರೆ, 2011ರ ಫೈನಲ್‌ನಲ್ಲಿ ಅವರು ಬಾರಿಸಿದ 97 ರನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.
ಟೀಮ್ ಇಂಡಿಯಾ ಪರ 58 ಟೆಸ್ಟ್, 147 ಒಡಿಐ ಮತ್ತು 37 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಗಂಭೀರ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 6170 ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 4154 ರನ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ಯಾಪ್ಟನ್ ಆಗಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 2012 ಮತ್ತು 2014ರ ಆವೃತ್ತಿಗಳಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ಲೆಜೆಂಡ್ಸ್ ಲೀಗ್ ಟೂರ್ನಿಗೆ ಈ ಬಾರಿ ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಶೇನ್ ವಾಟ್ಸನ್ ಮತ್ತು ಬ್ರೆಟ್ ಲೀ ಕೂಡ ಪದಾರ್ಪಣೆ ಮಾಡಲಿದ್ದಾರೆ. ಇವರ ಹೊರತಾಗಿ ಮೊಹಮ್ಮದ್ ಕೈಫ್, ಜಾಕ್ ಕಾಲಿಸ್ ಮತ್ತು ಮುತ್ತಯ್ಯ ಮುರಳೀಧರನ್ ಅವರಂತಹ ಸ್ಟಾರ್‌ಗಳು ಕೂಡ ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ.
ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಭಾರತದ 6 ನಗರಗಳಲ್ಲಿ ಆಯೋಜನೆ ಆಗಲಿದೆ. ಕೋಲ್ಕತಾ, ಹೊಸದಿಲ್ಲಿ, ಕಟಕ್, ಲಖನೌ, ಜೋಧ್ಪುರ ಮತ್ತು ರಾಜ್‌ಕೋಟ್ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 16ರಂದು ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಯಂಟ್ಸ್ ತಂಡಗಳ ನಡುವೆ ವಿಶೇಷ ಪ್ರದರ್ಸನ ಪಂದ್ಯ ಕೂಡ ನಡೆಯಲಿದೆ. ಈ ಪಂದ್ಯದಲ್ಲಿ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಆಡಲಿದ್ದಾರೆ.
ಇಂಡಿಯಾ ಮಹಾರಾಜಾಸ್ ತಂಡದ ವಿವರ
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯನ್ ಬದ್ರೀನಾಥ್, ಇರ್ಫಾನ್ ಫಠಾಣ್, ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ (ವಿಕೆಟ್‌ಕೀಪರ್), ಅಶೋಕ್ ದಿಂಡಾ, ಪ್ರಜ್ಞಾನ್ ಓಜಾ, ಅಜಯ್ ಜಡೇಜಾ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತಿಂದರ್ ಸಿಂಗ್ ಸೋಢಿ, ಗೌತಮ್ ಗಂಭೀರ್.
Gautam Gambhir Confirms His Participation In Second Season Of Legends League Cricket.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm