ಬ್ರೇಕಿಂಗ್ ನ್ಯೂಸ್
10-10-22 02:16 pm Source: Vijayakarnataka ಕ್ರೀಡೆ
ರಾಂಚಿ:ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಒಡಿಐ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನೊಳಗೊಂಡ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಭಾನುವಾರ ಇಲ್ಲಿನ ಜೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 279 ರನ್ ಗುರಿ ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ನಾಯಕ ಶಿಖರ್ ಧವನ್ (13) ಹಾಗೂ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್(28) ವಿಫಲರಾದರು.
ಈ ವೇಳೆ ಮೂರನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 161 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವಿನಲ್ಲಿ ಈ ಜೋಡಿ ಪ್ರಮುಖ ಪಾತ್ರವಹಿಸಿತು.
ಮೊದಲನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್, ಎರಡನೇ ಪಂದ್ಯದಲ್ಲಿ ತಮ್ಮ ಪೂರ್ಣ ಪ್ರಮಾಣದ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊರ ಹಾಕಿದರು. ಎದುರಿಸಿದ 111 ಎತಗಳಲ್ಲಿ 15 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 113 ರನ್ ಸಿಡಿಸಿದರು. ಇದು ಶ್ರೇಯಸ್ ಅಯ್ಯರ್ ಅವರ ಒಡಿಐ ವೃತ್ತಿ ಜೀವನದ ಚೊಚ್ಚಲ ಶತಕ!
ದಕ್ಷಿಣ ಆಫ್ರಿಕಾ ವಿರುದ್ದ ಶತಕ ಸಿಡಿಸುವ ಮೂಲಕ ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿ ಒಳಗೊಂಡಿರುವ ಒಡಿಐ ವಿಶೆಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಈ ಅಂಗಣದಲ್ಲಿ ಎರಡು ಶತಕ ಸಿಡಿಸಿದ್ದರು.
ರಾಂಚಿಯಲ್ಲಿ ಒಟ್ಟು ನಾಲ್ಕು ಇನಿಂಗ್ಸ್‌ಗಳನ್ನು ಆಡಿರುವ ವಿರಾಟ್ ಕೊಹ್ಲಿ, 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 123 ರನ್ ಹಾಗೂ 2014ರಲ್ಲಿ ಶ್ರೀಲಂಕಾ ವಿರುದ್ಧ 139 ರನ್ ಸಿಡಿಸಿದ್ದರು. ಈ ಮೈದಾನದಲ್ಲಿ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಶ್ರೇಯಸ್ ಅಯ್ಯರ್ ನಾಲ್ಕನೇ ಆಟಗಾರರಾಗಿದ್ದಾರೆ.
ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಹಾಗೂ ಆಸ್ಟ್ರೇಲಿಯಾದ ಟೆಸ್ಟ್ ಪ್ರೀಮಿಯರ್ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ಕೊನೆಯ ಬಾರಿ ಇಲ್ಲಿ ಶತಕ ಸಿಡಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಶತಕ ವಂಚಿತ ಇಶಾನ್ ಕಿಶನ್: ಶ್ರೇಯಸ್ ಅಯ್ಯರ್ ಜೊತೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ಇಶಾನ್ ಕಿಶನ್ ಕೆಲವೇ ಕೆಲವು ರನ್‌ಗಳಿಂದ ಶತಕ ವಂಚಿತರಾದರು. ತನ್ನ ತವರು ಅಭಿಮಾನಿಗಳ ಎದುರು ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ ಇಶಾನ್ ಕಿಶನ್, 84 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 93 ರನ್ ಗಳಿಸಿದರು. ಇನ್ನೇನು ಶತಕ ಸಿಡಿಸಬೇಕು ಎನ್ನುವಷ್ಟರಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಭಾರತ ತಂಡದ ಮುಂದಿನ ಪಂದ್ಯ
ದಿನಾಂಕ: ಅ.11, 2022
ಸಮಯ: ಮಧ್ಯಾನ: 01: 30ಕ್ಕೆ
ಸ್ಥಳ: ಅರುಣ್ ಜೇಟ್ಲಿ ಸ್ಟೇಡಿಯಂ, ದಿಲ್ಲಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ಸ್
Ind Vs Sa India Batter Shreyas Iyer Joins Virat Kohli In Unique Odi List After Sensational Century Against South Africa.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm