ಕೊಹ್ಲಿ ಅದ್ಭುತ ಇನ್ನಿಂಗ್ಸ್ ; ಭಾರತ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅಮಿತ್ ಷಾ, ಕೇಜ್ರಿವಾಲ್ 

23-10-22 09:47 pm       HK News Desk   ಕ್ರೀಡೆ

ಟಿ- ಟ್ವೆಂಟಿ ವಿಶ್ವಕಪ್ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ವಿಜಯವನ್ನು ದೀಪಾವಳಿ ಹಬ್ಬದ ಶುಭಾರಂಭ ಎಂದು ಕರೆದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಾಕ್‌ ತಂಡದ ವಿರುದ್ಧದ ಭಾರತ ತಂಡದ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಅ.23: ಟಿ- ಟ್ವೆಂಟಿ ವಿಶ್ವಕಪ್ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ವಿಜಯವನ್ನು ದೀಪಾವಳಿ ಹಬ್ಬದ ಶುಭಾರಂಭ ಎಂದು ಕರೆದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಾಕ್‌ ತಂಡದ ವಿರುದ್ಧದ ಭಾರತ ತಂಡದ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅಮಿತ್‌ ಶಾ, ಟಿ-20 ವಿಶ್ವಕಪ್ ಅನ್ನು ಪ್ರಾರಂಭಿಸಲು ಇದು ಉತ್ತಮವಾದ ಮಾರ್ಗವಾಗಿದೆ. ವಿರಾಟ್‌ ಕೊಹ್ಲಿ ಅವರ ಅವರ ಅಬ್ಬರದ ಇನ್ನಿಂಗ್ಸ್ ನಿಜಕ್ಕೂ ಪ್ರಶಂಸನೀಯ. ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ. 

ಹಾಗೆಯೇ ಭಾರತ ತಂಡದ ಗೆಲುವಿಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಇದು ಖಂಡಿತವಾಗಿಯೂ ಭಾರತ-ಪಾಕಿಸ್ತಾನ ನಡುವಿನ ಅತ್ಯಂತ ರೋಚಕ ಪಂದ್ಯ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌, ಗೋವಾದಲ್ಲಿದ್ದ ನಾನು, ಈ ಪಂದ್ಯವನ್ನು ವೀಕ್ಷಣೆ ಮಾಡಲೆಂದೇ ವಿಮಾನದ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. 

Amit Shah recalls his visit to Assam as ABVP leader: We were thrashed a lot  by… | Latest News India - Hindustan Times

Mamata 'irritated' by Bengal governor's posts, blocks him on Twitter |  Deccan Herald

Diwali begins': Amit Shah, Rahul Gandhi, others hail India's win over  Pakistan - India Today

ಅದೇ ರೀತಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಭಾರತ ತಂಡವನ್ನು ಅಭಿನಂದಿಸಿದ್ದು, "ಪಾಕಿಸ್ತಾನ ವಿರುದ್ಧದ ಅದ್ಭುತ ಗೆಲುವಿಗಾಗಿ ಟೀಂ ಇಂಡಿಯಾಕ್ಕೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಟ್ವೀಟ್‌ ಮಾಡಿದ್ದಾರೆ. ಭಾರತ ತಂಡದ ಪ್ರದರ್ಶನ ನೋಡಿ ತುಂಬ ಸಂತಸವಾಯಿತು ಎಂದೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Arvind Kejriwal backs DDC's Jasmine Shah, asks LG to keep hands off think  tank | Latest News Delhi - Hindustan Times

India vs Pakistan, T20 World Cup 2022 Highlights: Epic Virat Kohli innings  leads IND to 4-wicket win in nail-biter | Hindustan Times

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದು, ಟಿ-20 ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದಕ್ಕಾಗಿ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಅಭಿನಂದಿಸುವುದಾಗಿ ಹೇಳಿದರು. ಭಾರತವು ಈ ಬಾರಿಯ ಟಿ-20 ವಿಶ್ವಕಪ್‌ನ್ನು ಗೆಲ್ಲುವ ಭರವಸೆ ಮೂಡಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. 

Thriller of a Match', 'Deepawali Begins': Amit Shah, Rahul Gandhi, Others  React to India's T20 Win Against Pak

ವಿರಾಟ್ ಅವರ ಅತ್ಯುತ್ತಮ ಆಟವು ಪಾಕಿಸ್ತಾನದ ವಿರುದ್ಧ ಭಾರತದ ಅದ್ಭುತ ಗೆಲುವಿಗೆ ಕಾರಣವಾಯಿತು. ನಾನು ಸಮಸ್ತ ಭಾರತೀಯರ ಪರವಾಗಿ ಟೀಂ ಇಂಡಿಯಾವನ್ನು ಅಭಿನಂದಿಸುತ್ತೇನೆ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

Manish Sisodia Takes Dig At Prime Minister Narendra Modi Over His Visit To  Gujarat School

IND vs PAK Toss Today Time, T20 World Cup 2022: India wins toss, to field  first vs Pakistan - Sportstar

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಭಾರತ ತಂಡದ ಗೆಲುವನ್ನು ಸಂಭ್ರಮಿಸಿದ್ದು, ಇದು ನಿಜಕ್ಕೂ ಅಸಾಧಾರಣ ಗೆಲುವು ಎಂದು ಹೇಳಿದ್ದಾರೆ. ಭಾರತ ತಂಡದ ಪ್ರದರ್ಶನ ಸಮಸ್ತ ಭಾರತೀಯರ ಸಂತಸವನ್ನು ಇಮ್ಮಡಿಗೊಳಿಸಿದ್ದು, ಈ ತಂಡ ವಿಶ್ವಕಪ್‌ನ್ನು ಗೆದ್ದು ಮರಳಲಿ ಎಂದು ಹಾರೈಸುವುದಾಗಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

Virat Kohli's match-winning knock of an unbeaten 82 off 53 balls against Pakistan in the T20 World Cup match in Melbourne today has drawn wholesome praise from across the country's political spectrum. While Kohli himself said "It just happens", commenting on today's incredible victory, leaders of political parties were full of appreciation for the former India captain's sparkling knock and the Indian team's resilience that made a near-impossible possible.