ಬ್ರೇಕಿಂಗ್ ನ್ಯೂಸ್
16-11-22 12:33 pm Source: Vijayakarnataka ಕ್ರೀಡೆ
ಬೆಂಗಳೂರು: ಜಗತ್ತಿನ ಐಶಾರಾಮಿ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಳೆದ ಹದಿನೈದು ಆವೃತ್ತಿಗಳಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲಲಾಗದೆ ಉಳಿದಿದೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ನಿಷ್ಠಾವಂತ ಅಭಿಮಾನಿ ಬಳಗವೇ ಇದ್ದು, ತಂಡವನ್ನು ಚಾಂಪಿಯನ್ಸ್ ಪಟ್ಟದಲ್ಲಿ ನೋಡಲು ಬಕಪಕ್ಷಿಯಂತೆ ಕಾಯುತ್ತಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳ ಕನಸನ್ನು ನನಸನ್ನಾಗಿಸಲು ಮತ್ತೊಂದು ಪ್ರಯತ್ನವಾಗಿ ಐಪಿಎಲ್ 2023 ಟೂರ್ನಿಗೆ ಚಾಲೆಂಜರ್ಸ್ ಸಜ್ಜಾಗುತ್ತಿದೆ.
ಐಪಿಎಲ್ 2023 ಟೂರ್ನಿಯು ಈ ಬಾರಿ ಭಾರತದ ಆತಿಥ್ಯದಲ್ಲೇ ನಡೆಯಲಿದ್ದು ಎಂದಿನಂತೆ ಹೋಮ್-ಅಂಡ್ ಅವೇ ಮಾದರಿಯಲ್ಲಿ ಪಂದ್ಯಗಳ ಆಯೋಜನೆ ಆಗಲಿದೆ ಎಂದು ಬಿಸಿಸಿಐ ಈಗಾಗಗಲೇ ಖಾತ್ರಿ ಪಡಿಸಿದೆ. ಇದರರ್ಥ ಆರ್‌ಸಿಬಿ ಅಭಿಮಾನಿಗಳು ಬರೋಬ್ಬರಿ 3 ವರ್ಷಗಳ ಬಳಿಕ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದದಲ್ಲಿ ಪಂದ್ಯಗಳನ್ನು ಮತ್ತೆ ವೀಕ್ಷಿಸಲು ಸಾಧ್ಯವಾಗಲಿದೆ.
ಇನ್ನು ಐಪಿಎಲ್ 2022 ಟೂರ್ನಿಯಲ್ಲಿ ನಾಕ್‌ಔಟ್ ಹಂತಕ್ಕೆ ಕಾಲಿಟ್ಟು ರಾಜಸ್ಥಾನ್ ರಾಯಲ್ಸ್ ಎದುರು ಮುಗ್ಗರಿಸಿದ್ದ ಆರ್‌ಸಿಬಿ ತಂಡ ಮುಂದಿನ ಆವೃತ್ತಿ ಸಲುವಾಗಿ ತನ್ನ ಬಹುತೇಕ ಆಟಗಾರರನ್ನು ಉಳಿಸಿಕೊಂಡು, ಐದು ಆಟಗಾರರನ್ನು ಮಾತ್ರ ಕೈಬಿಟ್ಟಿದೆ. ಹದಿನಾರನೇ ಆವೃತ್ತಿಯ ಟೂರ್ನಿ ಸಲುವಾಗಿ ಇದೇ ವರ್ಷ ಡಿಸೆಂಬರ್‌ನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಈ ಸಲುವಾಗಿ ಎಲ್ಲ ಫ್ರಾಂಚೈಸಿಗಳು ತಾವು ಕಾಯ್ದುಕೊಂಡ ಆಟಗಾರರು ಮತ್ತು ಬಿಡುಗಡೆ ಮಾಡಿದ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 15ರ ಒಳಗೆ ಪ್ರಕಟ ಮಾಡಬೇಕಿತ್ತು. ಅಂತೆಯೇ ಆರ್‌ಸಿಬಿ ಕೂಡ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇತ್ತೀಚೆಗೆ ಅಂತ್ಯಗೊಂಡ 2022ರ ಸಾಲಿನ ಟಿ20 ವಿಶ್ವಕಪ್ ಟೂರ್ನಿ ವೇಳೆ ಗಂಭೀರ ಸ್ವರೂಪದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಆಡುವುದು ಅನುಮಾನ ಇದ್ದರೂ ಕೂಡ ಆರ್‌ಸಿಬಿ ತನ್ನ ಬಳಗದಲ್ಲೇ ಆಸೀಸ್ ಆಟಗಾರನನ್ನು ಉಳಿಸಿಕೊಂಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಎಬಿ ಡಿ'ವಿಲಿಯರ್ಸ್ ನಿವೃತ್ತಿ ಬಳಿಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ಹೊತ್ತು ದಿಟ್ಟ ಆಟವಾಡಿದ್ದಾರೆ.
ಮಂಗಳವಾರ (ನವೆಂಬರ್ 15) ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟ ಮಾಡುವ ಮೊದಲೇ, ಐಪಿಎಲ್ ಟ್ರೇಡಿಂಗ್ ವಿಂಡೋ ಮೂಲಕ ಆರ್‌ಸಿಬಿ ತಂಡ ತನ್ನ ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು 75 ಲಕ್ಷ ರೂ.ಗಳಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟ ಮಾಡಿತ್ತು.
ಆರ್‌ಸಿಬಿ ಉಳಿಸಿಕೊಂಡ ಪ್ರಮುಖ ಆಟಗಾರರ ಪಟ್ಟಿ ಹೀಗಿದೆ
ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್): ರೂ. 16 ಕೋಟಿ
ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್) ರೂ. 12 ಕೋಟಿ
ಮೊಹಮ್ಮದ್ ಸಿರಾಜ್ (ಬೌಲರ್) ರೂ. 7 ಕೋಟಿ
ಫಾಫ್ ಡು ಪ್ಲೆಸಿಸ್ (ಬ್ಯಾಟರ್) ರೂ. 7 ಕೋಟಿ
ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್) ರೂ. 5.5 ಕೋಟಿ
ಹರ್ಷಲ್ ಪಟೇಲ್ (ಬೌಲರ್) ರೂ. 10.75 ಕೋಟಿ
ವಾನಿಂದು ಹಸರಂಗ (ಬೌಲರ್): ರೂ. 10. 75 ಕೋಟಿ
ಶೆರ್ಫೇನ್ ರುದರ್ಫೋರ್ಡ್ (ಆಲ್‌ರೌಂಡರ್): ರೂ. 1 ಕೋಟಿ
ಲವನೀತ್ ಸಿಸೋಡಿಯ (ವಿಕೆಟ್‌ಕೀಪರ್): ರೂ. 20 ಲಕ್ಷ
ಚಾಮಾ ಮಿಲಿಂದ್ (ಬೌಲರ್): ರೂ. 25 ಲಕ್ಷ
ಅನೀಶ್ವರ್ ಗೌತಮ್ (ಆಲ್‌ರೌಂಡರ್): ರೂ. 20 ಲಕ್ಷ್
ಜೇಸನ್ ಬೆಹ್ರೆನ್‌ಡಾರ್ಫ್ (ಆಲ್‌ರೌಂಡರ್): ರೂ. 75 ಲಕ್ಷ
Believe in the core!
— Royal Challengers Bangalore (@RCBTweets) November 15, 2022
12th Man Army, here are our 𝗿𝗲𝘁𝗮𝗶𝗻𝗲𝗱 𝗥𝗼𝘆𝗮𝗹 𝗖𝗵𝗮𝗹𝗹𝗲𝗻𝗴𝗲𝗿𝘀 who will be a part of RCB’s #Classof2023!#PlayBold #WeAreChallengers pic.twitter.com/aQCnh2K66E
Ipl 2023 Retained And Released Players Of Royal Challengers Bangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am