ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿ 5 ಪ್ರಮುಖ ದಾಖಲೆಗಳನ್ನು ಬರೆದ ವಿರಾಟ್ ಕೊಹ್ಲಿ!

12-12-22 01:44 pm       Source: Vijayakarnataka   ಕ್ರೀಡೆ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ವರ್ಷಗಳ ಬಳಿಕ ಏಕದಿನ ಸ್ವರೂಪದಲ್ಲಿ ಶತಕ ಗಳಿಸುವ ಮೂಲಕ ಗಮನ ಸೆಳೆದರು.

ಬಾಂಗ್ಲಾದೇಶ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್‌ ಶತಕ ಸಿಡಿಸಿದರು. ಆ ಮೂಲಕ ಭಾರತ ತಂಡದ 227 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಇದರ ಜೊತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5 ಪ್ರಮುಖ ದಾಖಲೆಗಳನ್ನು ಬರೆದಿದ್ದಾರೆ.

ಇಲ್ಲಿನ ಝಹೂರ್‌ ಅಹ್ಮದ್‌ ಚೌಧರಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಶಿಖರ್ ಧವನ್ ಅವರ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡಿತು. 7ನೇ ಓವರ್‌ನಲ್ಲಿ ಲಿಟನ್ ದಾಸ್ ಬಿಟ್ಟ ಕ್ಯಾಚ್‌ನ ಲಾಭ ಪಡೆದ ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಅವರೊಂದಿಗೆ 290 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

2019ರ ಆಗಸ್ಟ್ 14ರಲ್ಲಿ ಕೊನೆಯ ಬಾರಿ ಏಕದಿನ ಸ್ವರೂಪದಲ್ಲಿ ಶತಕದ ಸಿಡಿಸಿದ್ದ ವಿರಾಟ್‌ ಕೊಹ್ಲಿ, ಅಂದಿನಿಂದ ಇಲ್ಲಿಯವರೆಗೂ ಶತಕ ಸಿಡಿಸಲು ಸಾಧ್ಯವಾಗಲಿಲ್ಲ.ಇದೀಗ ಬಾಂಗ್ಲಾದೇಶ ವಿರುದ್ಧ ಮೂರನೇ ಪಂದ್ಯದಲ್ಲಿ 91 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ಶತಕ ಸಿಡಿಸಿದರು. ಆ ಮೂಲಕ ಪ್ರಮುಖ 5 ದಾಖಲೆಗಳನ್ನು ವಿರಾಟ್‌ ಕೊಹ್ಲಿ ಬರೆದಿದ್ದಾರೆ.

3 moments from IND vs BAN 3rd ODI that created buzz among fans

ರೋಹಿತ್ ಶರ್ಮಾ ದಾಖಲೆ ಮುರಿದ ವಿರಾಟ್‌ ಕೊಹ್ಲಿ: ಅಂತಿಮ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಬಾಂಗ್ಲಾದೇಶ ತಂಡದ ವಿರುದ್ಧ ಅತಿ ಹೆಚ್ಚು ರನ್‌ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದರು. ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ 15 ಪಂದ್ಯಗಳಿಂದ 4 ಶತಕಗಳ ನೆರವಿನಿಂದ 807 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ 15 ಪಂದ್ಯಗಳಲ್ಲಿ 738 ರನ್ ಗಳಿಸಿದ್ದರು.

ಸಚಿನ್ ತೆಂಡೂಲ್ಕರ್‌ ದಾಖಲೆಯೂ ಧೂಳಿಪಟ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಾಂಗ್ಲಾದೇಶ ವಿರುದ್ಧ ತಮ್ಮ ಬ್ಯಾಟಿಂಗ್ ವೈಭವ ಮೆರೆದು ತಮ್ಮ ಕ್ರಿಕೆಟ್ ಜೀವನದಲ್ಲಿ 1316 ರನ್ ಗಳಿಸಿದ್ದರು. ಆದರೆ, ಚಿತ್ತೋಗ್ರಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಇದುವರೆಗೂ ಆಡಿರುವ 25 ಪಂದ್ಯಗಳಿಂದ 1392 ರನ್ ಗಳಿಸಿದರು. ಆ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು, ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು.

India vs Bangladesh, 3rd ODI Highlights: India Thrash Bangladesh By 227  Runs, Lose Three-Match Series 1-2 | Cricket News

ವೇಗದ 44 ಶತಕ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಗಳಿಸಿದ ಏಕೈಕ ಬ್ಯಾಟರ್ ಎಂಬ ಖ್ಯಾತಿಯು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದ 44ನೇ ಶತಕವನ್ನು 418ನೇ ಪಂದ್ಯದಲ್ಲಿ ಸಿಡಿಸಿದ್ದರು. ಆದರೆ, ರನ್ ಮಶೀನ್ ಖ್ಯಾತಿಯ ವಿರಾಟ್ ಕೊಹ್ಲಿ 256 ಪಂದ್ಯದಲ್ಲೇ 44 ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮಹತ್ತರ ದಾಖಲೆ ಮುರಿದರು. ಆ ಮೂಲಕ ಭಾರತದ ಪರ ಅತಿ ವೇಗದ 44ನೇ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಜಯಸೂರ್ಯ-ತರಂಗ ಜೋಡಿಯ ದಾಖಲೆ ಮುರಿದ ಇಶಾನ್- ಕೊಹ್ಲಿ ಜೋಡಿ: ಶ್ರೀಲಂಕಾ ಕ್ರಿಕೆಟ್ ಕಂಡ ಶ್ರೇಷ್ಠ ಆರಂಭಿಕ ಜೋಡಿ ಸನತ್ ಜಯಸೂರ್ಯ ಹಾಗೂ ಉಪುಲ್ ತರಂಗ. ಈ ಜೋಡಿಯು 2006ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ 8.98 ರ ಸರಾಸರಿಯಲ್ಲಿ 31.5 ಓವರ್ ಗಳಲ್ಲಿ 286 ರನ್ ಗಳಿಸಿತ್ತು. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಎರಡನೇ ವಿಕೆಟ್‌ಗೆ 9.15 ರ ಸರಾಸರಿಯಲ್ಲಿ 290 ರನ್‌ಗಳ ಜೊತೆಯಾಟವಾಡಿತು. ಆ ಮೂಲಕ ಅತಿ ಹೆಚ್ಚು ಸರಾಸರಿಯಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಜೋಡಿ ಎಂಬ ದಾಖಲೆಗೆ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಭಾಜನವಾಯಿತು.

ಅತಿ ಹೆಚ್ಚು ರನ್‌ಗಳ ಜೊತೆಯಾಟ: ಮೂರನೇ ಏಕದಿನ ಪಂದ್ಯದಲ್ಲಿ 290 ರನ್‌ ಜೊತೆಯಾಟವಾಡುವ ಮೂಲಕ ಇಶಾನ್‌ ಕಿಶನ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ, 1998ರಲ್ಲಿ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ಜೋಡಿ(252 ರನ್‌) ಯನ್ನು ಮುರಿಯಿತು. 1997 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಜರುದ್ದೀನ್ ಹಾಗೂ ಅಜೇಯ್ ಜಡೇಜಾ 223 ರನ್ ಸಿಡಿಸಿತ್ತು. 2009ರಲ್ಲಿ ಶ್ರೀಲಂಕಾ ವಿರುದ್ಧ ವಿರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ 221 ರನ್ ಹಾಗೂ 2017 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ 219 ರನ್ ಗಳಿಸಿ ಜೊತೆಯಾಟವಾಡಿ ಗಮನ ಸೆಳೆದಿತ್ತು.

 

Ind Vs Bng 3rd Odi 5 Records Broken By Virat Kohli During His 91-Ball 113 Against Bangladesh.