ಬ್ರೇಕಿಂಗ್ ನ್ಯೂಸ್
22-02-23 01:31 pm Source: news18 ಕ್ರೀಡೆ
ಮುಂಬೈನ ಸಾಂತಾಕ್ರೂಜ್ ಪ್ರದೇಶದ ಹೋಟೆಲ್‌ನ ಹೊರಗೆ ಬುಧವಾರ ರಾತ್ರಿ ಸೆಲ್ಫಿಗಾಗಿ ನಡೆದ ವಿವಾದದ ನಂತರ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಇದೀಗ ನಟಿ ಸಪ್ನಾ ಗಿಲ್ (Sapna Gill) ಕೇಸ್ ದಾಖಲಿಸಿದ್ದಾರೆ. ಈ ವಿವಾದದಲ್ಲಿ ಮೊದಲು ಪೃಥ್ವಿ ಶಾ ನಟಿಯ ವಿರುದ್ಧ ಕೇಸ್ ದಾಖಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ನಟಿ ಸಪ್ನಾ ಗಿಲ್, ಇದೀಗ ಪೃಥ್ವಿ ಶಾ ವಿರುದ್ಧವೇ ಕೇಸ್ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ ನಟಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ 10 ಕ್ಕೂ ಹೆಚ್ಚು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಅದರಲ್ಲಿ ಪ್ರಮುಖವಾಗಿ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪ ಹೊರಿಸಿದ್ದಾರೆ. ಹೀಗಾಗಿ ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಐಪಿಸಿ ಸೆಕ್ಷನ್ 34, 120ಎ, 144, 146, 148, 149, 323, 324, 351, 354 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಷ್ಟಕ್ಕೂ ಏನಿದು ಪ್ರಕರಣ ಎಂದು ನೋಡುವುದಾದರೆ, ಬುಧವಾರ ರಾತ್ರಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ಸಾಂತಾಕ್ರೂಜ್ ಪ್ರದೇಶದ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಸಪ್ನಾ ಗಿಲ್ ಕೂಡ ಅದೇ ಹೋಟೆಲ್‌ನಲ್ಲಿ ತನ್ನ ಕೆಲವು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ಸಪ್ನಾ ತನ್ನ ಸ್ನೇಹಿತರ ಜೊತೆ ಸೆಲ್ಫಿಗೆ ಪೃಥ್ವಿ ಶಾ ಬಳಿ ವಿನಂತಿಸಿದ್ದಾಳೆ. ಪೃಥ್ವಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಇದರ ಹೊರತಾಗಿಯೂ, ಸಪ್ನಾ ಮತ್ತು ಅವರ ಸಹಚರರು ಪೃಥ್ವಿಯ ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಈ ಬಗ್ಗೆ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ವಿವಾದ ಶುರುವಾಗಿದೆ.ಆ ವೇಳೆ ಹೊಟೇಲ್ ಮ್ಯಾನೇಜರ್ ಮಾತನಾಡಿ ಸಮಾಧಾನಪಡಿಸಿ ಸಪ್ನಾ ಹಾಗೂ ಆಕೆಯ ಸ್ನೇಹಿತರನ್ನು ಹೋಟೆಲ್ ನಿಂದ ಹೊರ ಹಾಕಿದ್ದಾರೆ. ಇದಾದ ಬಳಿಕ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಹೋಟೆಲ್‌ನಿಂದ ಹೊರಬಂದ ತಕ್ಷಣ ಪೃಥ್ವಿ ಶಾ ಮತ್ತು ಅವರ ಸ್ನೇಹಿತನ ಕಾರನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಪ್ನಾ ಗಿಲ್ ಮೂಲತಃ ಚಂಡೀಗಢದವರಾಗಿದ್ದಾರೆ ಮತ್ತು ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿಯಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಪ್ನಾ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನೃತ್ಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Criminal complaint registered against Prithvi Shaw, Ashish Surendra Yadav, Brijesh & others (not known to complainant) for illegal acts of molesting and outraging the modesty of Sapna Gill u/s 34, 120b, 144, 146, 148, 149, 323, 324, 351, 354 & 509 of IPC: Adv Ali Kaashif Deshmukh pic.twitter.com/OQIEWicr4u
— ANI (@ANI) February 21, 2023
Sapna Gill filed a case against Prithvi Shaw.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm