ಸೆಹ್ವಾಗ್​ ದಾಖಲೆ ಮುರಿದ ಗಿಲ್​! ಪ್ರಿನ್ಸ್ ಅಬ್ಬರಕ್ಕೆ ರೆಕಾರ್ಡ್ಸ್​ಗಳೆಲ್ಲಾ ಉಡೀಸ್​

27-05-23 02:30 pm       Source: news18   ಕ್ರೀಡೆ

ಪ್ರಿನ್ಸ್ ಗಿಲ್ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಗುಜರಾತ್ ನ ಆರಂಭಿಕ ಆಟಗಾರ ಶುಭಮನ್ ಗಿಲ್ ಐಪಿಎಲ್ 2023ರ ಸೀಸನ್ ನಲ್ಲಿ ಭರ್ಜರಿಯಾಗಿ ಅಬ್ಬರಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಸೀಸನ್ ನಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದು, ಸಾಲು ಸಾಲು ದಾಖಲೆಗಳನ್ನು ಬ್ರೇಕ್​ ಮಾಡುತ್ತಿದ್ದಾರೆ. ಕ್ವಾಲಿಫೈಯರ್ 2ರಲ್ಲಿ ಟೀಂ ಇಂಡಿಯಾದ ಪ್ರಿನ್ಸ್ ಗಿಲ್ ಭರ್ಜರಿ ಶತಕ ಸಿಡಿಸಿದರು. ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕ ಮುಂಬೈ ಬೌಲರ್ ಗಳನ್ನು ಬೆಚ್ಚಿಬೀಳಿಸಿದರು. ಟೀಂ ಇಂಡಿಯಾದ ಭವಿಷ್ಯದ ಆಟಗಾರ ಗಿಲ್ 60 ಎಸೆತಗಳಲ್ಲಿ 129 ರನ್ ಗಳಿಸಿದರು. ಈ ವೇಳೆ 7 ಬೌಂಡರಿ, 10 ಸಿಕ್ಸರ್ ಸಿಡಿಸಿದರು.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಗಿಲ್ ಅವರ ಮೂರನೇ ಶತಕವಾಗಿದೆ. ಈ ಶತಕದ ಮೂಲಕ ತಮ್ಮ ಖಾತೆಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಒಂದೇ ಋತುವಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಶುಭಮನ್ ಗಿಲ್. 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ ಜೋಸ್ ಬಟ್ಲರ್ ಕಳೆದ ವರ್ಷ 4 ಶತಕ ಸಿಡಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 800+ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್. ಇದಕ್ಕೂ ಮುನ್ನ 2016ರ ಋತುವಿನಲ್ಲಿ ವಿರಾಟ್ ಕೊಹ್ಲಿ 976 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

 ಈ ಬಾರಿಯ ಐಪಿಎಲ್ ಋತುವಿನಲ್ಲಿ ಗಿಲ್ ಅವರ ಮೂರನೇ ಶತಕವಾಗಿದೆ. ಈ ಶತಕದ ಮೂಲಕ ತಮ್ಮ ಖಾತೆಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಒಂದೇ ಋತುವಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಶುಭಮನ್ ಗಿಲ್. 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ ಜೋಸ್ ಬಟ್ಲರ್ ಕಳೆದ ವರ್ಷ 4 ಶತಕ ಸಿಡಿಸಿದ್ದರು.

 ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ 800+ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್. ಇದಕ್ಕೂ ಮುನ್ನ 2016ರ ಋತುವಿನಲ್ಲಿ ವಿರಾಟ್ ಕೊಹ್ಲಿ 976 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್ 2023 ರ ಋತುವಿನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಡ್ವೈನ್​ ಕಾನ್ವೆ ಅವರು ಶುಭಮನ್ ಗಿಲ್​ಗಿಂತ ಸುಮಾರು 200 ರನ್ ದೂರದಲ್ಲಿದ್ದಾರೆ. ಅಂತಿಮ ಪಂದ್ಯದಲ್ಲಿ ಕಾನ್ವೆ ಶತಕ ಬಾರಿಸಿದರೂ ಗಿಲ್ ಆರೆಂಜ್ ಕ್ಯಾಪ್ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಎರಡನೇ ಭಾರತೀಯ ಎಂಬ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಗಿಲ್ 129 ರನ್ ಗಳಿಸಿದ್ದರು. ಕೆಎಲ್ ರಾಹುಲ್ 132 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರಿಷಬ್ ಪಂತ್ 128 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಗಿಲ್ ಪ್ಲೇ ಆಫ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2014ರಲ್ಲಿ ಸೆಹ್ವಾಗ್ 122 ರನ್ ಗಳಿಸಿದ್ದರು. ಇದೀಗ ಆ ದಾಖಲೆಯನ್ನು ಗಿಲ್ ಮುರಿದಿದ್ದಾರೆ.

I think we have a great bowling attack...': Shubman Gill on Upcoming GT vs  CSK Playoff Match | cricket.one - OneCricket

GT vs MI Match Report: Shubman Gill's Carnage Helps Gujarat Titans Enter  Their Second Consecutive IPL Final

ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಗಿಲ್ ನಿರ್ಮಿಸಿದ್ದಾರೆ. ಮುಂಬೈ ವಿರುದ್ಧ ಗಿಲ್ 10 ಸಿಕ್ಸರ್ ಬಾರಿಸಿದ್ದರು. 2014 ರಲ್ಲಿ ಸಹಾ ಕೆಕೆಆರ್ ವಿರುದ್ಧ 8 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಿನ್ಸ್ ಗಿಲ್ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಐಪಿಎಲ್ ಋತುವಿನಲ್ಲಿ ಗಿಲ್ 111 ಬೌಂಡರಿಗಳನ್ನು ಬಾರಿಸಿದ್ದಾರೆ. ಆದರೆ 128 ಬೌಂಡರಿಗಳೊಂದಿಗೆ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ.

ipl final gt vs csk shubman gill records with his brilliant century.