IPL 2023 Final; CSK vs GT ನಡುವೆ ಐಪಿಎಲ್‌ ಫೈನಲ್ ಗೆಲ್ಲುವ ನೆಚ್ಚಿನ ತಂಡ ಯಾವುದು?

29-05-23 01:35 pm       Source: Vijayakarnataka   ಕ್ರೀಡೆ

ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ತಂಡಗಳ ನಡುವಣ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಬೇಕಾಗಿತ್ತು. ಆದರೆ, ಇದಕ್ಕೆ ಮಳೆ ಅಡ್ಡಿ ಮಾಡಿತ್ತು. ಈ ಕಾರಣದಿಂದಾಗಿ ಫೈನಲ್‌ ಪಂದ್ಯಕ್ಕೆ ಸೋಮವಾರ ಮೀಸಲು ದಿನವನ್ನು ಪ್ರಕಟಿಸಲಾಗಿತ್ತು.

ಅಹಮದಾಬಾದ್‌:ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ತಂಡಗಳ ನಡುವಣ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯ ಸೋಮವಾರ ಸಂಜೆ 07: 30ಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದ ಹಾಗೆ ಭಾನುವಾರವೇ ಫೈನಲ್‌ ಪಂದ್ಯ ನಡೆಯಬೇಕಾಗಿತ್ತು. ಆದರೆ, ಮಳೆಯಿಂದ ಪಂದ್ಯ ರದ್ದಾದ ಪರಿಣಾಮ ಫೈನಲ್‌ಗೆ ಮೀಸಲು ದಿನವನ್ನು ಪ್ರಕಟಿಸಲಾಗಿದೆ.

ಭಾನುವಾರ ಪಂದ್ಯ ರದ್ದಾಗಿದ್ದರಿಂದ ಅಭಿಮಾನಿಗಳಷ್ಟೇ ಅಲ್ಲ, ಎರಡೂ ತಂಡಗಳ ಆಟಗಾರರರಿಗೂ ಭಾರಿ ನಿರಾಶೆಯಾಗಿತ್ತು. ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡವನ್ನು ಮಣಿಸಿ 5ನೇ ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್ ಎದುರು ನೋಡುತ್ತಿದೆ. ಆದರೆ, ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಎರಡನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.

CSK vs GT

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಭಾನುವಾರವೇ ಉಭಯ ತಂಡಗಳ ನಡುವಣ ಫೈನಲ್‌ ಪಂದ್ಯ ನಡೆದು, ಇಷ್ಟೊತ್ತಿಗೆ ಒಂದು ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿರುತ್ತಿತ್ತು. ಆದರೆ, ಇದಕ್ಕೆ ವರುಣ ದೇವ ಅವಕಾಶ ನೀಡಿರಲಿಲ್ಲ. ಭಾನುವಾರ ಸತತವಾಗಿ ಮಳೆ ಸುರಿದ ಪರಿಣಾಮ ಕನಿಷ್ಠ ಪಂದ್ಯದ ಟಾಸ್‌ ಕೂಡ ನಡೆದಿರಲಿಲ್ಲ. ಸೋಮವಾರ ಫೈನಲ್‌ ಪಂದ್ಯ ನಡೆಯಲಿದ್ದು, ಮಳೆ ಇಲ್ಲವಾದರೆ ಉಭಯ ತಂಡಗಳ ನಡುವೆ ಹೈಸ್ಕೋರಿಂಗ್ ಪಂದ್ಯ ಇದಾಗುವ ಸಾಧ್ಯತೆ ಇದೆ.

ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟನ್ಸ್ ತಂಡಗಳ ನಡುವಣ ಫೈನಲ್ ಪಂದ್ಯಕ್ಕೆ ಸೋಮವಾರವೂ ಮಳೆ ಅಡ್ಡಿ ಉಂಟು ಮಾಡಿದರೆ, ಅಂಪೈರ್‌ಗಳು ಕನಿಷ್ಠ ಓವರ್‌ಗಳೊಂದಿಗೆ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಿದ್ದಾರೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಆಗ ಲೀಗ್‌ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಕಲೆ ಹಾಕಿರುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಈ ಲೆಕ್ಕಾಚಾರ ನಡೆದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ 20 ಅಂಕಕಲೆ ಹಾಕಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡ ಸತತ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ.

GT vs CSK, IPL 2023 Final Reserve Day: Timing, weather conditions & more -  BusinessToday

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳ ಸ್ನೇಹಿ ಪಿಚ್‌ ಆಗಿದೆ. 2023ರ ಐಪಿಎಲ್‌ ಫೈನಲ್‌ ಹೈಸ್ಕೋರಿಂಗ್ ಪಂದ್ಯವಾಗುವ ಸಾಧ್ಯತೆ ಇದೆ. ಈ ಅಂಗಣದಲ್ಲಿ 200 ರನ್‌ ಗಳಿಸಿದರೂ ಸುಲಭವಾಗಿ ಚೇಸ್‌ ಮಾಡಬಹುದು. ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಪಿಚ್‌ನಲ್ಲಿ ಆರಂಭದಲ್ಲಿ ವೇಗಿಗಳು ಸ್ವಲ್ಪ ಸ್ವಿಂಗ್ ಪಡೆದರೂ ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.

CSK vs GT Live Streaming: IPL 2023 Final: Live streaming details of the  highly anticipated Gujarat Titans vs Chennai Super Kings match - The  Economic Times

ಗುಜರಾತ್ ಟೈಟನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿ.ಕೀ), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್/ ನಾಯಕ), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್
ದಿನಾಂಕ: ಮೇ 29, 2023, ಸೋಮವಾರ
ಪಂದ್ಯ ಆರಂಭ: ಸಂಜೆ 7.30ಕ್ಕೆ
ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ.

ipl 2023 final: csk vs gt final match time, when will chennai super kings vs gujarat titans match start today.