'ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ'-ಗೆಲುವಿನ ಬಳಿಕ ಭಾವುಕರಾದ ಎಂಎಸ್‌ ಧೋನಿ!

30-05-23 02:20 pm       Source: Vijayakarnataka   ಕ್ರೀಡೆ

MS Dhoni On his Retirement: ಸೋಮವಾರ ಮಳೆಯ ಹೊರತಾಗಿಯೂ 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಫೈನಲ್‌ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್ 5 ವಿಕೆಟ್‌ಗಳಿಂದ ಗುಜರಾತ್‌ ಟೈಟನ್ಸ್ ತಂಡವನ್ನು ಮಣಿಸಿತು.

ಅಹಮದಾಬಾದ್‌: ಐಪಿಎಲ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲು ಇದು ಅತ್ಯುತ್ತಮ ಸಮಯವಾಗಿದೆ. ಆದರೆ, ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯದಿಂದ ಮತ್ತೊಂದು ಆವೃತ್ತಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಇದಕ್ಕಾಗಿ 9 ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡುತ್ತನೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಎಂಎಸ್‌ ಧೋನಿ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2023ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್ 5 ವಿಕೆಟ್‌ಗಳಿಂದ ಗುಜರಾತ್‌ ಟೈಟನ್ಸ್ ತಂಡವನ್ನು ಮಣಿಸಿತು. ಆ ಮೂಲಕ ಐದನೇ ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಹಾಗೂ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.

Best time to announce my retirement but...': MS Dhoni makes hearts stop |  Cricket - Hindustan Times

ಗೆಲುವಿನ ಬಳಿಕ ಮಾತನಾಡಿದ ಎಂಎಸ್‌ ಧೋನಿ, "ನಿವೃತ್ತಿ ಬಗೆಗಿನ ಉತ್ತರಕ್ಕಾಗಿ ಕಾಯುತ್ತಿದ್ದೀರಾ? ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋದರೂ ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯ ಅದ್ಭುತವಾಗಿತ್ತು. "ತುಂಬಾ ಧನ್ಯವಾದಗಳು" ಎಂದು ಹೇಳುವುದು ಸುಲಭ, ಆದರೆ ನನಗೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಠಿಣ ಪರಿಶ್ರಮ ಪಟ್ಟು ಮರಳುವುದು ಹಾಗೂ ಕನಿಷ್ಠ ಒಂದು ಆವೃತ್ತಿಯನ್ನು ಆಡುವುದು. ಇದೆಲ್ಲಾ ಸಂಗತಿಗಳು ನನ್ನ ದೇಹವನ್ನು ಅವಲಂಬಿಸಿರುತ್ತದೆ. ಮುಂದಿನ 6 ರಿಂದ 7 ತಿಂಗಳುಗಳ ಅವಧಿಯಲ್ಲಿ ಈ ವಿಷಯವನ್ನು ಅಂತಿಮಗೊಳಿಸುತ್ತೇನೆ. ಇನ್ನೊಂದು ಆವೃತ್ತಿ ಆಡಲು ಬಯಸುತ್ತಿರುವುದು ನನ್ನ ಕಡೆಯಿಂದ ನೀಡುತ್ತಿರುವ ಉಡುಗೊರೆ, ಆದರೆ ಇದು ಸುಲಭವಲ್ಲ. ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ಎಲ್ಲರಿಗಾಗಿ ಈ ಕೆಲಸವನ್ನು ನಾನು ಮಾಡಬೇಕಾಗಿದೆ," ಎಂದು ಭಾವುಕರಾದರು.

IPL 2023 | 'Best time to announce retirement, but harder thing is to work  hard for next season,' Says M.S. Dhoni after win - The Hindu

ಡಿಎಲ್‌ಎಸ್ ನಿಯಮಯದ ಪ್ರಕಾರ 171 ರನ್ ಗುರಿ ಹಿಂಬಾಲಿಸಿದ ಸಿಎಸ್‌ಕೆ ಪರ ನಾಯಕ ಎಂ.ಎಸ್.ಧೋನಿ ನಿರಾಶೆ ಮೂಡಿಸಿದರು. ತಮ್ಮ 250ನೇ ಐಪಿಎಲ್ ಪಂದ್ಯದಲ್ಲಿ ಗೋಲ್ಡನ್ ಡಕ್‌ಔಟ್‌ ಆಗಿ ಅಪಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. 20ನೇ ಓವರ್‌ನಲ್ಲಿ ರವೀಂದ್ರ ಜಡೇಜಾ, ಜಿಟಿ ವೇಗಿ ಮೋಹಿತ್ ಶರ್ಮಾ (36 ಕ್ಕೆ 3) ಎಸೆದ ಪಂದ್ಯದ ಕೊನೆಯ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ಸಿಎಸ್‌ಕೆಗೆ ಗೆಲುವು ತಂದುಕೊಟ್ಟರು. ಆ ಮೂಲಕ 5ನೇ ಬಾರಿ ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಎಂಎಸ್ ಧೋನಿ ಬಳಗ ಸರಿಗಟ್ಟಿತು.

MS Dhoni IPL Comeback Hint Viral Video IPL 2023 Indian Premier League Best  CSK Chennai Super Kings

"ಇದು ನನ್ನ ವೃತ್ತಿ ಜೀವನದ ಅಂತಿಮ ಘಟ್ಟವಾಗಿದ್ದರಿಂದ ನೀವು ಭಾವುಕರಾಗಿದ್ದೀರಿ. ಇಲ್ಲಿ ಮೊದಲ ಪಂದ್ಯವಾಡಿದ ದಿನ ನಾನು ಅಂಗಣಕ್ಕೆ ಆಗಮಿಸುತ್ತಿದ್ದಾಗ ಎಲ್ಲರೂ ಧೋನಿ... ಧೋನಿ ಎಂದು ನನ್ನ ಹೆಸರು ಕೂಗುತ್ತಿದ್ದರು. ಈ ವೇಳೆ ನನ್ನ ಕಣ್ಣಲ್ಲಿ ನೀರು ತುಂಬಿತ್ತು ಹಾಗೂ ಡಗೌಟ್‌ನಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದೆ. ಇದನ್ನು ಆನಂದಿಸಬೇಕೆಂದು ನನಗೆ ಮನವರಿಕೆಯಾಯಿತು. ಚೆನ್ನೈನಲ್ಲಿಯೂ ಇದೇ ರೀತಿ ಆಯಿತು. ಮತ್ತೆ ಕಮ್‌ಬ್ಯಾಕ್‌ ಮಾಡಿ ಆಡಲು ಬಯಸುತ್ತೇನೆ. ನಾನು ಹೇಗಿದ್ದರೂ ಅವರು ನನ್ನನ್ನು ಪ್ರೀತಿಸುತ್ತಾರೆ," ಎಂದು ಎಂಎಸ್‌ ಧೋನಿ ಹೇಳಿದ್ದಾರೆ.

ipl 2023 this is the best time to announce my retirement but ms dhoni on his retirement after win against gt.