IND vs AUS: ಹಾರ್ದಿಕ್ ಪಾಂಡ್ಯ ಎಲ್ಲಿದ್ದಾರೆ? WTC ಫೈನಲ್​ನಲ್ಲಿ ಹುಟ್ಟುಕೊಂಡಿತು ಹೊಸ ಪ್ರಶ್ನೆ

09-06-23 01:56 pm       Source: news18   ಕ್ರೀಡೆ

World Test Championship Final: ಹಾರ್ದಿಕ್​ ಪಾಂಡ್ಯ ಅವರು ತಾವೂ ಇನ್ನೂ ಸಹ ಟೆಸ್ಟ್​ ಮಾದರಿಗೆ ಸೆಟ್​ ಆಗಿಲ್ಲ. ನಾನು ಯಾವಾಗ ಸಂಪೂರ್ಣವಾಗಿ ಟೆಸ್ಟ್​ ಆಡಲು ಸಿದ್ದನಾಗುತ್ತೇನೋ ಅಂದು ಖಂಡಿತವಾಗಿಯೂ ಟೆಸ್ಟ್​ ಕ್ರಿಕೆಟ್​ ಆಡುತ್ತೇನೆ ಎಂದಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಈಗಾಗಲೇ ಆರಂಭವಾಗಿದ್ದು, 5 ದಿನಗಳ ಪಂದ್ಯದಲ್ಲಿ ಈಗಾಗಲೇ 2 ದಿನ ಮುಗಿದಿದೆ. ಈ ವೇಳೆ ಆಸೀಸ್​ ಪರ ಸ್ಟೀವ್​ ಸ್ಮಿತ್​ ಮತ್ತು ಟ್ರಾವಿಸ್ ಹೆಡ್​ ಭರ್ಜರಿ ಶತಕ ಗಳಿಸಿದ್ದು ದಿನದ ಹೈಲೇಟ್​ ಆಗಿತು. ಇದೇ ವೇಳೆ ಭಾರತದ ಕಳಪೆ ಬೌಲಿಂಗ್ ನೋಡಿ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಹಾರ್ದಿಕ್ ಪಾಂಡ್ಯ ಅವರನ್ನು ನೆನಪಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಕಳಪೆ ಸ್ಥಿತಿಯನ್ನು ಗಮನಿಸಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಕಾಮೆಂಟರಿ ವೇಳೆ, "ಶಾರ್ದೂಲ್ ಠಾಕೂರ್ ಆಲ್ ರೌಂಡರ್ ಜೊತೆಗೆ ಶ್ರೇಷ್ಠ ಬೌಲರ್.

ಭಾರತ ತಂಡದಲ್ಲಿ ಜಡೇಜಾ, ಅಶ್ವಿನ್ ಮತ್ತು ಅಕ್ಷರ್ ಪಟೇಲ್. ಅವರು ಭಾರತೀಯ ಪರಿಸ್ಥಿತಿಗಳಲ್ಲಿ ಸಂಪೂರ್ಣ ಆಲ್‌ರೌಂಡರ್ ಕೂಡ ಆಗಿದ್ದಾರೆ. ಆದರೆ ಹೊರಗೆ ನಿಮಗೆ ಸೀಮರ್ ಆಲ್‌ರೌಂಡರ್ ಬೇಕು ಎನ್ನುತ್ತಾ ನಂತರ ಹಾರ್ದಿಕ್ ಪಾಂಡ್ಯ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಂಟಿಂಗ್, "ಅವರಿಗೆ (ಹಾರ್ದಿಕ್) ಅವರು ಈ ರೀತಿಯ ಆಟವನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದಾರೆ. ಅವರ ದೇಹವನ್ನು ಈ ಸ್ವರೂಪಕ್ಕಾಗಿ ತಯಾರಿಸಲಾಗಿಲ್ಲ. ತಂಡವನ್ನು ಸಮತೋಲನಗೊಳಿಸಲು, ನೀವು ಕೇವಲ ಒಂದು ಪಂದ್ಯಕ್ಕೆ ಆಯ್ಕೆ ಮಾಡಬಾರದು ಎಂದು ಹೇಳಿದ್ದಾರೆ.

 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಈಗಾಗಲೇ ಆರಂಭವಾಗಿದ್ದು, 5 ದಿನಗಳ ಪಂದ್ಯದಲ್ಲಿ ಈಗಾಗಲೇ 2 ದಿನ ಮುಗಿದಿದೆ. ಈ ವೇಳೆ ಆಸೀಸ್​ ಪರ ಸ್ಟೀವ್​ ಸ್ಮಿತ್​ ಮತ್ತು ಟ್ರಾವಿಸ್ ಹೆಡ್​ ಭರ್ಜರಿ ಶತಕ ಗಳಿಸಿದ್ದು ದಿನದ ಹೈಲೇಟ್​ ಆಗಿತು.

 ಇದೇ ವೇಳೆ ಭಾರತದ ಕಳಪೆ ಬೌಲಿಂಗ್ ನೋಡಿ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಹಾರ್ದಿಕ್ ಪಾಂಡ್ಯ ಅವರನ್ನು ನೆನಪಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಕಳಪೆ ಸ್ಥಿತಿಯನ್ನು ಗಮನಿಸಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ಕಾಮೆಂಟರಿ ವೇಳೆ, "ಶಾರ್ದೂಲ್ ಠಾಕೂರ್ ಆಲ್ ರೌಂಡರ್ ಜೊತೆಗೆ ಶ್ರೇಷ್ಠ ಬೌಲರ್.

ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ಒಟ್ಟು 11 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ ಒಟ್ಟು 532 ರನ್‌ಗಳು ಬಂದಿವೆ. ಅವರ ಸರಾಸರಿ 30 ಕ್ಕಿಂತ ಹೆಚ್ಚಿದ್ದರೆ, ಸ್ಟ್ರೈಕ್ ರೇಟ್ 73 ಆಗಿದೆ. ಟೆಸ್ಟ್ ಪಂದ್ಯದಲ್ಲೂ ಹಾರ್ದಿಕ್ ಶತಕ ಸಿಡಿಸಿದ್ದಾರೆ. ಇದು 2017 ರಲ್ಲಿ ಶ್ರೀಲಂಕಾ ವಿರುದ್ಧ ಶತಕದ ಆಟವಾಡಿದ್ದರು. ಟೆಸ್ಟ್‌ನಲ್ಲಿ ಅವರ ಬೌಲಿಂಗ್ ದಾಖಲೆಯೂ ಉತ್ತಮವಾಗಿದೆ. ಇದುವರೆಗೆ 11 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಟೆಸ್ಟ್ ನಲ್ಲಿ ಒಮ್ಮೆ ಮಾತ್ರ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

 ಇದಕ್ಕೆ ಪ್ರತಿಕ್ರಿಯಿಸಿದ ಪಾಂಟಿಂಗ್, "ಅವರಿಗೆ (ಹಾರ್ದಿಕ್) ಅವರು ಈ ರೀತಿಯ ಆಟವನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದಾರೆ. ಅವರ ದೇಹವನ್ನು ಈ ಸ್ವರೂಪಕ್ಕಾಗಿ ತಯಾರಿಸಲಾಗಿಲ್ಲ. ತಂಡವನ್ನು ಸಮತೋಲನಗೊಳಿಸಲು, ನೀವು ಕೇವಲ ಒಂದು ಪಂದ್ಯಕ್ಕೆ ಆಯ್ಕೆ ಮಾಡಬಾರದು ಎಂದು ಹೇಳಿದ್ದಾರೆ. ಭಾರತ ತಂಡದಲ್ಲಿ ಜಡೇಜಾ, ಅಶ್ವಿನ್ ಮತ್ತು ಅಕ್ಷರ್ ಪಟೇಲ್. ಅವರು ಭಾರತೀಯ ಪರಿಸ್ಥಿತಿಗಳಲ್ಲಿ ಸಂಪೂರ್ಣ ಆಲ್‌ರೌಂಡರ್ ಕೂಡ ಆಗಿದ್ದಾರೆ. ಆದರೆ ಹೊರಗೆ ನಿಮಗೆ ಸೀಮರ್ ಆಲ್‌ರೌಂಡರ್ ಬೇಕು ಎನ್ನುತ್ತಾ ನಂತರ ಹಾರ್ದಿಕ್ ಪಾಂಡ್ಯ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಒಮ್ಮೆ ಹಾರ್ದಿಕ್​ ಪಾಂಡ್ಯ ಅವರು ತಾವೂ ಇನ್ನೂ ಸಹ ಟೆಸ್ಟ್​ ಮಾದರಿಗೆ ಸೆಟ್​ ಆಗಿಲ್ಲ. ನಾನು ಯಾವಾಗ ಸಂಪೂರ್ಣವಾಗಿ ಟೆಸ್ಟ್​ ಆಡಲು ಸಿದ್ದನಾಗುತ್ತೇನೋ ಅಂದು ಖಂಡಿತವಾಗಿಯೂ ಟೆಸ್ಟ್​ ಕ್ರಿಕೆಟ್​ ಆಡುತ್ತೇನೆ ಎಂದಿದ್ದರು.

WTC final 2023 nasser hussain questions hardik pandya absence from india test team.