WTC 2023 Final: ಟೀಂ ಇಂಡಿಯಾ ಸೋಲಿಗೆ ಸಿಟ್ಟಾದ ಸಚಿನ್​, ಕ್ರಿಕೆಟ್​ ದೇವರ ಟ್ವೀಟ್​ ವೈರಲ್​

12-06-23 11:32 am       Source: News18 Kannada   ಕ್ರೀಡೆ

ಟೀಂ ಇಂಡಿಯಾ ಅವರನ್ನು ನಿರ್ಲಕ್ಷಿಸಿ ಕೈ ಸುಟ್ಟುಕೊಂಡಿತು. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಯನ್ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದನ್ನು ನೋಡಿದ ಬಳಿಕ ಈ ವಿಚಾರ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಐದನೇ ದಿನದ ಮೊದಲ ಸೆಷನ್ ನಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಪಡೆದು 209 ರನ್ ಗಳ ಬೃಹತ್ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಆಯಿತು. ಭಾರತ ಮತ್ತೊಮ್ಮೆ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಟ್ರೋಫಿಗೆ ತೃಪ್ತಿಪಟ್ಟಿತು. 2021ರಲ್ಲಿ ನಡೆದ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಕಿವೀಸ್ ವಿರುದ್ಧ ಸೋತಿತ್ತು.

ಈ ಪಂದ್ಯದ ಬಗ್ಗೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದು, ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಏಕೆ ಆಡಿಲ್ಲ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮೊದಲ ದಿನದ ಆಟದಲ್ಲಿ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರ ಜೊತೆಯಾಟವು ಪಂದ್ಯವನ್ನು ಆಸ್ಟ್ರೇಲಿಯಾದ ಕಡೆಗೆ ತಿರುಗಿಸಿತು. ಈ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಬೇಕಿತ್ತು. ಆದರೆ ಟೀಂ ಇಂಡಿಯಾ ಹಾಗೆ ಮಾಡಲಿಲ್ಲ. ಆದರೆ ರವಿಚಂದ್ರನ್ ಅಶ್ವಿನ್ ಅವರನ್ನು ಅಂತಿಮ ತಂಡಕ್ಕೆ ಏಕೆ ಸೇರಿಸಿಕೊಳ್ಳಲಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.

WTC Final: Sachin Tendulkar Questions R Ashwin's Exclusion From Team India  Lineup, Says THIS | Cricket News | Zee News

India vs Australia Highlights, WTC Final: AUS beat IND by 209 runs, become  1st team to win all major ICC tournaments | Hindustan Times

ಸದ್ಯ ಅಶ್ವಿನ್ ವಿಶ್ವ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ನಂಬರ್ ಒನ್ ಬೌಲರ್ ಆಗಿದ್ದಾರೆ. ಅಶ್ವಿನ್‌ನಂತಹ ಸ್ಪಿನ್ನರ್‌ಗೆ ಅವಕಾಶ ನೀಡದಿರುವುದು ದೊಡ್ಡ ತಪ್ಪಾಗಿದೆ. ಆಸ್ಟ್ರೇಲಿಯಾದ ಬ್ಯಾಟಿಂಗ್‌ನಲ್ಲಿ 5 ಎಡಗೈ ಆಟಗಾರರಿದ್ದರು. ಈ ವಿಚಾರವನ್ನು ಟೀಂ ಇಂಡಿಯಾ ಮರೆತಂತಿದೆ ಎಂದು ಸಚಿನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಏನೇ ಹೇಳಿದರೂ ಅಕ್ಷರಶಃ ಸತ್ಯ. ಫೈನಲ್‌ನಂತಹ ಪಂದ್ಯದಲ್ಲಿ ಅಶ್ವಿನ್‌ನಂತಹ ಆಟಗಾರನನ್ನು ಪಕ್ಕಕ್ಕೆ ಬಿಟ್ಟಿರುವುದು ಟೀಂ ಇಂಡಿಯಾ ಮಾಡಿದ ದೊಡ್ಡ ತಪ್ಪು. ಅಶ್ವಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಸಹ ಮಾಡಬಲ್ಲರಾಗಿದ್ದರು. ಆದರೆ, ಟೀಂ ಇಂಡಿಯಾ ಅವರನ್ನು ನಿರ್ಲಕ್ಷಿಸಿ ಕೈ ಸುಟ್ಟುಕೊಂಡಿತು. ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಯನ್ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದನ್ನು ನೋಡಿದ ಬಳಿಕ ಈ ವಿಚಾರ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

Ind vs Aus Highlights, WTC 2023 Final Day 5: Australia defeats India by 209  runs to lift World Test Championship | Mint

Ind Vs Aus Highlights:तीसरे दिन का खेल खत्म, दूसरी पारी में ऑस्ट्रेलिया  123/4, भारत पर अब तक 296 रन की बढ़त - Ind Vs Aus Wtc Final 2023 Live Score: India  Vs

444 ರನ್‌ಗಳ ಗುರಿ ಬೆನ್ನಟ್ಟುವುದು ಸುಲಭದ ಮಾತಲ್ಲ. ಆದರೆ, ಭಾರತ ಎರಡನೇ ಇನಿಂಗ್ಸ್‌ನ್ನು ಅದ್ಭುತವಾಗಿ ಆರಂಭಿಸಿತು. ಕೊನೆಯ ದಿನ 280 ರನ್ ಗಳಿಸ ಬೇಕಿತ್ತು. ಕೊಹ್ಲಿ, ರಹಾನೆ, ಜಡೇಜಾ ಅವರಂತಹ ಬ್ಯಾಟ್ಸ್ ಮನ್ ಗಳಿದ್ದರೆ ಭಾರತ ಗೆದ್ದು ಹೊಸ ಇತಿಹಾಸ ಬರೆಯಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಕೊನೆಯ ದಿನದ ಮೊದಲ ಸೆಷನ್ ನಲ್ಲಿ ಭಾರತ ಕುಸಿದಿತ್ತು. ಕೊನೆಯ 7 ವಿಕೆಟ್‌ಗಳನ್ನು ಕೇವಲ 55 ರನ್‌ಗಳಲ್ಲಿ ಕಳೆದುಕೊಂಡಿತು. ಅನಗತ್ಯ ಹೊಡೆತಗಳಿಗೆ ಮೊರೆ ಹೋಗಿ ವಿಕೆಟ್ ಕಳೆದುಕೊಂಡು ಮತ್ತೊಮ್ಮೆ ಐಸಿಸಿ ಟ್ರೋಫಿಯಿಂದ ದೂರವಾದರು.

Ind vs Aus i cant understand exclusion of Ravichandran Ashwin says sachin Tendulkar.