IND vs WI: ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ ಪ್ರಕಟ; ಶೀಘ್ರದಲ್ಲೇ ತಂಡದ ಆಯ್ಕೆ

13-06-23 12:13 pm       Source: One India Kannada   ಕ್ರೀಡೆ

ಭಾರತ ಕ್ರಿಕೆಟ್ ತಂಡದ ಒಂದು ತಿಂಗಳ ಕಾಲದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ. ಎರಡು ಟೆಸ್ಟ್ ಪಂದ್ಯಗಳೊಂದಿಗೆ ಪ್ರವಾಸ ಆರಂಭವಾಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಿದ ನಂತರ ಭಾರತ ತಂಡಕ್ಕೆ ಸುದೀರ್ಘ ಒಂದು ತಿಂಗಳ ಕಾಲ ವಿರಾಮ ಸಿಗಲಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಶೀಘ್ರದಲ್ಲೇ ತಂಡದ ಆಯ್ಕೆ ಮಾಡಲಾಗುತ್ತದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಮಣೆ ಹಾಕಲಾಗುತ್ತದೆಯೇ ಕಾದು ನೋಡಬೇಕು.

ಮೊದಲ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಜುಲೈ 20ರಂದು ಟ್ರಿನಿಡಾಡ್‌ನಲ್ಲಿ ಶುರುವಾಗಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಐತಿಹಾಸಿಕ 100ನೇ ಟೆಸ್ಟ್ ಪಂದ್ಯ ಇದಾಗಲಿದೆ.

ಎರಡು ಟೆಸ್ಟ್ ಪಂದ್ಯಗಳ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಯು ಆರಂಭವಾಗಲಿದ್ದು, ಭಾರತ ತಂಡದ ಪ್ರವಾಸವು ಐದು ಪಂದ್ಯಗಳ ಟಿ20 ಸರಣಿಯೊಂದಿಗೆ ತೆರೆ ಬೀಳಲಿದೆ. ಒಟ್ಟು ಎಂಟು ವೈಟ್-ಬಾಲ್ ಪಂದ್ಯಗಳನ್ನು ಜುಲೈ 27ರಿಂದ ಆಗಸ್ಟ್ 13ರವರೆಗೆ ಆಡಲಾಗುತ್ತದೆ.

IPL Point Table 2023 IPL प्वाइंट टेबल 2023 टीम-वाइज रैंकिंग चेक करें!

IPL Points Table 2023: ಪಾಯಿಂಟ್ ಟೇಬಲ್ ನಲ್ಲಿ ದಿಢೀರ್ ಕುಸಿತ ಕಂಡ ಫಾಫ್ ಪಡೆ

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರಮವಾಗಿ ಜುಲೈ 27 ಮತ್ತು ಜುಲೈ 29ರಂದು ಮೊದಲ ಎರಡು ಏಕದಿನ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇನ್ನು ಆಗಸ್ಟ್ 1ರಂದು ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ. ಆ ಬಳಿಕ ಇಲ್ಲಿಂದಲೇ ಆಗಸ್ಟ್ 3ರಂದು ಮೊದಲ ಟಿ20 ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳು ಆಗಸ್ಟ್ 6 ಮತ್ತು 8ರಂದು ಗಯಾನಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಬ್ರೋವರ್ಡ್ ಕೌಂಟಿ ಸ್ಟೇಡಿಯಂನಲ್ಲಿ ಆಗಸ್ಟ್ 12ರಂದು ನಾಲ್ಕನೇ ಮತ್ತು ಆಗಸ್ಟ್ 13ರಂದು ಐದನೇ ಟಿ20 ಪಂದ್ಯಗಳೊಂದಿಗೆ ಭಾರತ ತಂಡದ ಪ್ರವಾಸವು ಮುಕ್ತಾಯಗೊಳ್ಳಲಿದೆ.

Rohit Sharma Tweet: Rohit Sharma's 'bizarre' tweets leave netizens  wondering if his account got hacked, cricketer reveals the truth - The  Economic Times

ಈ ಪ್ರವಾಸವು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಹೊಸ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಚಕ್ರದ ಆರಂಭಿಕ ಸರಣಿಯಾಗಿರಲಿದೆ. ಭಾರತ ತಂಡ ಜೂನ್ 11ರ ಭಾನುವಾರದಂದು ಮುಕ್ತಾಯಗೊಂಡ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಸತತ ಎರಡನೇ ಬಾರಿಗೆ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

Ind vs WI team Indias west Indies tour schedule announced 2 tests 3 odis and 5 t20s.