'Captain Cool' ಧೋನಿ ಎಲ್ಲರೂ ತಿಳ್ಕೊಂಡಷ್ಟು ಕೂಲ್ ಅಲ್ವಂತೆ! ಮಾಹಿಯ ಗುಟ್ಟು ರಟ್ಟು ಮಾಡಿದ ಕ್ರಿಕೆಟಿಗ

07-07-23 03:15 pm       Source: News18 Kannada   ಕ್ರೀಡೆ

‘ಕ್ಯಾಪ್ಟನ್ ಕೂಲ್’ ಅಂತ ತುಂಬಾನೇ ಹೆಸರು ಮಾಡಿದ್ದ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕನಾಗಿರುವ ಎಂ ಎಸ್ ಧೋನಿ ಎಲ್ಲರೂ ಅಂದುಕೊಂಡಷ್ಟೂ ಕೂಲ್ ಅಲ್ವಂತೆ.

ಆಟದ ಮೈದಾನದಲ್ಲಿ ಮಾಜಿ ನಾಯಕ ಧೋನಿ ಅವರ ನಡವಳಿಕೆಯ ಬಗ್ಗೆ ಅನಿರೀಕ್ಷಿತವಾಗಿ ಬಹಿರಂಗಪಡಿಸಿದ್ದಾರೆ. ಧೋನಿ ಅವರೊಂದಿಗೆ ಸುಮಾರು 150 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ಮತ್ತು ಅವರೊಂದಿಗೆ ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಂಡ ನಂತರ ಅವರು ಇತ್ತೀಚೆಗೆ ತಮ್ಮ ಸಂದರ್ಶನದಲ್ಲಿ ಈ ಮಾತನ್ನು ಹೇಳಿದರು.

ಜನಪ್ರಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ, 'ಕ್ಯಾಪ್ಟನ್ ಕೂಲ್' ಪಂದ್ಯ ನಡೆಯುವ ಸಮಯದಲ್ಲಿ ಭಾಷೆಯ ಬಳಕೆಯಲ್ಲಿ ನಿಯಮಿತವಾಗಿ ಆಕ್ರಮಣಕಾರಿಯಾಗಿದ್ದರು ಮತ್ತು ಅವರು ಹೊರ ಜಗತ್ತಿಗೆ ತೋರಿದಷ್ಟು ಸಂಯೋಜಿತರಾಗಿರಲಿಲ್ಲ ಎಂದರೆ ಅಷ್ಟೊಂದು ಸಮಾಧಾನವಾಗಿ ಅವರು ಇರುವುದಿಲ್ಲ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

Calm & Cool to Nahi Hai...': Ishant Sharma Reveals How Dhoni Schools His  Players, Even Kohli Got a Dose - News18

ಪಂದ್ಯದ ಸಮಯದಲ್ಲಿ ಮಾಹಿ ಸಹ ನಿಂದನಾತ್ಮಕ ಭಾಷೆಯನ್ನು ಬಳಸ್ತಾರಂತೆ

"ಮಾಹಿ ಭಾಯ್ ಅನೇಕ ಸಾಮರ್ಥ್ಯಗಳನ್ನು ಹೊಂದಿದ್ದಾರೆ, ಆದರೆ ಅವರು ಪಂದ್ಯದ ಸಂದರ್ಭದಲ್ಲಿ ಎಂತಹದೇ ಒತ್ತಡದ ಸನ್ನಿವೇಶಗಳಲ್ಲಿಯೂ ತುಂಬಾನೇ ಶಾಂತ ಮತ್ತು ಸಮಾಧಾನವಾಗಿರುತ್ತಾರೆ ಅಂತ ಹೇಳಿದರೆ ನಾನು ಒಪ್ಪುವುದಿಲ್ಲ.

ಏಕೆಂದರೆ, ಅವರು ಆಟದ ಮೈದಾನದಲ್ಲಿ ಆಗಾಗ್ಗೆ ನಿಂದನಾತ್ಮಕ ಭಾಷೆಯನ್ನು ಬಳಸುತ್ತಾರೆ ಮತ್ತು ನಾನೇ ಅದನ್ನು ನೇರವಾಗಿ ಅನೇಕ ಬಾರಿ ಕೇಳಿಸಿಕೊಂಡಿದ್ದೇನೆ" ಎಂದು ಟಿಆರ್‌ಎಸ್ ಕ್ಲಿಪ್ಸ್ ಯೂಟ್ಯೂಬ್ ಚಾನೆಲ್ ಜೊತೆಗೆ ಮಾತನಾಡುತ್ತಾ ಇಶಾಂತ್ ಶರ್ಮಾ ಹೇಳಿದರು.

Who is a better fielder between MS Dhoni and Virat Kohli? - Quora

ಮಾಹಿ ಅವರ ಕೋಣೆಯಲ್ಲಿ ಸದಾ ಯಾರಾದರೊಬ್ಬರು ಇರುತ್ತಾರಂತೆ

"ಇನ್ನೂ ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಸಮಯದಲ್ಲಿ ಅಥವಾ ಭಾರತೀಯ ತಂಡದೊಂದಿಗೆ ಇರಲಿ, ಅವರ ಹೊಟೇಲ್ ಕೋಣೆಯಲ್ಲಿ ಕ್ರಿಕೆಟ್ ಆಟಗಾರರರು ಸದಾ ಕುಳಿತ್ತಿರುತ್ತಾರೆ.

ಒಟ್ಟಿನಲ್ಲಿ ಹೇಳುವುದಾದರೆ ಜನರು ಯಾವಾಗಲೂ ಅವರ ಸುತ್ತಲೂ ಇರುತ್ತಾರೆ. ಮಾಹಿ ಭಾಯ್ ಅವರ ಕೋಣೆಯಲ್ಲಿ ಯಾರಾದರೂ ಸದಾ ಮಾತನಾಡುತ್ತಾ ಕುಳಿತಿರುವುದನ್ನು ನೀವು ನೋಡಬಹುದು.

ಇದು ಒಂದು ರೀತಿಯಲ್ಲಿ ಹಳ್ಳಿಯಲ್ಲಿ ಜನರು ಒಂದೇ ಕಡೆ ಕುಳಿತು ಹರಟೆ ಹೊಡೆಯುತ್ತಾರಲ್ಲ ಹಾಗೆಯೇ ಇರುತ್ತದೆ. ಆದರೆ ಇಲ್ಲಿ ಮರಗಳು ಇರುವುದಿಲ್ಲ ಅಷ್ಟೇ ವ್ಯತ್ಯಾಸ" ಎಂದು ಇಶಾಂತ್ ಹೇಳಿದರು.

ಧೋನಿ ಅವರ ಕೋಪವು ಅಸಾಮಾನ್ಯವಾಗಿದೆ ಎಂದು ದೆಹಲಿ ವೇಗಿ ಹೇಳಿದರು. ಆದಾಗ್ಯೂ, ಇಶಾಂತ್ ಸರಿಯಾಗಿ ಚೆಂಡನ್ನು ಹಿಡಿಯಲು ವಿಫಲವಾದಾಗ ಧೋನಿ ಅವರು ಕೋಪಗೊಂಡು ಅವರನ್ನು ನಿಂದಿಸಿದ ಸಂದರ್ಭವನ್ನು ಅವರು ಇದೇ ಸಮಯದಲ್ಲಿ ನೆನಪಿಸಿಕೊಂಡರು.

ಇಶಾಂತ್ ಶರ್ಮಾ ಕೊನೆಯ ಬಾರಿಗೆ 2021 ರ ನವೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಆಡಿದ್ದರು. ಅವರು ಇದುವರೆಗೂ 105 ಟೆಸ್ಟ್, 80 ಏಕದಿನ ಮತ್ತು 14 ಟ್ವೆಂಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಈ ಮೂರು ಮಾದರಿ ಕ್ರಿಕೆಟ್ ಗಳಲ್ಲಿ ಅವರು ಕ್ರಮವಾಗಿ 311 ವಿಕೆಟ್, 115 ವಿಕೆಟ್ ಮತ್ತು 8 ವಿಕೆಟ್ ಗಳನ್ನು ಪಡೆದಿದ್ದಾರೆ. ಧೋನಿಯೊಂದಿಗೆ ಆಡಿದ ಅವರ ಅನುಭವಗಳು ಮಾಜಿ ನಾಯಕನ ಪಾತ್ರ ಮತ್ತು ಆಡುವಾಗ ನಡವಳಿಕೆಯ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಒದಗಿಸಿದೆ.

Mahi Bhai often uses Ishant Sharma reveals Captain Cool MS Dhonis Dark side Virat Kohli Cricket.