T20 Cricket: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಗೆ ಐಪಿಎಲ್‌ ಸ್ಟಾರ್‌ ತಿಲಕ್‌ ವರ್ಮಾ ಆಯ್ಕೆ!

08-07-23 01:39 pm       Source: News18 Kannada   ಕ್ರೀಡೆ

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸಜ್ಜಾಗಿದೆ. ಅಜಿತ್ ಅಗರ್ಕರ್‌ ನೇತೃತ್ವದ ಸೆಲೆಕ್ಷನ್​ ಕಮಿಟಿಯು ಜುಲೈ 5ರಂದು ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಿದೆ. ಆಯ್ಕೆ ಸಮಿತಿಯು ಯುವ ಆಟಗಾರರಿಗೆ ಬೆಂಬಲ ನೀಡಿದ್ದು, ತಂಡದಲ್ಲಿ ಅವರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ.

ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದಾಗಿನಿಂದಲೂ ಅನೇಕ ಸವಾಲುಗಳನ್ನು ಮೀರಿ ಬಂದಿದ್ದ ತಿಲಕ್‌ ವರ್ಮಾಗೆ ಪ್ರಸ್ತುತ ಸುವರ್ಣಾವಕಾಶವೊಂದು ಅರಸಿ ಬಂದಿದೆ. ಸೆಲೆಕ್ಷನ್​ ಕಮಿಟಿಯು ಟೀಂ ಇಂಡಿಯಾಕ್ಕೆ ತಿಲಕ್‌ ವರ್ಮಾ ಅವರನ್ನು ಆಯ್ಕೆ ಮಾಡಿದೆ. ಬುಧವಾರ ಸಂಜೆ, ವರ್ಮಾ ಆಯ್ಕೆಯಾದ ಬಗ್ಗೆ ಸ್ನೇಹಿತರೊಬ್ಬರು ಕರೆ ಮಾಡಿ ತಿಳಿಸಿದ್ದರು.

ನಂತರ ಟಿ 20 ತಂಡಕ್ಕೆ ಆಯ್ಕೆಯಾದ ಸಂತೋಷವನ್ನು ವರ್ಮಾ ತನ್ನ ಪೋಷಕರಿಗೆ ವಿಡಿಯೋ ಕಾಲ್‌ ಮೂಲಕ ತಿಳಿಸಿದ್ದಾರೆ. ತಂದೆ ತಾಯಿಯ ಖುಷಿಗೂ ಪಾರವಿಲ್ಲದೇ ಫೋನ್‌ನಲ್ಲೇ ಆನಂದಬಾಷ್ಪ ಸುರಿಸಿದರು. ನನ್ನ ತಂದೆ-ತಾಯಿ, ತರಬೇತುದಾರ ಎಲ್ಲರೂ ಖುಷಿಗೆ ಕಣ್ಣೀರು ಹಾಕಿ ಅಭಿನಂದನೆ ತಿಳಿಸಿದರು ಎಂದು ವರ್ಮಾ ಹೇಳಿದರು.

IPL 2023: Best Playing XI of Mumbai Indians (MI) - CricketAddictor

ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ಬ್ಯಾಟರ್

ಮುಂಬೈ ಇಂಡಿಯನ್ಸ್ ಪರ ಭರ್ಜರಿ ಬ್ಯಾಟಿಂಗ್‌ ಬೀಸಿದ ಇವರು ಪಂದ್ಯವೊಂದರಲ್ಲಿ 46 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿನ ಪ್ರದರ್ಶನ ನೋಡಿ ಭಾರತ ಟೀಂಗೆ ಯಾವಾಗ ಇವರ ಎಂಟ್ರಿ ಆಗುತ್ತದೆ ಎಂದು ಹಲವರು ಕಾತುರದಿಂದ ಕಾಯುತ್ತಿದ್ದರು.

ಆಯ್ಕೆ ಬಗ್ಗೆ ಮಾತನಾಡಿದ ವರ್ಮಾ "ನಾನು ನನ್ನ ಕೆಲಸದ ಬಗ್ಗೆ ಅಷ್ಟೇ ಯೋಚಿಸುತ್ತಿದ್ದೆ ವಿನಃ ಬೇರೆ ಯಾವುದರ ಬಗ್ಗೆಯೂ ಯೋಚಿಸುತ್ತಿರಲಿಲ್ಲ. ನನಗೆ ಯಾವ ಪಂದ್ಯ ಸಿಗಬಹುದು ಎಂದು ಯೋಚಿಸುತ್ತಿದ್ದೆ ಮತ್ತು ಅದರ ಮೇಲೆ ಕೇಂದ್ರೀಕರಿಸಬೇಕು ಎಂದು ಅಭ್ಯಾಸ ಮಾಡುತ್ತಿದ್ದೆ.

ಆದರೆ ಈಗ ಬಂದ ಅವಕಾಶ ನನಗೆ ಸಾಕಷ್ಟು ಖುಷಿ ನೀಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವರ್ಮಾ ಬಾಲ್ಯದ ಸ್ನೇಹಿತರು ಮತ್ತು ತರಬೇತುದಾರರಿಗೆ ಧನ್ಯವಾದ ವ್ಯಕ್ತಪಡಿಸಿದರು.

IND vs WI: "My Mom And Dad Were Literally Crying" - Tilak Varma Reacts To  His Maiden India Call-Up

ತಿಲಕ್ ಆಟದ ಜವಾಬ್ದಾರಿ ವಹಿಸಿಕೊಂಡಿದ್ದ ಕೋಚ್

ವರ್ಮಾ ತಂದೆ, ನಮ್ಮೂರಿ ನಾಗರಾಜು ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಗಾಯತ್ರಿ ದೇವಿ ಗೃಹಿಣಿ. ಮೊದಲಿಗೆ ತಂದೆಗೆ ವರ್ಮಾ ಕ್ರಿಕೆಟ್‌ ಆಡುವುದು ಇಷ್ಟ ಇರಲಿಲ್ಲ. ಆರ್ಥಿಕ ಸ್ಥಿತಿಯ ಕಾರಣವೂ ವರ್ಮಾ ಅವರನ್ನು ತರಬೇತಿಗೆ ಹಾಕಿರಲಿಲ್ಲ. ಆದರೆ ನಂತರ ವರ್ಮಾ ಅವರ ಸಾಮರ್ಥ್ಯ ನೋಡಿ ಸಲಾಮ್ ಬಯಾಶ್ ಎಲ್ಲಾ ವೆಚ್ಚಗಳನ್ನು ಭರಿಸಿ ಆತನಿಗೆ ತರಬೇತಿ ನೀಡಿದರು.

ಭಾರತ ತಂಡಕ್ಕೆ ಆಯ್ಕೆಯಾಗುವುದೇ ಒಂದು ದೊಡ್ಡ ವಿಷಯ. ಈ ನನ್ನ ಜರ್ನಿಯಲ್ಲಿ ನನ್ನೊಂದಿಗೆ ಇದ್ದ ಎಲ್ಲರ ಜೊತೆ ವಿಷಯ ಹಂಚಿಕೊಂಡೆ ಎಂದು ವರ್ಮಾ ಹೇಳಿದರು. ಭಾರತದ T20 ತಂಡವು ಅಗ್ರಸ್ಥಾನದಲ್ಲಿ ನೆಲೆಸಿರುವ ಬ್ಯಾಟಿಂಗ್ ಲೈನ್-ಅಪ್ ಅನ್ನು ಹೊಂದಿರುವುದರಿಂದ, ವರ್ಮಾ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಮಾಡಿದಂತೆಯೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗಬಹುದು.

Kieron Pollard retires from IPL, announces new role: 'If I can't play for  MI...' | Cricket - Hindustan Times

"ಪೋಲಾರ್ಡ್‌ ಅವರಿಂದ ಸಾಕಷ್ಟು ಕಲಿತಿದ್ದೇನೆ"

ಮುಂಬೈ ಫ್ರಾಂಚೈಸಿಯಲ್ಲಿ ಬ್ಯಾಟಿಂಗ್ ತರಬೇತುದಾರರಾಗಿದ್ದ ಕೀರಾನ್ ಪೊಲಾರ್ಡ್ ಅವರು ನನಗೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಶಾಂತವಾಗಿರಿ ಮತ್ತು ಮುಂದಿನ ಚೆಂಡಿನ ಬಗ್ಗೆ ಮಾತ್ರ ಯೋಚಿಸಿ ಎಂದು ಅವರು ಹೇಳುತ್ತಿದ್ದರು. ಅವರ ಈ ಸಲಹೆ ನನಗೆ ಸಾಕಷ್ಟು ಧೈರ್ಯ ನೀಡುತ್ತಿತ್ತು ಎಂದು ಪೊಲಾರ್ಡ್‌ಗೆ ಧನ್ಯವಾದ ಹೇಳಿದರು.

Virat Kohli News: Why Virat Kohli had to lift Sachin Tendulkar on shoulders  after 2011 World Cup win, reveals Sehwag - The Economic Times

"ದಿಗ್ಗಜರ ಸಲಹೆ ನನ್ನನ್ನು ಇಲ್ಲಿಗೆ ಕರೆ ತಂದಿದೆ"

ವರ್ಮಾ ಅವರು ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಲೆಜೆಂಡರಿ ಆಟಗಾರರಿಂದಲೂ ನಾನು ಸಲಹೆ ಪಡೆದಿದ್ದೇನೆ ಇದು ನನಗೆ ಆಡಲು ಮತ್ತಷ್ಟು ಸ್ಪೂರ್ತಿ ಎಂದಿದ್ದಾರೆ.

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಎಲ್ಲರೂ ಆಟದ ಬಗ್ಗೆ ಹೇಳುತ್ತಿದ್ದರು. ಅವರುಸಲಹೆಗಳು ನನಗೆ ತುಂಬಾ ಅಮೂಲ್ಯವಾಗಿವೆ ಮತ್ತು ಭಾರತ ತಂಡಕ್ಕೆ ಆಯ್ಕೆ ಆಗಲು ಸಹಾಯ ಮಾಡಿವೆ ಎಂದು ವರ್ಮಾ ಹೇಳಿದರು. ದುಲೀಪ್ ಟ್ರೋಫಿ, 2020ರ ಅಂಡರ್-19 ವಿಶ್ವಕಪ್, ಐಪಿಎಲ್‌ನಲ್ಲಿ ಅಬ್ಬರಿಸಿರುವ ತಿಲಕ್‌ ವರ್ಮಾ ಈಗ ಅಧಿಕೃತವಾಗಿ ಭಾರತದ ಪರ ಬ್ಯಾಟ್‌ ಬೀಸಲಿದ್ದಾರೆ.

Tilak Varma believes the advise given by Tendulkar Kohli and Pollard will help his India Stint.