World Cup 2023: ವಿಶ್ವಕಪ್ ಹೊಸ ವೇಳಾಪಟ್ಟಿ; ಇಂಡೋ-ಪಾಕ್ ಹೈ ವೋಲ್ಟೇಜ್ ಪಂದ್ಯ ಯಾವಾಗ?

10-08-23 02:30 pm       Source: News18 Kannada   ಕ್ರೀಡೆ

ಅಕ್ಟೋಬರ್ 5ರಿಂದ ಮೆಗಾ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ವಿಶ್ವಕಪ್‌ ವೇಳಾಪಟ್ಟಿಗೆ ಸಂಬಂಧಿಸಿದ ಹೈಡ್ರಾಮಾಗೆ ಕೊನೆಗೂ ತೆರೆಬಿದ್ದಿದೆ. ಮೆಗಾ ಟೂರ್ನಿಯ ರೀ ಶೆಡ್ಯೂಲ್​ ಅನ್ನು ಐಸಿಸಿ ಬುಧವಾರ ಘೋಷಿಸಿದೆ. ಟೂರ್ನಿಯ ಒಟ್ಟು 9 ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆ ಆಗಿದೆ. ಇದರೊಂದಿಗೆ ಇಡೀ ಕ್ರಿಕೆಟ್​ ಜಗತ್ತು ಎದುರು ನೋಡುತ್ತಿದ್ದ ಭಾರತ-ಪಾಕಿಸ್ಥಾನ ಹೈ ವೋಲ್ಟೇಜ್ ಪಂದ್ಯವನ್ನು ಅಕ್ಟೋಬರ್ 14ಕ್ಕೆ ರೀ ಶೆಡ್ಯೂಲ್ ಮಾಡಲಾಗಿದೆ. ದೇವೀ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪಂದ್ಯವನ್ನು ಒಂದು ದಿನ ಮುಂದಕ್ಕೆ ಹಾಕಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ವೇಳಾಪಟ್ಟಿಯಲ್ಲಿ ಇಂಡೋ-ಪಾಕ್ ಪಂದ್ಯ ಅಕ್ಟೋಬರ್ 15 ರಂದು ನಿಗದಿಯಾಗಿತ್ತು. ಆದರೆ ಗುಜರಾತ್‌ನಲ್ಲಿ ಅದೇ ದಿನ ದೇವಿ ನವರಾತ್ರಿಗಳು ಪ್ರಾರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಗಳು ಎದುರಾಗುವ ನಿರೀಕ್ಷೆಯಿಂದ ಪಂದ್ಯವನ್ನು ಮುಂದಕ್ಕೆ ಹಾಕಲಾಗಿದೆ.

ಅಕ್ಟೋಬರ್ 14 ರಂದು ನಡೆಯಬೇಕಾದ ಇಂಗ್ಲೆಂಡ್-ಅಫ್ಗಾನಿಸ್ಥಾನ ಪಂದ್ಯವನ್ನು ಅಕ್ಟೋಬರ್ 15 ರಂದು ರೀಶೆಡ್ಯೂಲ್ ಮಾಡಲಾಗಿದೆ. ಪಾಕಿಸ್ತಾನ-ಶ್ರೀಲಂಕಾ ನಡುವೆ ಹೈದರಾಬಾದ್​​​ನಲ್ಲಿ ಅಕ್ಟೋಬರ್ 12 (ಗುರುವಾರ) ನಡೆಯಬೇಕಿದ್ದ, ಪಂದ್ಯ ಅಕ್ಟೋಬರ್ 10ರಂದು ನಡೆಯಲಿದೆ. ಅಕ್ಟೋಬರ್ 13 ರಂದು ಲಕ್ನೋದಲ್ಲಿ ನಡೆಯಬೇಕಾದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯವನ್ನು ಅಕ್ಟೋಬರ್ 12 ರಂದು ಬದಲಾಯಿಸಲಾಗಿದೆ.

 ಅಕ್ಟೋಬರ್ 14 ರಂದು ನಡೆಯಬೇಕಾದ ಇಂಗ್ಲೆಂಡ್-ಅಫ್ಗಾನಿಸ್ಥಾನ ಪಂದ್ಯವನ್ನು ಅಕ್ಟೋಬರ್ 15 ರಂದು ರೀಶೆಡ್ಯೂಲ್ ಮಾಡಲಾಗಿದೆ. ಪಾಕಿಸ್ತಾನ-ಶ್ರೀಲಂಕಾ ನಡುವೆ ಹೈದರಾಬಾದ್​​​ನಲ್ಲಿ ಅಕ್ಟೋಬರ್ 12 (ಗುರುವಾರ) ನಡೆಯಬೇಕಿದ್ದ, ಪಂದ್ಯ ಅಕ್ಟೋಬರ್ 10ರಂದು ನಡೆಯಲಿದೆ. ಅಕ್ಟೋಬರ್ 13 ರಂದು ಲಕ್ನೋದಲ್ಲಿ ನಡೆಯಬೇಕಾದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯವನ್ನು ಅಕ್ಟೋಬರ್ 12 ರಂದು ಬದಲಾಯಿಸಲಾಗಿದೆ.

 ನೆದರ್ಲ್ಯಾಂಡ್ಸ್‌ನೊಂದಿಗೆ ಭಾರತ ಆಡುತ್ತಿರುವ ತನ್ನ ಕೊನೆಯ ಲೀಗ್ ಪಂದ್ಯದ ದಿನಾಂಕ ಕೂಡ ಬದಲಾಗಿದ್ದು, ನವೆಂಬರ್ 11 ರಿಂದ 12ಕ್ಕೆ ಮುಂದೂಡಲಾಗಿದೆ. ಪಾಕಿಸ್ತಾನ-ಇಂಗ್ಲೆಂಡ್ ಪಂದ್ಯದ ಬದಲಾವಣೆಯಿಂದಾಗಿ ಭಾರತ-ನೆದರ್ಲೆಂಡ್ಸ್ ಪಂದ್ಯವನ್ನು ರೀ ಶೆಡ್ಯೂಲ್ ಮಾಡಲಾಗಿದೆ.

 ನವೆಂಬರ್ 12 ರಂದು ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಬೇಕಾದ ಪಂದ್ಯವನ್ನು ಭದ್ರತಾ ಕಾರಣಗಳಿಂದ ನವೆಂಬರ್ 11ಕ್ಕೆ ಬದಲಾಯಿಸಲಾಗಿದೆ. ಕೋಲ್ಕತಾದಲ್ಲಿ ಕಾಳಿ ಪೂಜೆ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಗಳು ಎದುರಾಗುವ ನಿರೀಕ್ಷೆಯಿಂದ ಪಂದ್ಯವನ್ನು ಒಂದು ಮುನ್ನವೇ ನಿಗದಿಪಡಿಸಲಾಗಿದೆ.

ನವೆಂಬರ್ 12 ರಂದು ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಬೇಕಾದ ಪಂದ್ಯವನ್ನು ಭದ್ರತಾ ಕಾರಣಗಳಿಂದ ನವೆಂಬರ್ 11ಕ್ಕೆ ಬದಲಾಯಿಸಲಾಗಿದೆ. ಕೋಲ್ಕತಾದಲ್ಲಿ ಕಾಳಿ ಪೂಜೆ ಹಿನ್ನೆಲೆಯಲ್ಲಿ ಭದ್ರತಾ ಸಮಸ್ಯೆಗಳು ಎದುರಾಗುವ ನಿರೀಕ್ಷೆಯಿಂದ ಪಂದ್ಯವನ್ನು ಒಂದು ಮುನ್ನವೇ ನಿಗದಿಪಡಿಸಲಾಗಿದೆ. ನೆದರ್ಲ್ಯಾಂಡ್ಸ್‌ನೊಂದಿಗೆ ಭಾರತ ಆಡುತ್ತಿರುವ ತನ್ನ ಕೊನೆಯ ಲೀಗ್ ಪಂದ್ಯದ ದಿನಾಂಕ ಕೂಡ ಬದಲಾಗಿದ್ದು, ನವೆಂಬರ್ 11 ರಿಂದ 12ಕ್ಕೆ ಮುಂದೂಡಲಾಗಿದೆ. ಪಾಕಿಸ್ತಾನ-ಇಂಗ್ಲೆಂಡ್ ಪಂದ್ಯದ ಬದಲಾವಣೆಯಿಂದಾಗಿ ಭಾರತ-ನೆದರ್ಲೆಂಡ್ಸ್ ಪಂದ್ಯವನ್ನು ರೀ ಶೆಡ್ಯೂಲ್ ಮಾಡಲಾಗಿದೆ.

ಅಕ್ಟೋಬರ್ 5ರಿಂದ ಮೆಗಾ ಟೂರ್ನಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೆಗಾ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಅಕ್ಟೋಬರ್ 14 ರಂದು ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಟೀಂ ಇಂಡಿಯಾ ತನ್ನ ವಿಶ್ವಕಪ್​​ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ICC Releases Revised Schedule of World Cup 2023 Clash Between India vs Pakistan Rescheduled to October 14.