Shocking News: ಕ್ಯಾನ್ಸರ್‌ಗೆ ಬಲಿಯಾದ ದಿಗ್ಗಜ ಕ್ರಿಕೆಟಿಗ, ಸುದ್ದಿ ಕೇಳಿ ಕಣ್ಣೀರಿಟ್ಟ ಅಭಿಮಾನಿಗಳು!

23-08-23 12:36 pm       Source: News18 Kannada   ಕ್ರೀಡೆ

ಕ್ಯಾನ್ಸರ್ ವಿರುದ್ಧ ಸಾಕಷ್ಟು ಹೋರಾಟದ ಬಳಿಕ ಈ ದಿಗ್ಗಜ ಕ್ರಿಕೆಟಿಗ ಕೊನೆಯುಸಿರೆಳೆದಿದ್ದಾರೆ. ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಹೀತ್‌ ಸ್ಟ್ರೀಕ್ ಎಂದರೆ ತಪ್ಪಾಗಲ್ಲ.

ಜಿಂಬಾಬ್ವೆ ಕ್ರಿಕೆಟ್‌ನ ದಿಗ್ಗಜ ಆಟಗಾರ ಹೀತ್ ಸ್ಟ್ರೀಕ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 49 ವರ್ಷ ವಯಸ್ಸಾಗಿತ್ತು. ಹೀತ್‌ ಸ್ಟೀಕ್‌ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕ್ಯಾನ್ಸರ್ ವಿರುದ್ಧ ಸಾಕಷ್ಟು ಹೋರಾಟದ ಬಳಿಕ ಈ ದಿಗ್ಗಜ ಕ್ರಿಕೆಟಿಗ ಕೊನೆಯುಸಿರೆಳೆದಿದ್ದಾರೆ. ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಹೀತ್‌ ಸ್ಟ್ರೀಕ್ ಎಂದರೆ ತಪ್ಪಾಗಲ್ಲ.

2000-2004ರ ಅವಧಿಯಲ್ಲಿ ತಂಡವನ್ನು ನಾಯಕನಾಗಿಯೂ ಮುನ್ನಡೆಸಿದ್ದರು. ಒಟ್ಟಾರೆಯಾಗಿ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 65 ಟೆಸ್ಟ್ ಪಂದ್ಯಗಳನ್ನು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬರೇ ಮುಂದೆ ನಿಂತು ಗೆಲ್ಲಿಸಿ, ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದರು.

 ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬರೇ ಮುಂದೆ ನಿಂತು ಗೆಲ್ಲಿಸಿ, ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದರು.

 ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿತ್ತು.

ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿತ್ತು. ಹೀತ್ ಸ್ಟ್ರೀಕ್ ಅವರ ಮಾಜಿ ಬೌಲಿಂಗ್ ಜೊತೆಗಾರ ಹೆನ್ರಿ ಒಲೊಂಗ ಟ್ವಿಟ್ಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. "ಬೇಸರದ ಸುದ್ದಿ ಬರುತ್ತಿದ್ದು ಹೀತ್ ಸ್ಟ್ರೀಕ್ ಅವರು ಬದುಕಿನ ಅಧ್ಯಾಯವನ್ನು ಮುಗಿಸಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್‌ರೌಂಡರ್ ಇನ್ನಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

 ಹೀತ್ ಸ್ಟ್ರೀಕ್ ಅವರ ಮಾಜಿ ಬೌಲಿಂಗ್ ಜೊತೆಗಾರ ಹೆನ್ರಿ ಒಲೊಂಗ ಟ್ವಿಟ್ಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. "ಬೇಸರದ ಸುದ್ದಿ ಬರುತ್ತಿದ್ದು ಹೀತ್ ಸ್ಟ್ರೀಕ್ ಅವರು ಬದುಕಿನ ಅಧ್ಯಾಯವನ್ನು ಮುಗಿಸಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್‌ರೌಂಡರ್ ಇನ್ನಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

 ನಿಮ್ಮೊಂದಿಗೆ ಆಡಿದ್ದು ಅತ್ಯುತ್ತವಾದ ಅವಕಾಶ. ನನ್ನ ಬೌಲಿಂಗ್ ಅವಧಿ ಮುಗಿದಾಗ ನಿಮ್ಮೊಂದಿಗೆ ಮತ್ತೊಂದು ಅಧ್ಯಾಯದಲ್ಲಿ ಆಡಲು ಜೊತೆಯಾಗುತ್ತೇನೆ" ಎಂದು ಹೆನ್ರಿ ಒಲೊಂಗಾ ಭಾವುಕರಾಗಿದ್ದಾರೆ.

ನಿಮ್ಮೊಂದಿಗೆ ಆಡಿದ್ದು ಅತ್ಯುತ್ತವಾದ ಅವಕಾಶ. ನನ್ನ ಬೌಲಿಂಗ್ ಅವಧಿ ಮುಗಿದಾಗ ನಿಮ್ಮೊಂದಿಗೆ ಮತ್ತೊಂದು ಅಧ್ಯಾಯದಲ್ಲಿ ಆಡಲು ಜೊತೆಯಾಗುತ್ತೇನೆ" ಎಂದು ಹೆನ್ರಿ ಒಲೊಂಗಾ ಭಾವುಕರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ ಆಡಿರುವ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 1990 ಟೆಸ್ಟ್ ರನ್ ಬಾರಿಸಿದ್ದರೆ ಏಕದಿನ ಮಾದರಿಯಲ್ಲಿ 2943 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಹರಾರೆಯಲ್ಲಿ ಔಟಾಗದೆ 127 ರನ್ ಗಳಿಸಿದ್ದು ಅವರ ಏಕೈಕ ಟೆಸ್ಟ್ ಶತಕವಾಗಿದೆ.

Heath Streak Legendary Zimbabwe Cricketer Dies at 49.