ಐಎಸ್‌ಎಲ್: ಗೋವಾಕ್ಕೆ ಆಘಾತ ನೀಡುವ ನಿರೀಕ್ಷೆಯಲ್ಲಿ ಚೆನ್ನೈಯಿನ್

19-12-20 04:35 pm       Source: MYKHEL   ಕ್ರೀಡೆ

ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೋವಾ ಎಫ್‌ಸಿ ವಿರುದ್ಧ ಚೆನ್ನೈಯಿನ್ ತಂಡ ಮೂರು ಅಂಕ ಗಳಿಸುವ ಗುರಿಯೊಂದಿಗೆ ಅಂಗಳಕ್ಕೆ ಇಳಿಯಲಿದೆ.

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಗೋವಾ ಎಫ್‌ಸಿ ವಿರುದ್ಧ ಚೆನ್ನೈಯಿನ್ ತಂಡ ಮೂರು ಅಂಕ ಗಳಿಸುವ ಗುರಿಯೊಂದಿಗೆ ಅಂಗಳಕ್ಕೆ ಇಳಿಯಲಿದೆ. ಎರಡು ಜಯ, ಎರಡು ಡ್ರಾ ಹಾಗೂ ಎರಡು ಸೋಲಿನ ಆಘಾತ ಕಂಡಿರುವ ಗೋವಾ ಎಫ್‌ಸಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇದುವರೆಗೆ ಪ್ರದರ್ಶನ ನೀಡಿರಲಿಲ್ಲ. ಎರಡು ಬಾರಿ ಚಾಂಪಿಯನ್ ಚೆನ್ನೈುನ್ ಕೂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಲಿಲ್ಲ. ಐಗರ್ ಆಂಗುಲೋ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವ"ಸಿದ್ದು ಪ್ರತಿ ಬಾರಿಯೂ ಗೋಲ್ ಗಳಿಸಿದ್ದಾರೆ.

ಗೋವಾ ತಂಡ ಫೀಲ್ಡ್ ಗೋಲಿಗಿಂತ ಸೆಟ್ ಪೀಸ್ ಮೂಲಕ ಗೋಲು ಗಳಿಸಿದ್ದೇ ಹೆಚ್ಚು. ಗೋಲಿನ ಕಡೆ ಗುರಿುಡುವುದರಲ್ಲೂ ಗೋವಾ ಕೆಳಹಂತದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ಗುರಿ ಪಂದ್ಯವನ್ನು ಗೆಲ್ಲುವುದಾಗಿದೆ. ಆದರೆ ಕೆಲವೊಮ್ಮೆ ಡ್ರಾಗೆ ತೃಪ್ತಿಪಡಬೇಕಾಗುತ್ತದೆ. ತಂಡ ದ್ವಿತೀಯಾರ್ಧದಲ್ಲಿ ಗೋಲುಗಳನ್ನು ನೀಡುತ್ತಿದ್ದು ಇದು "ನ್ನೆಡೆಗೆ ಪ್ರಮುಖ ಕಾರಣವಾಗಿದೆ ಎಂದು ಕೋಚ್ ಜೂವಾನ್ ಫೆರಂಡೋ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

This News Article is a Copy of MYKHEL