ಭಾರತ vs ಇಂಗ್ಲೆಂಡ್: ಮತ್ತೊಂದು ದಾಖಲೆ ಪಟ್ಟಿ ಸೇರಿದ ಜೋ ರೂಟ್

06-02-21 02:42 pm       Source: MYKHEL Sadashiva   ಕ್ರೀಡೆ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಈ ಪಂದ್ಯದಲ್ಲಿ ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್ ಆಡುತ್ತಿದೆ. ಈ ಪಂದ್ಯ ಮೂಲಕ 100ನೇ ಟೆಸ್ಟ್ ಆಡುತ್ತಿರುವ ಜೋ ರೂಟ್ 150+ ರನ್ ಬಾರಿಸಿ ಮತ್ತೊಂದು ದಾಖಲೆ ಪಟ್ಟಿ ಸೇರಿದ್ದಾರೆ.

ತಾನಾಡಿದ 98ನೇ, 99ನೇ ಟೆಸ್ಟ್ ಪಂದ್ಯಗಳಲ್ಲಿ ರೂಟ್ ಶತಕ ಬಾರಿಸಿದ್ದಷ್ಟೇ ಅಲ್ಲ, 100ನೇ ಪಂದ್ಯದಲ್ಲೂ ಶತಕ ಬಾರಿಸಿದ ವಿಶ್ವದ ಮೊದಲನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಈಗ ಸತತ ಟೆಸ್ಟ್ ಪಂದ್ಯಗಳಲ್ಲಿ 150+ ರನ್ ಬಾರಿಸಿದ ಬ್ಯಾಟ್ಸ್‌ಮನ್‌ ಗಳ ಸಾಲಿಗೂ ರೂಟ್ ಸೇರಿಕೊಂಡಿದ್ದಾರೆ.

This News Article is a Copy of MYKHEL