ಡೆಲ್ಲಿ ಕ್ಯಾಪಿಟಲ್ಸ್‌ಗೆ ಪ್ರಧಾನ ಪ್ರಾಯೋಜಕರಾಗಲಿದೆ ಜೆಎಸ್‌ಡಬ್ಲ್ಯೂ

05-03-21 03:28 pm       Source: MYKHEL   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದರ ಸಹ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯೂ ಗ್ರೂಪ್‌ ಪ್ರಧಾನ ಪ್ರಾಯೋಜಕರಾಗಿ ಹೆಸರಿಸಲ್ಪಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಜೆಎಸ್‌ಡಬ್ಲ್ಯೂ 3 ವರ್ಷಗಳ ಕಾಲ ಪ್ರಾಯೋಜಕರಾಗಿ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದರ ಸಹ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯೂ ಗ್ರೂಪ್‌ ಪ್ರಧಾನ ಪ್ರಾಯೋಜಕರಾಗಿ ಹೆಸರಿಸಲ್ಪಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಜೆಎಸ್‌ಡಬ್ಲ್ಯೂ 3 ವರ್ಷಗಳ ಕಾಲ ಪ್ರಾಯೋಜಕರಾಗಿ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದ ಪ್ರಕಾರ, 2021ರಿಂದ 2023ರ ವರೆಗೆ ಜೆಎಸ್‌ಡಬ್ಲ್ಯೂ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಧಾನ ಪ್ರಾಯೋಜಕರಾಗಿರಲಿದೆ. ಒಪ್ಪಂದ ಮಾಡಿಕೊಳ್ಳಲಾಗಿರುವುದರಿಂದ ಡೆಲ್ಲಿ ತಂಡದ ಜೆರ್ಸಿ ಮೇಲೆ ಜೆಎಸ್‌ಡಬ್ಲ್ಯೂ ಚಿಹ್ನೆ ಇರಲಿದೆ. ಅಲ್ಲದೆ ಪಂದ್ಯಾಟಗಳ ವೇಳೆ ಸ್ಟೇಡಿಯಂನಲ್ಲಿ ಡೆಲ್ಲಿ ಪಂದ್ಯಗಳ ವೇಳೆ ಜೆಎಸ್‌ಡಬ್ಲ್ಯೂ ಪ್ರಚಾರಗಳು ನಡೆಯಲಿವೆ. 'ನಾವು ಜೆಎಸ್‌ಡಬ್ಲ್ಯೂ ಗ್ರೂಪ್‌ನೊಂದಿಗಿನ ನಮ್ಮ ಒಡನಾಟವನ್ನು ಇನ್ನಷ್ಟು ಹೆಚ್ಚಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಒಂದೇ ರೀತಿಯ ನೀತಿ ಮತ್ತು ತತ್ತ್ವಶಾಸ್ತ್ರವನ್ನು ಹಂಚಿಕೊಳ್ಳುತ್ತೇವೆ ಮತ್ತು ಅದು ನಮ್ಮ ಫ್ರ್ಯಾಂಚೈಸಿಯನ್ನು ಐಪಿಎಲ್‌ನಲ್ಲಿ ಅತ್ಯಂತ ಭರ್ಜರಿ ಬ್ರಾಂಡ್‌ಗಳಲ್ಲಿ ಒಂದನ್ನಾಗಿ ಮಾಡುತ್ತದೆ,' ಎಂದು ಡೆಲ್ಲಿ ಸಹ ಮಾಲೀಕ ಜಿಎಂಆರ್‌ ಗ್ರೂಪ್‌ನ ಕಿರಣ್ ಕುಮಾರ್ ಗ್ರಂಧಿ ಹೇಳಿದ್ದಾರೆ

ಯುವಕರು ಹೆಚ್ಚಿನ ಸಂಖ್ಯೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶ್ರೇಯಸ್ ಐಯ್ಯರ್ ನಾಯಕರಾಗಿದ್ದು, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಖ್ಯ ಕೋಚ್ ಆಗಿದ್ದಾರೆ. 2021ರ ಆವೃತ್ತಿಯಲ್ಲಿ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ಫೈನಲ್‌ನಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ ಮುಂಬೈ ಗೆದ್ದಿತ್ತು. ಆದರೆ ಡೆಲ್ಲಿ ಪ್ರಥಮಬಾರಿಗೆ ಫೈನಲ್‌ನಲ್ಲಿ ಸ್ಪರ್ಧಿಸಿ ದಾಖಲೆ ನಿರ್ಮಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಆಟಗಾರರ ರಿಷಭ್ ಪಂತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಸದ್ಯ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯ ಆಡುತ್ತಿದೆ.

This News Article Is A Copy Of MYKHEL