ಮಾಜಿ ಕ್ರಿಕೆಟಿಗ ಕಸ್ತೂರಿರಂಗನ್ (89) ನಿಧನ

19-08-20 07:27 pm       Headline Karnataka News Network   ಕ್ರೀಡೆ

ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಪಿಚ್​​ ಕ್ಯೂರೇಟರ್​​ ಗೋಪಾಲಸ್ವಾಮಿ ಕಸ್ತೂರಿರಂಗನ್ (89) ನಿಧನರಾಗಿದ್ದಾರೆ. ರಾಜ್ಯದ ಮಾಜಿ ಹಿರಿಯ ಆಟಗಾರ ಗೋಪಾಲಸ್ವಾಮಿ ಕಸ್ತೂರಿರಂಗನ್​ ನಿಧನಕ್ಕೆ, ಕರ್ನಾಟಕ ಕ್ರಿಕೆಟ್​ ಸಂಸ್ಥೆ ಹಾಗೂ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಪಿಚ್​​ ಕ್ಯೂರೇಟರ್​​ ಗೋಪಾಲಸ್ವಾಮಿ ಕಸ್ತೂರಿರಂಗನ್ (89) ನಿಧನರಾಗಿದ್ದಾರೆ.. ಇಂದು ಬೆಳಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

1948ರಿಂದ 1963ರವರೆಗೆ ಕರ್ನಾಟಕ (ಮೈಸೂರು) ಪರ ರಣಜಿ ಟ್ರೋಫಿಯಲ್ಲಿ ಆಡಿರುವ ಗೊಪಾಲಸ್ವಾಮಿ, ರಾಜ್ಯ ತಂಡದ ಪ್ರಮುಖ ಬಲಗೈ ಇನ್​​ ಸ್ವಿಂಗ್ ಬೌಲರ್​ ಆಗಿ ಗುರುತಿಸಿಕೊಂಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್​​​ನಲ್ಲಿ 36​​ ಪಂದ್ಯಗಳನ್ನಾಡಿರುವ ಕಸ್ತೂರಿ ರಂಗನ್​​​​​ 421 ರನ್​ ಹಾಗೂ 94 ವಿಕೆಟ್​ ಕಬಳಿಸಿದ್ದಾರೆ. 1951-52ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 12 ವಿಕೆಟ್​ ಪಡೆದಿದ್ದ ಜಿ.ಕಸ್ತೂರಿರಂಗನ್, 1952-53ರಲ್ಲಿ ವೆಸ್ಟ್​ ಇಂಡೀಸ್​ ಪ್ರವಾಸದ ವೇಳೆ ಟೀಮ್ ಇಂಡಿಯಾಕ್ಕೆ ಬುಲಾವ್​ ಪಡೆದಿದ್ದರು.

ಕ್ರಿಕೆಟಿಗನಾಗಿ ಮಾತ್ರವಲ್ಲದೆ ಕೆಎಸ್‌ಸಿಎ ಉಪಾಧ್ಯಕ್ಷ ಹಾಗೂ ಪಿಚ್​ ಕ್ಯೂರೇಟರ್​ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ಯದ ಮಾಜಿ ಹಿರಿಯ ಆಟಗಾರ ಗೋಪಾಲಸ್ವಾಮಿ ಕಸ್ತೂರಿರಂಗನ್​ ನಿಧನಕ್ಕೆ, ಕರ್ನಾಟಕ ಕ್ರಿಕೆಟ್​ ಸಂಸ್ಥೆ ಹಾಗೂ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.