ಕೆರಿಬಿಯನ್ ನಾಡಿಗೆ ಕೊರೊನಾ ಲಸಿಕೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ದಿಗ್ಗಜ ವಿವಿಯನ್ ರಿಚರ್ಡ್ಸ್

15-03-21 11:01 am       source: MYKHEL   ಕ್ರೀಡೆ

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾನುವಾರ ಧನ್ಯವಾದ ಸಲ್ಲಿಸಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾನುವಾರ ಧನ್ಯವಾದ ಸಲ್ಲಿಸಿದ್ದಾರೆ. ಕೆರಿಬಿಯನ್ ಸಮೂಹಕ್ಕೆ ಕೊರೊನಾ ವೈರಸ್ ಲಸಿಕೆಯನ್ನು ಭಾರತ ಸರ್ಕಾರ ನೀಡಿತ್ತು. ಇದಕ್ಕಾಗಿ ರಿಚರ್ಡ್ಸ್ ಧನ್ಯವಾದ ತಿಳಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ 1,75,000 ಕೋವಿಡ್ ಲಸಿಕೆಯನ್ನು ಭಾರತದಿಂದ ಸ್ವೀಕರಿಸಿದೆ. ಇದರಲ್ಲಿ 40,000 ಲಸಿಕೆಗಳು ಭಾರತದ "ವ್ಯಾಕ್ಸಿನ್ ಮೈತ್ರಿ" ಮುಂದಾಳತ್ವದಲ್ಲಿ ಉಚಿತವಾಗಿ ನೀಡಲಾಗಿದೆ. ವಿಡಿಯೋ ಸಂದೇಶದಲ್ಲಿ ಮಾತನಾಡಿದ ವಿವಿಯನ್ ರಿಚರ್ಡ್ಸ್ ಭಾರತದ ಈ ಸಹಾಯ ದಯಾಳು ಮನೋಭಾವ ಪ್ರಶಂಸನಾರ್ಹ ಎಂದಿದ್ದಾರೆ. ಇದರ ಜೊತೆಗೆ ಕೆರಿಬಿಯನ್ ದ್ವೀಪ ಸಮೂಹ ಭಾರತದೊಂದಿಗಿನ ಈ ಸಂಬಂಧವನ್ನು ಮತ್ತಷ್ಟು ಮುಂದುವರಿಸಲು ಬಯಸುತ್ತದೆ ಎಂದಿದ್ದಾರೆ. ಭಾರತ vs ಇಂಗ್ಲೆಂಡ್: ರನ್ ಮಷಿನ್ ವಿರಾಟ್ ಕೊಹ್ಲಿ ದಾಖಲೆ ಈ ವಿಡೊಯೋ ಸಂದೇಶವನ್ನು ಗಯಾನದಲ್ಲಿರುವ ಭಾರತದ ಹೈಕಮಿಶನ್ ಟ್ವಿಟ್ಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

"ಲಸಿಕೆಯ ರೂಪದಲ್ಲಿ ನಮ್ಮ ದೇಶಕ್ಕೆ ನೀಡಿದ ಅದ್ಭುತವಾದ ಕೊಡುಗೆಗಾಗಿ ಭಾರತಕ್ಕೆ ಧನ್ಯವಾದಗಳು. ಆಂಟಿಗುವಾ ಮತ್ತು ಬಾರ್ಬುಡಾನ್ ಜನತೆಯ ಪರವಾಗಿ ತುಂಬಾ ಧನಗುವಾದಗಳು" ಎಂದು ಸರ್ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ. "ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಮ್ಮ ಭಾಗದ ಹೈಕಮಿಶನರ್‌ಗೆ ಧನ್ಯವಾದಗಳು. ಈ ವಿಶಾಲ ಮನೋಭಾವ ತೋರಿದ ಕಾರಣಕ್ಕೆ ಭಾರತದ ಎಲ್ಲಾ ಜನತೆಗೂ ನಾವು ಧನ್ಯವಾದವನ್ನು ಸಲ್ಲಿಸುತ್ತೇವೆ" ಎಂದು ಈ ವಿಡಿಯೋದಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಪ್ರತಿಕ್ರಿಯಿಸಿದ್ದಾರೆ.

ಕಿಶನ್ ಸ್ಫೋಟಕ ಅರ್ಧಶತಕ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿಶ್ವದಾದ್ಯಂತ ಇತರ ದೇಶಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಭಾರತ ಲಸಿಕೆಯನ್ನು ನೀಡುತ್ತಿದೆ. ಇದರ ಬಾಗವಾಗಿ ಕೆರಿಬಿಯನ್ ರಾಷ್ಟ್ರಗಳು ಭಾರತದಿಂದ ಕರೋನಾ ವೈರಸ್ ಲಸಿಕೆಗಳನ್ನು ಪಡೆದುಕೊಂಡಿವೆ.

This News Article Is A Copy Of MYKHEL