3ನೇ ಟಿ20ಗೆ ವಿನ್ನಿಂಗ್ ಕಾಂಬಿನೇಶನ್ ಬದಲಾಯಿಸ್ತಾರಾ ಕೊಹ್ಲಿ? ಕೆಎಲ್ ರಾಹುಲ್ ಸ್ಥಾನ ಉಳಿಯುತ್ತಾ?

15-03-21 12:53 pm       source: MYKHEL   ಕ್ರೀಡೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದರೆ ಬೌಲಿಂಗ್‌ನಲ್ಲಿ ಎಲ್ಲ ಆಟಗಾರರೂ ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲವಾದರು. ಹೀಗಾಗಿ ಮೂರನೇ ಪಂದ್ಯಕ್ಕೆ ಭಾರತದ ಆಡುವ ಬಳದಲ್ಲಿ ಬದಲಾವಣೆಯಾಗುತ್ತಾ ಎಂಬುದು ಪ್ರಶ್ನೆಯಾಗಿದೆ.

ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಎರಡು ಬದಲಾವಣೆ ಮಾಡಿ ಕಣಕ್ಕಿಳಿದಿತ್ತು. ಆರಂಭಿಕನಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಿಖರ್ ಧವನ್ ಬದಲಿಗೆ ಇಶಾನ್ ಕಿಶನ್ ಅವಕಾಶವನ್ನು ಪಡೆದುಕೊಂಡರು. ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ದಾಳಿಯಿಂದ ಮಿಂಚಿದ್ದ ಅಕ್ಷರ್ ಪಟೇಲ್ ಎರಡನೇ ಪಂದ್ಯದಿಂದ ಹೊರಗುಳಿದು ಆ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಲಾಗಿತ್ತು. ಭಾರತ vs ಇಂಗ್ಲೆಂಡ್:

ರನ್ ಮಷಿನ್ ವಿರಾಟ್ ಕೊಹ್ಲಿ ದಾಖಲೆ ಎರಡನೇ ಪಂದ್ಯದಲ್ಲಿ ಭಾರತ ತಂಡದ ಈ ಸಂಯೋಜನೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು. ಹೀಗಾಗಿ ಇದರಲ್ಲಿ ಬದಲಾವಣೆ ಮಾಡುವ ಸಂಭವ ತೀರಾ ಕಡಿಮೆಯಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿಯೂ ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ವಿಫಲರಾಗಿದ್ದಾರೆ. ಅವರ ಸ್ಥಾನದ ಬಗ್ಗೆ ಮಾತ್ರ ಅನುಮಾನಗಳಿವೆ. ಆರಂಭಿಕ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿಯನ್ನು ನೀಡಲಾಗಿತ್ತು. ಹೀಗಾಗಿ ಕೆಎಲ್ ರಾಹುಲ್ ರೋಹಿತ್ ಶರ್ಮಾಗೆ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ.

ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆಗಳು ಕಡಿಮೆಯಿದೆ. ಕಿಶನ್ ಸ್ಫೋಟಕ ಅರ್ಧಶತಕ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಭಾರತೀಯ ತಂಡದಲ್ಲಿ ಆಯ್ಕೆಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿ ಯಾರಿಗೆಲ್ಲಾ ಅವಕಾಶವನ್ನು ನೀಡುತ್ತಿದ್ದಾರೋ ಅವರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಈ ಆಟಗಾರರನ್ನು ಮುಂದಿನ ಪಂದ್ಯದಿಂದ ಹೊರಗಿಡಲಾಗದ ಪರಿಸ್ಥಿತಿಯಿದೆ. ಎರಡನೇ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಿದ ಹಿನ್ನೆಲೆಯಲ್ಲಿ ವಿನನಿಂಗ್ ಕಾಂಬಿನೇಶನ್ ಬದಲಾವಣೆ ಕಷ್ಟ.

This News Article Is A Copy Of MYKHEL