ಇಂಗ್ಲೆಂಡ್ ಓಪನ್‌ನಿಂದ ಹಿಂದೆ ಸರಿದ ಕರೋಲಿನಾ ಮರಿನ್: ಲಾಭ ಪಡೆಯಲು ಪಿವಿ ಸಿಂಧು ಸಜ್ಜು

16-03-21 12:37 pm       Source: MYKHEL   ಕ್ರೀಡೆ

2021ರಲ್ಲಿ ಅದ್ಭುತ ಆರಂಭವನ್ನು ಪಡೆದ ಬ್ಯಾಡ್ಮಿಂಟನ್‌ನ ಅಗ್ರಶ್ರೇಯಾಂಕಿತ ಆಟಗಾರ್ತಿ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕರೋಲಿನಾ ಮರಿನ್ ಗಾಯದ ಹಿನ್ನಲೆಯಲ್ಲಿ ಆಲ್‌ ಇಂಗ್ಲೆಂಡ್ ಓಪನ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

2021ರಲ್ಲಿ ಅದ್ಭುತ ಆರಂಭವನ್ನು ಪಡೆದ ಬ್ಯಾಡ್ಮಿಂಟನ್‌ನ ಅಗ್ರಶ್ರೇಯಾಂಕಿತ ಆಟಗಾರ್ತಿ ಮೂರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕರೋಲಿನಾ ಮರಿನ್ ಗಾಯದ ಹಿನ್ನಲೆಯಲ್ಲಿ ಆಲ್‌ ಇಂಗ್ಲೆಂಡ್ ಓಪನ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದನ್ನು ಅವರು ಬಹಿರಂಗ ಪಡಿಸಿದರು. ರಿಯೋ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತೆಯಾಗಿರುವ ಕರೋಲಿನಾ ಮರಿನ್ ಮುಂಬರುವ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್‌ನ ಈ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಮಾರ್ಚ್ 17ರಿಂದ ಆಲ್‌ ಇಂಗ್ಲೆಂಡ್ ಓಪನ್ ಆರಂಭವಾಗಲಿದೆ.

ಸ್ವಿಸ್ ಓಪನ್ 2021: ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು ಈ ಪ್ರತಿಷ್ಟಿತ ಟೂರ್ನಿಯಲ್ಲಿ ಕರೋಲಿನಾ 2015ರಲ್ಲಿ ಗೆಲುವಿನ ಸವಿ ಕಂಡಿದ್ದರು. ಆದರೆ ಸ್ವಿಸ್ ಓಪನ್ ವೇಳೆ ಉಂಟಾದ ಗಾಯದ ಹಿನ್ನೆಲೆಯಲ್ಲಿ ಈ ಟೂರ್ನಿ ಟೋಕಿಯೋ ಒಲಿಂಪಿಕ್ಸ್‌ನ ಕ್ವಾಲಿಫೈಯರ್ ಆಗಿಲ್ಲವಾದ ಕಾರಣ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇನ್ನು ಕರೋಲಿನಾ ಮರಿನ್ ಅವರ ಈ ನಿರ್ಧಾರ ಪಿ ಸಿಂಧುಗೆ ಲಾಭವಾಗಬಹುದು ಎಂಬ ನಿರೀಕ್ಷೆಯಿದೆ. ಈ ಹಿಂದಿನ ಹಲವು ಪ್ರಮುಖ ಟೂರ್ನಿಗಳಲ್ಲಿ ಗೆಲುವಿಗೆ ಪಿಸಿ ಸಿಂಧುಗೆ ಕರೋಲಿನಾ ಅಡ್ಡಿಯಾಗಿದ್ದರು. 2019ರ ವಿಶ್ವ ಚಾಂಪಿಯನ್ ಪಿವಿ ಸಿಂಧು ಈ ಬಾರಿ ಅಗ್ರ ಶ್ರೇಯಾಂಕಿತೆ ಕರೋಲಿನಾ ಅಲಭ್ಯತೆಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ ಫೈನಲ್ಸ್‌ಗೆ ಅದೃಷ್ಟವಶಾತ್ ಅರ್ಹತೆ ಪಡೆದ ಪಿವಿ ಸಿಂಧು! ಆಲ್ ಇಂಗ್ಲೆಂಡ್ ಓಪನ್ 2021 ರಿಂದ ಮರಿನ್ ಹೊರಗುಳಿಯುವುದರೊಂದಿಗೆ ತೈವಾನ್‌ನ ತೈ ತ್ಸು ಯಿಂಗ್ ಮತ್ತು ಚೀನಾದ ಚೆನ್ ಯುಫೈ ಅವರೂ ಕೂಡ ಇಲ್ಲದಿರುವುದು, ಪಿವಿ ಸಿಂಧು ಅವರಿಗೆ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಓಪನ್ ಗೆಲ್ಲುವ ಹಾದಿ ತೆರೆದಿದೆ.

This News Article Is A Copy Of MYKHEL