ಪಾದಾರ್ಪಣೆ ಪಂದ್ಯದಲ್ಲಿ ಸಾಲು ಸಾಲು ದಾಖಲೆಗಳ ಬರೆದ ಕನ್ನಡಿಗ ಕೃಷ್ಣ

24-03-21 11:01 am       Source: MYKHEL   ಕ್ರೀಡೆ

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತ 66 ರನ್‌ಗಳ ಭರ್ಜರಿ ಜಯ ಗಳಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಪೂಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತ 66 ರನ್‌ಗಳ ಭರ್ಜರಿ ಜಯ ಗಳಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಗೆಲುವಿಗೆ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಕೃನಾಲ್ ಪಾಂಡ್ಯ ಪ್ರಮುಖ ಕಾರಣರಾಗಿದ್ದರೆ, ಪಾದಾರ್ಪಣೆ ಪಂದ್ಯವಾಡಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ ತಂಡದ ಗೆಲುವಿನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು.

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 23) ನಡೆದ ಭಾರತ-ಇಂಗ್ಲೆಂಡ್ ಮೊದಲನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿದ್ದ ಪ್ರಸಿದ್ಧ್ ಕೃಷ್ಣ ಸಾಲು ಸಾಲು ದಾಖಲೆಗಳನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕೃಷ್ಣ ಅಲ್ಲೂ ಮಿಂಚುವ ನಿರೀಕ್ಷೆಯಿದೆ.

ಮೊದಲ ಭಾರತೀಯನೆಂಬ ಹಿರಿಮೆ

ಮೊದಲ ಭಾರತೀಯನೆಂಬ ಹಿರಿಮೆ ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯದ ಮೂಲಕ ತನ್ನ ವೃತ್ತಿ ಬದುಕಿನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಪ್ರಸಿದ್ಧ್ ಕೃಷ್ಣ 8.1 ಓವರ್‌ ಎಸೆದು, 54 ರನ್ ನೀಡಿ 4 ವಿಕೆಟ್ ಮುರಿದಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ 4 ವಿಕೆಟ್‌ ಪಡೆದ ಮೊದಲ ಭಾರತೀಯ ಎಂಬ ದಾಖಲೆಗೆ ಕೃಷ್ಣ ಕಾರಣರಾಗಿದ್ದಾರೆ.

ಏಕದಿನದಲ್ಲಿ ಅತ್ಯುತ್ತಮ ಬೌಲಿಂಗ್

ಏಕದಿನದಲ್ಲಿ ಅತ್ಯುತ್ತಮ ಬೌಲಿಂಗ್ ಭಾರತ ಪರ ಪಾದಾರ್ಪಣೆ ಮಾಡಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದ ಭಾರತೀಯ ಬೌಲರ್‌ಗಳ ಸಾಲಿನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮೊದಲ ಸ್ಥಾನದಲ್ಲಿದ್ದಾರೆ. ಕೃಷ್ಣ 54 ರನ್‌ಗೆ 4 ವಿಕೆಟ್ ಸಾಧನೆ ಮಾಡಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ನಿಯೋಲ್ ಡೇವಿಡ್ 21 ರನ್‌ಗೆ 3 ವಿಕೆಟ್, ತೃತೀಯ ಸ್ಥಾನದಲ್ಲಿರುವ ವರುಣ್ ಆ್ಯರನ್ 24 ರನ್‌ಗೆ 3 ವಿಕೆಟ್‌ ದಾಖಲೆ ಹೊಂದಿದ್ದಾರೆ.

ಭಾರತೀಯರಲ್ಲಿ ಬೆಸ್ಟ್ ಬೌಲಿಂಗ್ ಫಿಗರ್

ಭಾರತೀಯರಲ್ಲಿ ಬೆಸ್ಟ್ ಬೌಲಿಂಗ್ ಫಿಗರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾಗ ಅತ್ಯುತ್ತಮ ಬೌಲಿಂಗ್ ಫಿಗರ್ ತೋರಿಸಿರುವ ಭಾರತೀಯರ ದಾಖಲೆ ಪಟ್ಟಿಯಲ್ಲೂ ಪ್ರಸಿದ್ಧ್ ಕೃಷ್ಣ ಹೆಸರು ಸೇರಿಕೊಂಡಿದೆ. ಎಲ್ಲಾ ಕ್ರಿಕೆಟ್‌ ಮಾದರಿಗಳಲ್ಲಿನ ಬೆಸ್ಟ್‌ ಬೌಲಿಂಗ್ ಫಿಗರ್ ದಾಖಲೆ ಪಟ್ಟಿಯಿದು. ಈ ದಾಖಲೆ ಪಟ್ಟಿಯಲ್ಲಿರುವ ನರೇಂದ್ರ ನಿರ್ವಾನಿ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿ 61 ರನ್‌ಗೆ 8 ವಿಕೆಟ್ ಮುರಿಸಿದ್ದರು. ಇನ್ನು ಟಿ20 ಪಾದಾರ್ಪಣೆ ಪಂದ್ಯದಲ್ಲಿ ಬರೀಂದರ್ ಸ್ರನ್ 10 ರನ್‌ಗೆ 4 ವಿಕೆಟ್ ಕೆಡವಿದ್ದರು. ಈಗ ಪ್ರಸಿದ್ಧ್ ಕೃಷ್ಣ ಏಕದಿನ ಕ್ರಿಕೆಟ್‌ ಪಾದಾರ್ಪಣೆ ಪಂದ್ಯದಲ್ಲಿ 54 ರನ್‌ಗೆ 4 ವಿಕೆಟ್ ಸಾಧನೆ ಮಾಡಿದ್ದಾರೆ.

This News Article Is A Copy Of MYKHEL