ಸೆಲೆಬ್ರಿಟಿ ಸಿಪಿಎಲ್ ಟ್ರೋಫಿ ; ಅರ್ಜುನ್ ಕಾಪಿಕಾಡ್ ನೇತೃತ್ವದ ಕರಾವಳಿ ವಾರಿಯರ್ಸ್ ಗೆ ಸಿಪಿಎಲ್ ಟ್ರೋಫಿ

25-03-21 10:52 am       Mangalore Correspondent   ಕ್ರೀಡೆ

ನಗರದ ನೆಹರು ಮೈದಾನದಲ್ಲಿ ನಡೆದ 5ನೇ ವರ್ಷದ ಸೆಲೆಬ್ರಿಟಿ ಸಿಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅರ್ಜುನ್ ಕಾಪಿಕಾಡ್ ನೇತೃತ್ವದ ತಂಡ ಪ್ರಶಸ್ತಿ ಗೆದ್ದಿದೆ. 

ಮಂಗಳೂರು, ಮಾ.25 :  ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಮಂಗಳೂರು ಇದರ ವತಿಯಿಂದ ನಗರದ ನೆಹರು ಮೈದಾನದಲ್ಲಿ ನಡೆದ 5ನೇ ವರ್ಷದ ಸೆಲೆಬ್ರಿಟಿ ಸಿಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಅರ್ಜುನ್ ಕಾಪಿಕಾಡ್ ನೇತೃತ್ವದ ತಂಡ ಪ್ರಶಸ್ತಿ ಗೆದ್ದಿದೆ. 

ಮಾರ್ಚ್ 17ರಿಂದ 21ರ ವರೆಗೆ ನಡೆದ ಪಂದ್ಯದಲ್ಲಿ 8 ಕಲಾವಿದರು - ತಂತ್ರಜ್ಞರ ತಂಡಗಳು ಭಾಗವಹಿಸಿದ್ದವು.ಫೈನಲ್ ಪಂದ್ಯದಲ್ಲಿ ಸ್ವರೂಪ್ ಶೆಟ್ಟಿ ಮಾಲೀಕತ್ವದ ಅರ್ಜುನ್ ಕಾಪಿಕಾಡ್ ನಾಯಕತ್ವದ ಕರಾವಳಿ ವಾರಿಯರ್ಸ್‌ ಹಾಗೂ ವೆಂಕಟೇಶ್ ಪ್ರಭು ಮಾಲಿಕತ್ವದ ಸಂದೀಪ್ ಭಕ್ತ ನಾಯಕತ್ವದ ವಿಜಯಲಕ್ಷ್ಮಿ ವೀರಾಸ್ ಮುಖಾಮುಖಿಯಾಗಿದ್ದು
ಕರಾವಳಿ ವಾರಿಯರ್ಸ್‌ ಪ್ರಥಮ ಟ್ರೋಫಿ ಹಾಗೂ 75,000 ನಗದು ಮತ್ತು ವಿಜಯಲಕ್ಷ್ಮಿ ವೀರಾಸ್ ದ್ವಿತೀಯ ಟ್ರೋಫಿ ಹಾಗೂ 50,000 ನಗದು ಪ್ರಶಸ್ತಿ ಗಿಟ್ಟಿಸಿಕೊಂಡವು. 

ವೈಯಕ್ತಿಕವಾಗಿ ಕರಾವಳಿ ವಾರಿಯರ್ಸ್‌ ತಂಡದ ಸಚಿನ್ ಶೆಟ್ಟಿ ಸರಣಿ ಪುರುಷೋತ್ತಮ ಪ್ರಶಸ್ತಿ ಹಾಗೂ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದರೆ ಅದೇ ತಂಡದ ಶುಭಂ‌ ಕುಲಾಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಚಾಲೆಂಜಿಂಗ್ ಸ್ಟಾರ್ ತಂಡದ ಸಂತೋಷ್ ಕಡಂದಲೆ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆದರು.

ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಮೇಯರ್  ಪ್ರೇಮಾನಂದ ಶೆಟ್ಟಿ, ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮಾಜಿ ಮೇಯರ್ ಮಹಾಬಲ ಮಾರ್ಲ, ಮಂಗಳೂರು ಸಂಚಾರಿ ಪೊಲೀಸ್ ಎ.ಸಿ.ಪಿ ನಟರಾಜ್, ಕೆ ಎಂ ಎಫ್ ಮಾರ್ಕೆಟಿಂಗ್ ಮ್ಯಾನೇಜರ್ ರವಿ, ಕಾಂಚನ ಮೋಟರ್ಸ್ ಕಶ್ಯಪ್ ಹೆಬ್ಬಾರ್, ಡೀಲ್ ಬಡಿ ಎಂಡಿ ಶಾಹಿದ್, ಉದ್ಯಮಿ ಪ್ರಿಯಾಂಕ ಅಶ್ವಿನ್, ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್, ನಿರ್ಮಾಪಕರಾದ ಆನಂದ್ ಕುಂಪಲ, ಹರೀಶ್ ಶೇರಿಗಾರ್, ಗೌರವಾಧ್ಯಕ್ಷರು ಕಿಶೋರ್ ಡಿ ಶೆಟ್ಟಿ, ಅಧ್ಯಕ್ಷರು ಮೋಹನ್ ಕೊಪ್ಪಳ ಕದ್ರಿ, ಉಪಾಧ್ಯಕ್ಷ ಸುಹಾನ್ ಪ್ರಸಾದ್, ಕೋಶಾಧಿಕಾರಿ ವಿಶ್ವಾಸ್ ಗುರುಪುರ,  ಗೋಕುಲ್ ಕದ್ರಿ, ಸ್ಥಾಪಕಾಧ್ಯಕ್ಷೆ ಅಶ್ವಿನಿ ಪ್ರಕಾಶ್ ಶೆಟ್ಟಿ, ವಕೀಲ ಮೊಹನದಾಸ್ ರೈ, ಪ್ರಜ್ವಲ್ ಅತ್ತಾವರ, ವಿನಾಯಕ್ ಜಪ್ಪು, ರಾಜೇಶ್ ಸ್ಕೈಲಾರ್ಕ್, ಎಂಟು ತಂಡಗಳ ಮಾಲಕರು, ನಾಯಕರು ಉಪಸ್ಥಿತರಿದ್ದರು. ಲಕ್ಷ್ಮೀಶ್ ಸುವರ್ಣ ನಿರೂಪಿಸಿದರು.

Actor Arjun kapikad team bags victory in CPL cricket tournament organised by Costalwood film organisation in Mangalore.