'ವಿಶ್ವದ ಅತ್ಯಂತ ಕೌಶಲ್ಯಯುತ ವೈಟ್‌ಬಾಲ್ ಬೌಲರ್' ಎಂದು ಭಾರತೀಯನನ್ನು ಪ್ರಶಂಸಿಸಿದ ಮೈಕಲ್ ವಾನ್

25-03-21 01:23 pm       Source: MYKHEL   ಕ್ರೀಡೆ

ಸದಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಮೈಕಲ್‌ವಾನ್ ಇತ್ತೀಚೆಗಷ್ಟೇ ಏಕದಿನ ಸರಣಿಯಲ್ಲಿ ಭಾರತ 3-0 ಸಂತರದಿಂದ ಸರಣಿ ಗೆಲ್ಲಲಿದೆ ಎಂದಿದ್ದರು.

ಸದಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಮೈಕಲ್‌ವಾನ್ ಇತ್ತೀಚೆಗಷ್ಟೇ ಏಕದಿನ ಸರಣಿಯಲ್ಲಿ ಭಾರತ 3-0 ಸಂತರದಿಂದ ಸರಣಿ ಗೆಲ್ಲಲಿದೆ ಎಂದಿದ್ದರು. ಈಗ ಭಾರತೀಯ ಬೌಲರ್‌ ಓರ್ವನನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ನೀಡಿದ ಸ್ಥಿತ ಪ್ರದರ್ಶನವನ್ನು ಗಮನಿಸಿ ಈ ಪ್ರಶಂಸೆಯನ್ನು ಮೈಕಲ್ ವಾನ್ ವ್ಯಕ್ತಪಡಿಸಿದ್ದಾರೆ. ಮೈಕಲ್‌ವಾನ್ ಈ ರೀತಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಬಗ್ಗೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಯಲ್ಲಿ ನೀಡಿದ ಅದ್ಭುತ ಪ್ರದರ್ಶನ ಮೈಕಲ್‌ವಾನ್ ಮೆಚ್ಚುಗೆಗೆ ಪಾತ್ರವಾಗಿದೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿಯೇ ಭುವನೇಶ್ವರ್ ಕುಮಾರ್ ಅತ್ಯಂತ ಕೌಶಲ್ಯಯುತವಾದ ಬೌಲರ್ ಎಂದು ಬಣ್ಣಿಸಿದ್ದಾರೆ.

"ಭುವನೇಶ್ವರ್ ಕುಮಾರ್ ವೈಟ್‌ಬಾಲ್ ಮಾದರಿಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಕೌಶಲ್ಯಯುತವಾದ ಬೌಲರ್. ಬೇರೆ ಯಾವುದೇ ಬೌಲರ್ 80 ಮೇಲುಗಳ ಆಸುಪಾಸಿನಲ್ಲಿ ಬೌಲ್‌ಮಾಡುತ್ತಾ ಆ ರೀತಿಯಾಗಿ ತಿರುವು ಪಡೆಯುವಂತೆ ಮಾಡುವುದನ್ನು ಯೋಚಿಸಲೂ ಸಾಧ್ಯವಿಲ್ಲ" ಎಂದು ಮೈಕಲ್ ವಾನ್ ಹೇಳಿದ್ದಾರೆ. "ಭುವನೇಶ್ವರ್ ಕುಮಾರ್ ಅವರಂತೆ ಚೆಂಡನ್ನು ಸೂಕ್ಷ್ಮವಾಗಿ ಚಲಸುವಂತೆ ಮಾಡುವ ಇನ್ನೋರ್ವ ಬೌಲರ್ ನನಗೆ ತಿಳಿದಿಲ್ಲ. ಅದು ಇನ್ ಸ್ವಿಂಗ್ ಔಟ್ ಸ್ವಿಂಗ್ ಅಥವಾ ಕಟ್ಟರ್ಸ್ ಆಗಿರಬಹುದು.

ಆತ ಯಾರ್ಕರ್ ಹಾಘೂ ಬೌನ್ಸರ್‌ಗಳನ್ನೂ ಎಸೆಯಬಲ್ಲ. ಯಾವಾಗಲೂ ಅಲ್ಲ, ಬ್ಯಾಟ್ಸ್‌ಮನ್ ಕ್ರೀಸ್‌ಗೆ ಕಚ್ಚಿ ನಿಲ್ಲಲು ಪ್ರಯತ್ನಿಸಾಧ ಕುಮಾರ್ ಬೌನ್ಸರ್‌ಗಳನ್ನು ಎಸೆಯುತ್ತಾರೆ ಇದಕ್ಕಿಂತ ಕೌಶಲ್ಯಯುತವಾದ ಬೌಲರ್ ಬಗ್ಗೆ ನನಗೆ ತಿಳಿದಿಲ್ಲ" ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಮೈಕಲ್‌ ವಾನ್.

"ಗಂಡೆಗೆ 90 ಮೈಲಿಯಷ್ಟು ವೇಗವಾಗಿ ಬೌಲಿಂಗ್ ಮಾಡಬಲ್ಲ ಯಾವುದೇ ಬೌಲರ್‌ಅನ್ನು ವಾರದ ಯಾವುದೇ ದಿನವಾದರೂ ನಾನು ಎದುರಿಸಬಲ್ಲೆ. ಕಾರಣ ವೇಗ ವೇಗದ ಬೌಲಿಂಗ್ ನನಗೆ ಇಷ್ಟ, ಆದರೆ ಭುವನೇಶ್ವರ್ ಕುಮಾರ್ ಅವರಂತಾ ಬೌಲರ್ ಬಂದಾಗ ನೀವು ಸಾಕಷ್ಟು ಯೋಚಿಸಬೇಕಾಗುತ್ತದೆ" ಎಂದು ಮೈಕಲ್ ವಾನ್ ಹೇಳಿದ್ದಾರೆ.

This News Article Is A Copy Of MYKHEL