ISSF World Cup: 25 ಮೀ. ಪಿಸ್ತೂಲ್‌ನಲ್ಲಿ ಭಾರತದ ವನಿತೆಯರಿಗೆ ಚಿನ್ನ

26-03-21 10:35 am       Source: MYKHEL   ಕ್ರೀಡೆ

ಭಾರತದ ಪ್ರತಿಭಾನ್ವಿತ ಶೂಟರ್‌ಗಳಾದ ಚಿಂಕಿ ಯಾದವ್, ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಅವರಿದ್ದ ತಂಡ 25 ಮೀ.

ನವದೆಹಲಿ: ಭಾರತದ ಪ್ರತಿಭಾನ್ವಿತ ಶೂಟರ್‌ಗಳಾದ ಚಿಂಕಿ ಯಾದವ್, ಮನು ಭಾಕರ್ ಮತ್ತು ರಾಹಿ ಸರ್ನೋಬತ್ ಅವರಿದ್ದ ತಂಡ 25 ಮೀ. ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆ ಮೂರು ಚಿನ್ನದ ಪದಕಗಳು ಸೇರ್ಪಡೆಯಾಗಿವೆ.

ಭಾರತೀಯ ವನಿತಾ ತಂಡ ಫೈನಲ್‌ ಹಂತದಲ್ಲಿ ಒಟ್ಟು 17 ಪಾಯಿಂಟ್ಸ್ ಕಲೆ ಹಾಕಿ ಪೋಲ್ಯಾಂಡ್‌ನ ಜೊವಾನ್ನಾ ಐವೊನಾ ವಾವರ್ಜೊನೊವ್ಸ್ಕಾ, ಜುಲಿಟಾ ಬೋರೆಕ್ ಮತ್ತು ಅಗ್ನಿಸ್ಕಾ ಕೋರೆಜ್ವೊ ಅವರನ್ನು ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿತು.

ಪೋಲ್ಯಾಂಡ್ ತಂಡ ಗಳಿಸಿದ್ದು 7 ಅಂಕ ಮಾತ್ರ. ಈ ಚಿನ್ನದ ಪದಕದೊಂದಿಗೆ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲೇ ಮುಂದುವರೆದಿದೆ. ಭಾರತದ ಖಾತೆಯಲ್ಲೀಗ 10 ಚಿನ್ನ, 6 ಬೆಳ್ಳಿ, 5 ಕಂಚಿನ ಪದಕಗಳು ಸೇರಿ ಒಟ್ಟಿಗೆ 21 ಪದಕಗಳಾಗಿವೆ. ದ್ವಿತೀಯ ಸ್ಥಾನದಲ್ಲಿರುವ ಯುಎಸ್‌ಎ 3 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದಿದೆ.

ಇದಕ್ಕೂ ಮುನ್ನ ಭಾರತದ ಅಂಜುಂ ಮೌಡ್ಗಿಲ್, ಶ್ರೇಯಾ ಸಕ್ಸೇನಾ, ಗಾಯತ್ರಿ ನಿತ್ಯಾನಂದಂ ತಂಡ 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ ಬೆಳ್ಳಿ ಪದಕ ಜಯಿಸಿತ್ತು.

This News Article Is A Copy Of MYKHEL