ಐಪಿಎಲ್ 2021: ಆರ್‌ಸಿಬಿಯನ್ನು ಕೂಡಿಕೊಳ್ಳಲು ಭಾರತಕ್ಕೆ ಬಂದಿಳಿದ ಮ್ಯಾಕ್ಸ್‌ವೆಲ್

30-03-21 01:49 pm       Source: MYKHEL   ಕ್ರೀಡೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ಆರ್‌ಸಿಬಿ ತಂಡಕ್ಕೆ ಈ ಬಾರಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಯಾಗಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ಆರ್‌ಸಿಬಿ ತಂಡಕ್ಕೆ ಈ ಬಾರಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸಿಸ್ ಸ್ಪೋಟಕ ಬ್ಯಾಟ್ಸ್‌ಮನ್ ಈಗ ಭಾರತವನ್ನು ತಲುಪಿದ್ದು ಆರ್‌ಸಿಬಿ ಶಿಬಿರದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.

ಆರ್‌ಸಿಬಿ ತಂಡದ ಶಿಬಿರದಲ್ಲಿ ಪಾಳ್ಗೊಳ್ಳುವ ಮುನ್ನ ಒಂದು ವಾರಗಳ ಕಡ್ಡಾಯ ಕ್ವಾರಂಟೈನ್‌ಅನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಚೆನ್ನೈನಲ್ಲಿ ಪೂರೈಸಲಿದ್ದಾರೆ. ಬಳಿಕ ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆಗೆ ಒಳಪಟ್ಟು ಆರ್‌ಸಿಬಿ ತಂಡದ ಬಯೋಬಬಲ್‌ಅನ್ನು ಸೇರಿಕೊಳ್ಳಲಿದ್ದಾರೆ.

ಐಪಿಎಲ್ 14ನೇ ಆವೃತ್ತಿಗೆ ಸಿದ್ಧಪಡಿಸಿದ ಎಸ್‌ಒಪಿ ಪ್ರಕಾರ ಭಾರತ-ಇಂಗ್ಲೆಂಡ್ ಸರಣಿಯ ಬಯೋಬಬಲ್‌ನಂದ ನೇರವಾಗಿ ಐಪಿಎಲ್ ಬಬಲ್‌ಗೆ ಸೇರಿಕೊಂಡ ಆಟಗಾರರನ್ನು ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.

ಇನ್ನು ಈ ಕ್ವಾರಂಟೈನ್ ಸಂದರ್ಭದಲ್ಲಿ ಪ್ರತಿ ಆಟಗಾರ ಕೂಡ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದು ನೆಗೆಟಿವ್ ವರದಿಯನ್ನು ಪಡೆದುಕೊಂಡು ಬಳಿಕ ತಂಡದ ಬಯೋಬಬಲ್ ಪ್ರವೇಶಿಸಬೇಕಿದೆ. ಬಳಿಕವೇ ಈ ಆಟಗಾರರಿಗೆ ಹೊರಾಂಗಣ ಅಭ್ಯಾಸ ಹಾಗೂ ನೆಟ್ ತಾಲೀಮಿನಲ್ಲಿ ಭಾಗಿಯಾಗುವ ಅವಕಾಶವಿದೆ.

This News Article Is A Copy Of MYKHEL