ಎನ್‌ಐಎಸ್‌ ಪಾಟಿಯಾಲದ 26 ಅಥ್ಲೀಟ್‌ಗಳಿಗೆ ಕೊರೊನಾ ಪಾಸಿಟಿವ್

31-03-21 06:55 pm       Source: MYKHEL   ಕ್ರೀಡೆ

ಪಂಜಾಬ್‌ನ ಪಾಟಿಯಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ (ಎನ್‌ಎಎಸ್) ಸಂಸ್ಥೆಯಲ್ಲಿನ ಒಟ್ಟು 26 ಮಂದಿ ಅಥ್ಲೀಟ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಈ ಸಂಗತಿಯನ್ನು ಪಿಟಿಐಗೆ ತಿಳಿಸಿದೆ.

ಪಾಟಿಯಾಲ: ಪಂಜಾಬ್‌ನ ಪಾಟಿಯಾಲದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೋರ್ಟ್ಸ್‌ (ಎನ್‌ಎಎಸ್) ಸಂಸ್ಥೆಯಲ್ಲಿನ ಒಟ್ಟು 26 ಮಂದಿ ಅಥ್ಲೀಟ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಈ ಸಂಗತಿಯನ್ನು ಪಿಟಿಐಗೆ ತಿಳಿಸಿದೆ.

ಕ್ರೀಡಾಪಟುಗಳು+ಸಿಬ್ಬಂದಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 26 ಅಥ್ಲೀಟ್‌ಗಳ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿರುವ ಕ್ರೀಡಾಪಟುಗಳಲ್ಲಿ ಯಾರೂ ಕೂಡ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಅಥ್ಲೀಟ್‌ಗಳಿಲ್ಲ ಎಂದು ಸಾಯ್ ಮಾಹಿತಿ ನೀಡಿದೆ.

ಕೋವಿಡ್-19 ಸೋಂಕಿತ ಅಥ್ಲೀಟ್‌ಗಳಲ್ಲಿ ಭಾರತೀಯ ಪುರುಷರ ಬಾಕ್ಸಿಂಗ್ ಕೋಚ್ ಸಿಎ ಕುಟ್ಟಪ್ಪ ಮತ್ತು ಶಾಟ್‌ಪುಟ್ ಕೋಚ್ ಮಹೀಂದರ್ ಸಿಂಗ್ ಧಿಲ್ಲಾನ್ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕಿತ ಅಥ್ಲೀಟ್‌ಗಳು ಸದ್ಯ ಐಸೊಲೇಶನ್‌ನಲ್ಲಿದ್ದಾರೆ.

'380 ಕೋವಿಡ್-19 ಪರೀಕ್ಷೆಗಳಲ್ಲಿ 26 ಅಥ್ಲೀಟ್‌ಗಳ ಫಲಿತಾಂಶ ಪಾಸಿಟಿವ್ ಬಂದಿದೆ. ಆದರೆ ಒಳ್ಳೆಯ ಸಂಗತಿ ಏನೆಂದರೆ ಅವರ್ಯಾರೂ ಒಲಿಂಪಿಕ್‌ ಬೌಂಡೆಡ್ ಅಥ್ಲೀಟ್‌ಗಳಲ್ಲ. ಪಾಸಿಟಿವ್ ಬಂದಿರುವ ಅಥ್ಲೀಟ್‌ಗಳು ಐಸೊಲೇಶನ್‌ನಲ್ಲಿದ್ದಾರೆ. ಇಡೀ ಕ್ಯಾಂಪಸ್ ಅನ್ನು ಸ್ಯಾನಿಟೈಸ್ಡ್ ಮಾಡಲಾಗಿದೆ,' ಎಂದು ಸಾಯ್, ಪಿಟಿಐಗೆ ಹೇಳಿದೆ.

This News Article Is A Copy Of MYKHEL