ಪಾಕಿಸ್ತಾನಕ್ಕೆ ವೀಸಾ ಗ್ಯಾರಂಟಿ ಸಮಸ್ಯೆ ಶೀಘ್ರ ಬಗೆಹರಿಸಲಿದೆ ಬಿಸಿಸಿಐ

01-04-21 09:17 pm       Source: MYKHEL   ಕ್ರೀಡೆ

ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ವೀಸಾ ಗ್ಯಾರಂಟಿ ಕುರಿತ ಸಮಸ್ಯೆಯನ್ನು ಒಂದು ತಿಂಗಳ ಒಳಗಾಗಿ ಬಗೆಹರಿಸಿಕೊಳ್ಳುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಿಳಿಸಿದೆ.

ನವದೆಹಲಿ: ಇದೇ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ವೀಸಾ ಗ್ಯಾರಂಟಿ ಕುರಿತ ಸಮಸ್ಯೆಯನ್ನು ಒಂದು ತಿಂಗಳ ಒಳಗಾಗಿ ಬಗೆಹರಿಸಿಕೊಳ್ಳುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಿಳಿಸಿದೆ.

ವೀರೇಂದ್ರ ಸೆಹ್ವಾಗ್! ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯ ಸಂಬಂಧ ಭಾರತಕ್ಕೆ ಬರಲಿರುವ ಪಾಕಿಸ್ತಾನ ತಂಡಕ್ಕೆ ಗ್ಯಾರಂಟಿ ವೀಸಾ ಮತ್ತು ತೆರಿಗೆ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ಬಿಸಿಸಿಐ ಭರವಸೆ ನೀಡಿದೆ. ಸದ್ಯ ಬಿಸಿಸಿಐ, 14ನೇ ಆವೃತ್ತಿಯ ಐಪಿಎಲ್ ಆಯೋಜನೆಯ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ವಿಶ್ವಕಪ್‌ ಟಿ20ಗೆ ಬರಲಿರುವ ತನ್ನ ಆಟಗಾರರಿಗೆ ಗ್ಯಾರಂಟಿ ವೀಸಾ ನೀಡುವಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಬಿಸಿಸಿಐಯನ್ನು ಕೇಳಿಕೊಂಡಿತ್ತು.

ಈ ಬಗ್ಗೆ ಸಭೆಯಲ್ಲಿ ಐಸಿಸಿ ಜೊತೆ ಚರ್ಚಿಸಿರುವ ಬಿಸಿಸಿಐ ಮುಂದಿನ ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ.

ಐಸಿಸಿ ಮತ್ತು ಬಿಸಿಸಿಐ ಕೂಡ ಒಂದೆರಡು ವರ್ಷಗಳಿಂದ ವಿಶ್ವಕಪ್ ಆಯೋಜಿಸಲು ತೆರಿಗೆ ವಿನಾಯಿತಿಗಳ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದವು. ಆ ಸಮಸ್ಯೆಯನ್ನೂ ಒಂದು ತಿಂಗಳ ಒಳಗಾಗಿ ಪರಿಹರಿಸುವುದಾಗಿ ಬಿಸಿಸಿಐ ಹೇಳಿದೆ.

This News Article Is A Copy Of MYKHEL