ಐಪಿಎಲ್ 2021: ಚೆನ್ನೈಗೆ ಬಂದಿಳಿದ ಎಂಐಯ ಬೌಲ್ಟ್, ಮಿಲ್ನೆ, ನೀಶಮ್

03-04-21 09:50 am       Source: MYKHEL   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗಾಗಿ ನ್ಯೂಜಿಲೆಂಡ್‌ನ ಆಟಗಾರರಾದ ಟ್ರೆಂಟ್ ಬೌಲ್ಟ್, ಆ್ಯಡಂ ಮಿಲ್ನೆ ಮತ್ತು ಜಿಮ್ಮಿ ನೀಶಮ್ ಏಪ್ರಿಲ್ 2ರ ಶುಕ್ರವಾರ ಚೆನ್ನೈಗೆ ಬಂದು ತಲುಪಿದ್ದಾರೆ.

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗಾಗಿ ನ್ಯೂಜಿಲೆಂಡ್‌ನ ಆಟಗಾರರಾದ ಟ್ರೆಂಟ್ ಬೌಲ್ಟ್, ಆ್ಯಡಂ ಮಿಲ್ನೆ ಮತ್ತು ಜಿಮ್ಮಿ ನೀಶಮ್ ಏಪ್ರಿಲ್ 2ರ ಶುಕ್ರವಾರ ಚೆನ್ನೈಗೆ ಬಂದು ತಲುಪಿದ್ದಾರೆ. ಈ ಮೂವರೂ ಆಟಗಾರರು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

13ನೇ ಆವೃತ್ತಿಯ ಐಪಿಎಲ್‌ನಲ್ಲಿ ಟ್ರೆಂಟ್ ಬೌಲ್ಟ್ ಉತ್ತಮ ಪ್ರದರ್ಶನ ನೀಡಿದ್ದರು. ಕಳೆದ ಸೀಸನ್‌ನಲ್ಲಿ ಎಡಗೈ ಬೌಲರ್ ಬೌಲ್ಟ್ 25 ವಿಕೆಟ್‌ಗಳೊಂದಿಗೆ ಟೂರ್ನಿಯಲ್ಲಿ ಮೂರನೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮಿನುಗಿದ್ದರು. ಇನ್ನು ಇತ್ತೀಚೆಗೆ ನ್ಯೂಜಿಲೆಂಡ್ ಪರ ಟಿ20ಐ ಸರಣಿ ಆಡಿದ್ದ ಜೇಮ್ಸ್ ನೀಶಮ್ ಉತ್ತಮಪ್ರದರ್ಶನ ನೀಡಿ ಗಮನ ಸೆಳೆದಿದ್ದರು.


ನ್ಯೂಜಿಲೆಂಡ್ ಆಟಗಾರರು ಐಪಿಎಲ್ ಸಲುವಾಗಿ ಚೆನ್ನೈಗೆ ಬಂದಿರುವುದನ್ನು ಮುಂಬೈ ಇಂಡಿಯನ್ಸ್ ಟ್ವೀಟ್ ಮೂಲಕ ತಿಳಿಸಿದೆ. 'ರಾಷ್ಟ್ರೀಯ ಕರ್ತವ್ಯದಿಂದ ಐಪಿಎಲ್ ಡ್ಯೂಟಿಗೆ. ಮೂವರು ಚೆನ್ನೈಗೆ ತಲುಪಿದ್ದಾರೆ. ಟ್ರೆಂಟ್, ಆ್ಯಡಂ ಮತ್ತು ಜಿಮ್ಮಿಗೆ ಸುಸ್ವಾಗತ' ಎಂದು ಎಂಐ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಏಪ್ರಿಲ್ 9ರಿಂದ ಮೇ 30ರ ವರೆಗೆ 2021ರ ಐಪಿಎಲ್ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ 7:30 PMಕ್ಕೆ ಆರಂಭವಾಗಲಿದೆ.

This News Article Is A Copy Of MYKHEL