ಫಖರ್ ರನ್‌ಔಟ್, ಡಿ ಕಾಕ್ ಮೋಸದಾಟಕೆ ನೆಟ್ಟಿಗರು ಕಿಡಿ: ವಿಡಿಯೋ

05-04-21 12:19 pm       source: MYKHEL   ಕ್ರೀಡೆ

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 4) ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಏಕದಿನ ಪಂದ್ಯ ರೋಚಕ ಹಂತಕ್ಕೇರಿತ್ತು. ಪಾಕ್ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಝಮಾನ್ ವೀರೋಚಿತ ಬ್ಯಾಟಿಂಗ್‌ ನೀಡಿದ್ದರು.

ಜೋಹಾನ್ಸ್‌ಬರ್ಗ್: ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 4) ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಏಕದಿನ ಪಂದ್ಯ ರೋಚಕ ಹಂತಕ್ಕೇರಿತ್ತು. ಪಾಕ್ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಝಮಾನ್ ವೀರೋಚಿತ ಬ್ಯಾಟಿಂಗ್‌ ನೀಡಿದ್ದರು. ದ್ವಿಶತಕ ಬಾರಿಸಿ ಅಪರೂಪದ ದಾಖಲೆ ಪಟ್ಟಿ ಸೇರುವುದರಲ್ಲಿದ್ದ ಝಮಾನ್, ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೋಸದಾಟಕೆ ಬಲಿಯಾಗಿದ್ದರು.

ಫಖರ್ ಝಮಾನ್ ಸ್ಫೋಟಕ ಶತಕದಾಟಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು ಕ್ವಿಂಟನ್ ಡಿ ಕಾಕ್ ಅವರ ಮೋಸದಾಟಕೆ ಬೇಸರವೂ ವ್ಯಕ್ತಪಡಿಸಿದ್ದಾರೆ. ಆ ಪಂದ್ಯದಲ್ಲಿ ಫಖರ್ ಔಟ್ ತೀರ್ಪು ವಿವಾದಕ್ಕೀಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ವಿವಾದ ಹುಟ್ಟಿಸಿದ ಔಟ್ ತೀರ್ಪು

ವಿವಾದ ಹುಟ್ಟಿಸಿದ ಔಟ್ ತೀರ್ಪು

ದಕ್ಷಿಣ ಆಫ್ರಿಕಾ ನೀಡಿದ್ದ 342 ರನ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ತಂಡದಿಂದ ಆರಂಭಿಕರಾಗಿ ಆಡಿದ್ದ ಫಖರ್ ಝಮಾನ್ 155 ಎಸೆತಗಳಲ್ಲಿ 193 ರನ್ ಬಾರಿಸಿದ್ದರು. ಇದರಲ್ಲಿ 18 ಫೋರ್ಸ್, 10 ಸಿಕ್ಸರ್‌ಗಳು ಸೇರಿದ್ದವು. ಆ ಬಳಿಕ ಝಮಾನ್ 49.1 ಓವರ್‌ನಲ್ಲಿ ರನ್‌ಔಟ್ ಆಗಿ ನಿರ್ಗಮಿಸಿದ್ದರು. ಫಖರ್ ಔಟಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡತೊಡಗಿದೆ. ತೀವ್ರ ಚರ್ಚೆ ಹುಟ್ಟುಹಾಕಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ ನಿಯಮವೂ ಬದಲಾಗವೇಕು ಎಂದು ಕೆಲವರು ಹೇಳಿದ್ದಾರೆ.

ಕ್ವಿಂಟನ್ ಡಿ ಕಾಕ್ ಮೋಸದಾಟ

ಕ್ವಿಂಟನ್ ಡಿ ಕಾಕ್ ಮೋಸದಾಟ

ದ್ವಿಶತಕದ ಅಂಚಿನಲ್ಲಿದ್ದ ಫಖರ್ ಅವರು 49.1 ಓವರ್‌ನಲ್ಲಿ ಐಡೆನ್ ಮಾರ್ಕ್ರಮ್ ಥ್ರೋನಿಂದಾಗಿ ಔಟ್ ಆಗಿ ನಿರ್ಗಮಿಸಿದ್ದು ನಿಜ. ಆದರೆ ಝಮಾನ್ ಅವರನ್ನು ದಕ್ಷಿಣ ಆಫ್ರಿಕಾ ಆಟಗಾರರು ವಂಚಿಸಿದ ಪರಿಗೆ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಯಾಕೆಂದರೆ ಝಮಾನ್ ರನ್ ಪೂರೈಸುವುದರಲ್ಲಿದ್ದಾಗ ಕ್ವಿಂಟನ್ ಡಿ ಕಾಕ್ ಇನ್ನೊಂದು ಬದಿಯ ಸ್ಟಂಪ್‌ನತ್ತ ಝಮಾನ್ ಗಮನ ಹರಿಯುವಂತೆ ಫೇಕ್ ಫೀಲ್ಡಿಂಗ್ ನಟಿಸಿದ್ದರು. ಡಿ ಕಾಕ್ ನಡೆಗೆ ಪ್ರತಿಕ್ರಿಯಿಸಿ ಅತ್ತ ದಿಟ್ಟಿಸಿದ ಝಮಾನ್ ಔಟಾದರು. ಯಾಕೆಂದರೆ ಮಾರ್ಕ್ರಮ್ ಎಸೆದಿದ್ದ ಚೆಂಡು ಸೀದಾ ಸ್ಟಂಪ್‌ಗೆ ಬಡಿದಿತ್ತು.

ಡಿ ಕಾಕ್‌ಗೆ ದಂಡ ವಿಧಿಸಿ

ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಮೋಸದ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಡಿ ಕಾಕ್‌ಗೆ ಶಿಕ್ಷೆ/ದಂಡ ವಿಧಿಸಬೇಕಿತ್ತು. ಅವರದ್ದು ನ್ಯಾಯಯು, ಸ್ಫೂರ್ತಿಯ ಆಟ ಅಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕಾ 50 ಓವರ್‌ಗೆ 6 ವಿಕೆಟ್ ಕಳೆದು 341 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ, 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 324 ರನ್ ಬಾರಿಸಿ ರೋಚಕ 17 ರನ್‌ನಿಂದ ಸೋಲನುಭವಿಸಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಫಖರ್ ಪಂದ್ಯಶ್ರೇಷ್ಠರೆನಿಸಿದರು.

This News Article Is A Copy Of MYKHEL