ಐಪಿಎಲ್ : ಸಿಕ್ಸ್ ಬಾರಿಸುವುದರಲ್ಲಿ ರಸೆಲ್‌ಗಿಂತ ಈತ ಸಖತ್ ಡೇಂಜರಸ್

07-04-21 06:32 pm       Source: MYKHEL   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 9ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 9ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

ಕೊರೊನಾ ವೈರಸ್ ಹಾವಳಿಯಿಂದ ಕಳೆದ ಬಾರಿಯ ಐಪಿಎಲ್ ಯುಎಇಯಲ್ಲಿ ನಡೆದಿತ್ತು. ಆದರೆ ಈ ಬಾರಿ ಭಾರತದಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದರಿಂದ ಕಳೆದ ಬಾರಿಗಿಂತ ಈ ಬಾರಿ ರನ್ ಹೊಳೆ ಮತ್ತು ಸಿಕ್ಸರ್ ಸುರಿಮಳೆ ಹೆಚ್ಚಾಗಬಹುದು. ಈ ಬಾರಿ ಸಾಕಷ್ಟು ಸಿಕ್ಸರ್ ದಾಖಲೆಗಳು ಸೃಷ್ಟಿಯಾಗಬಹುದು ಮತ್ತು ಈಗಾಗಲೇ ಇರುವ ದಾಖಲೆಗಳನ್ನು ಅಳಿಸಿ ಹೊಸ ದಾಖಲೆಗಳನ್ನು ಆಟಗಾರರು ನಿರ್ಮಿಸಬಹುದು. ಆದರೆ ಕ್ರಿಸ್ ಗೇಲ್ ಅವರ ಈ ಸಿಕ್ಸರ್ ದಾಖಲೆ ಈ ವರ್ಷವೂ ಸಹ ಅಳಿಸಲಾಗದೇ ಹಾಗೆ ಉಳಿದುಬಿಡುತ್ತಾ ಎಂಬುದನ್ನು ಕಾದು ನೋಡಬೇಕು.

2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಅವರು ದಾಖಲಿಸಿದ ಸಿಕ್ಸರ್ ದಾಖಲೆಯನ್ನು ಇದುವರೆಗೂ ಸಹ ಯಾರೂ ಮುರಿಯಲಾಗಿಲ್ಲ. ಸಿಕ್ಸರ್ ಸಿಡಿಸುವುದರಲ್ಲಿ ರಸೆಲ್ ಅವರನ್ನು ಮೀರಿಸುವ ಬೇರೊಬ್ಬ ಆಟಗಾರ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಚರ್ಚೆಗಳಾಗುತ್ತಿರುತ್ತವೆ. 2019ರ ಐಪಿಎಲ್ ಆವೃತ್ತಿಯಲ್ಲಿ ಆ್ಯಂಡ್ರೆ ರಸೆಲ್ ಒಟ್ಟು 52 ಸಿಕ್ಸರ್ ಬಾರಿಸಿದ್ದರು. ಈ ಆವೃತ್ತಿಯ ನಂತರ ಆ್ಯಂಡ್ರೆ ರಸೆಲ್ ಐಪಿಎಲ್ ಟೂರ್ನಿಯ ಭಯಾನಕ ಆಟಗಾರ ಎನಿಸಿಕೊಂಡರು. ಆದರೆ ಇದಕ್ಕೂ ಮೊದಲೇ ಕ್ರಿಸ್ ಗೇಲ್ 2012ರ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 59 ಸಿಕ್ಸರ್ ಸಿಡಿಸಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಸಿಕ್ಸ್ ಬಾರಿಸುವುದರಲ್ಲಿ ಆ್ಯಂಡ್ರೆ ರಸೆಲ್ ಗಿಂತ ಕ್ರಿಸ್ ಗೇಲ್ ಸಖತ್ ಡೇಂಜರಸ್ ಎಂಬುದಕ್ಕೆ 2012ರ ಕ್ರಿಸ್ ಗೇಲ್ ಅವರ ಸಿಕ್ಸರ್ ದಾಖಲೆಯ ಸಾಕ್ಷಿ. 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 59 ಸಿಕ್ಸರ್ ಬಾರಿಸುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2019ರಲ್ಲಿ ಒಟ್ಟು 52 ಸಿಕ್ಸರ್ ಸಿಡಿಸಿದ ರಸೆಲ್ ಎರಡನೇ ಸ್ಥಾನದಲ್ಲಿದ್ದಾರೆ.

ಅಷ್ಟೇ ಅಲ್ಲದೆ 2013ರಲ್ಲಿ 51 ಸಿಕ್ಸರ್, 2011ರಲ್ಲಿ 44 ಸಿಕ್ಸರ್ ಮತ್ತು 2015ರಲ್ಲಿ 38 ಸಿಕ್ಸರ್ ಸಿಡಿಸುವ ಮೂಲಕ ಆ ವರ್ಷಗಳಲ್ಲಿ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಆಟಗಾರ ಎಂಬ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ ಕ್ರಿಸ್ ಗೇಲ್.

This News Article Is A Copy OF MYKHEL