ಕೋಲ್ಕತ್ತಾ ಅಭ್ಯಾಸ ಪಂದ್ಯ: ಟೀಮ್ ಪರ್ಪಲ್ ವಿರುದ್ಧ ರಾಣಾ XIಗೆ ಜಯ

08-04-21 12:58 pm       Source: MYKHEL   ಕ್ರೀಡೆ

ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಗಾಗಿ ಎಲ್ಲಾ ಎಂಟು ತಂಡಗಳು ಸಿದ್ಧವಾಗಿವೆ. 2021ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಅಭ್ಯಾಸ ಪಂದ್ಯ ಮುಗಿಸಿದೆ.

ಚೆನ್ನೈ: ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಗಾಗಿ ಎಲ್ಲಾ ಎಂಟು ತಂಡಗಳು ಸಿದ್ಧವಾಗಿವೆ. 2021ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಅಭ್ಯಾಸ ಪಂದ್ಯ ಮುಗಿಸಿದೆ. ಮೂರನೇ ಅಭ್ಯಾಸ ಪಂದ್ಯದಲ್ಲಿ ಟೀಮ್ ಪರ್ಪಲ್ ವಿರುದ್ಧ ನಿತೀಶ್ ರಾಣಾ ನಾಯಕತ್ವದ ಟೀಮ್ ಗೋಲ್ಡ್ 82 ರನ್ ಜಯ ಗಳಿಸಿದೆ.

ಬುಧವಾರ (ಏಪ್ರಿಲ್ 7) ನಡೆದ ಮೂರನೇ ಅಭ್ಯಾಸ ಪಂದ್ಯದಲ್ಲಿ ನಿತೀಶ್ ರಾಣಾ XI ಮತ್ತು ಟೀಮ್ ಪರ್ಪಲ್ ತಂಡಗಳು ಸೆಣಸಾಡಿದ್ದವು. ಇದರಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನಿತೀಶ್ ರಾಣಾ ಪಡೆ ಜಯ ದಾಖಲಿಸಿದೆ. ಹಿಂದಿನ ಸೀಸನ್‌ನ ಕೆಲ ಪಂದ್ಯಗಳಲ್ಲಿ ನಿತೀಶ್ ಉತ್ತಮ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರು.

ರಾಣಾ ಪ್ಲೇಯಿಂಗ್ XI

ರಾಣಾ ಪ್ಲೇಯಿಂಗ್ XI

ನಿತೀಶ್ ರಾಣಾ ತಂಡದಲ್ಲಿ ವೆಂಕಟೇಶ್ ಅಯ್ಯರ್, ಕರುಣ್ ನಾಯರ್, ಶಕೀಬ್ ಅಲ್ ಹಸನ್, ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಕಮಲೇಶ್ ನಗರ್ಕೋಟಿ, ಸುನಿಲ್ ನರೈನ್, ಸಂದೀಪ್ ವಾರಿಯರ್, ಶಿವಂ ಮಾವಿ ಮತ್ತು ಒಬ್ಬ ನೆಟ್ ಬೌಲರ್ ಇದ್ದರು. ಎದುರಾಳಿ ತಂಡದಲ್ಲಿ ಇಯಾನ್ ಮಾರ್ಗನ್, ಹರ್ಭಜನ್ ಸಿಂಗ್, ಶುಬ್ಮನ್ ಗಿಲ್ ಮೊದಲಾದವರಿದ್ದರು.

ಕೆಕೆಆರ್‌ಗೆ ಆರಂಭಿಕ ಪಂದ್ಯ

ಕೆಕೆಆರ್‌ಗೆ ಆರಂಭಿಕ ಪಂದ್ಯ

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಏಪ್ರಿಲ್ 11ರಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ಪಂದ್ಯ ಆಡಲಿವೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌ಕಾರ್ಡ್\

ಪಂದ್ಯದ ಸಂಕ್ಷಿಪ್ತ ಸ್ಕೋರ್‌ಕಾರ್ಡ್

* ಟೀಮ್ ಗೋಲ್ಡ್: 195/6 (19.4), ವೆಂಕಟೇಶ್ ಅಯ್ಯರ್ 27 (22), ಕರುಣ್ ನಾಯರ್ 41 (30), ಶಕೀಬ್ ಅಲ್ ಹಸನ್ 17 (9), ಆ್ಯಂಡ್ರೆ ರಸೆಲ್ 4 (5), ದಿನೇಶ್ ಕಾರ್ತಿಕ್ 42 (19)*, ಕಮಲೇಶ್ ನಗರ್ಕೋಟಿ 15 (10).

* ಟೀಮ್ ಪರ್ಪಲ್: 113 ಆಲ್‌ಔಟ್, ರಾಹುಲ್ ಟ್ರಿಪಾಠಿ 32(26), ಟಿಮ್ ಸೀಫರ್ಟ್ 12(12), ಶೆಲ್ಡನ್ ಜಾಕ್ಸನ್ 9(11), ಬೆನ್ ಕಟ್ಟಿಂಗ್ 6(13), ಹರ್ಭಜನ್ ಸಿಂಗ್ 6(4), ಪವನ್ ನೇಗಿ 5(11) ರನ್

This News Article Is A Copy Of MYKHEL