ಆರ್‌ಸಿಬಿ ಫ್ಯಾನ್ಸ್ ಬೇಕಂತಲೇ ಕೆಣಕಿ ಸೋಲುತ್ತಾರೆ ಎಂದ ಅಶ್ವಿನ್

09-04-21 07:06 pm       Source: MYKHEL   ಕ್ರೀಡೆ

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ( ಏಪ್ರಿಲ್ 9 ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ( ಏಪ್ರಿಲ್ 9 ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಪೈಪೋಟಿ ಮತ್ತು ಜಿದ್ದಾಜಿದ್ದಿ ಇರುವುದು ಬಹುಷಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆಯೇ ಎನಿಸುತ್ತದೆ.

ಈ ಜಿದ್ದಾಜಿದ್ದಿ ಮತ್ತು ಪೈಪೋಟಿ ಕೇವಲ ಮೈದಾನದಲ್ಲಷ್ಟೇ ಅಲ್ಲದೆ ಎರಡೂ ತಂಡಗಳ ಅಭಿಮಾನಿಗಳ ನಡುವೆಯೂ ಇದೆ. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನಡುವಿನ ಪೈಪೋಟಿಯ ಬಗ್ಗೆ ನಿಮಗೆ ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲ ಎನಿಸುತ್ತದೆ, ಸಾಮಾಜಿಕ ಜಾಲತಾಣದಲ್ಲಿ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಟ್ರೋಲ್ ಮಾಡಿಕೊಂಡಿರುತ್ತಾರೆ ಮತ್ತು ಪಂದ್ಯ ನಡೆಯುವ ವೇಳೆ ಮೈದಾನಗಳಲ್ಲಿಯೂ ಸಹ ಎರಡೂ ತಂಡಗಳ ಅಭಿಮಾನಿಗಳು ಎದುರಾಳಿ ತಂಡಗಳ ವಿರುದ್ಧ ಘೋಷಣೆ ಕೂಗುತ್ತಿರುತ್ತಾರೆ.

 IPL 2021 : RCB Fans Exactly Target CSK Fans but CSK fans will give it Back in their Own Style Says Ravichandran Ashwin

ಇಷ್ಟೊಂದು ಜಿದ್ದಾಜಿದ್ದಿ ಮತ್ತು ಪೈಪೋಟಿ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಬಗ್ಗೆ ರವಿಚಂದ್ರನ್ ಅಶ್ವಿನ್ ಯುಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಬೇಕಂತಲೇ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳನ್ನು ಟಾರ್ಗೆಟ್ ಮಾಡುತ್ತಾರೆ ಆದರೆ ಸಿ ಎಸ್ ಕೆ ತಂಡದ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಬೆಂಗಳೂರು ತಂಡದ ಅಭಿಮಾನಿಗಳಿಗೆ ಉತ್ತರಿಸುತ್ತಾರೆ. ಪೈಪೋಟಿಯ ವಿಷಯ ಬಂದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಯಾವುದೇ ಕಾರಣಕ್ಕೂ ಹಿಂದೆ ಉಳಿಯುವುದಿಲ್ಲ ಎಂದು ಅಶ್ವಿನ್ ಮಾತನಾಡಿದ್ದಾರೆ.

This News Article Is A Copy Of MYKHEL