ಮುಂಬೈ ವಿರುದ್ಧದ ಪಂದ್ಯದ ವೇಳೆ ದಾಖಲೆಯೊಂದರಲ್ಲಿ ಧೋನಿಯನ್ನು ಸೋಲಿಸಿದ ಕೊಹ್ಲಿ

10-04-21 06:39 pm       Source: MYKHEL   ಕ್ರೀಡೆ

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಶುಕ್ರವಾರ (ಏಪ್ರಿಲ್ 9) ಆರಂಭವಾಗಿದ್ದು ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಿದವು.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಶುಕ್ರವಾರ (ಏಪ್ರಿಲ್ 9) ಆರಂಭವಾಗಿದ್ದು ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕ 2 ವಿಕೆಟ್‍ಗಳ ಜಯ ಸಾಧಿಸಿತು. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭವನ್ನು ಮಾಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ಖುಷಿ ಒಂದೆಡೆಯಾದರೆ ವಿರಾಟ್ ಕೊಹ್ಲಿ ಅವರಿಗೆ ಇದರ ಜೊತೆ ಮತ್ತೊಂದು ಖುಷಿ ಸಿಕ್ಕಿದೆ. ಹೌದು ವಿರಾಟ್ ಕೊಹ್ಲಿ ಅವರು ಮುಂಬೈ ವಿರುದ್ಧದ ಪಂದ್ಯದ ವೇಳೆ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ಟಿ ಟ್ವೆಂಟಿ ಪಂದ್ಯಗಳಲ್ಲಿ ಅತೀ ವೇಗವಾಗಿ 6000 ರನ್ ಪೂರೈಸಿದ ನಾಯಕ ಎಂಬ ದಾಖಲೆಯನ್ನು ವಿರಾಟ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್‌ ಆಗಿ ಬಂದಿದ್ದ ಕೊಹ್ಲಿ 29 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕನಾಗಿ ಟಿ ಟ್ವೆಂಟಿ ಪಂದ್ಯಗಳಲ್ಲಿ 6000 ರನ್ ಪೂರೈಸಲು ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದು 168 ಇನ್ನಿಂಗ್ಸ್.

ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಸಹ ಈ ಸಾಧನೆಯನ್ನು ಮಾಡುವ ಹೊಸ್ತಿಲಲ್ಲಿದ್ದರು. 252 ಇನ್ನಿಂಗ್ಸ್‌ಗಳಲ್ಲಿ 5872 ರನ್ ಗಳಿಸಿರುವ ಎಂಎಸ್ ಧೋನಿ ನಾಯಕನಾಗಿ 6000 ಟಿ ಟ್ವೆಂಟಿ ರನ್ ಗಳಿಸುವ ಸನಿಹದಲ್ಲಿದ್ದರು ಆದರೆ ವಿರಾಟ್ ಧೋನಿಗೂ ಮುನ್ನ ಆ ದಾಖಲೆಯನ್ನು ಮುಟ್ಟಿದ್ದಾರೆ.

This News Article Is A Copy Of MYKHEL