ಆರ್‌ಸಿಬಿ ಪಂದ್ಯದ ವೇಳೆ ರೋಹಿತ್ ಶರ್ಮಾ ಶೂನಲ್ಲಿ ಏನು ಬರೆದಿತ್ತು ಗೊತ್ತಾ?!

10-04-21 07:16 pm       Source: MYKHEL   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ (ಏಪ್ರಿಲ್ 9) ನಡೆದ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ 2 ವಿಕೆಟ್‌ನಿಂದ ಸೋತಿದೆ.

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ (ಏಪ್ರಿಲ್ 9) ನಡೆದ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಚಕ 2 ವಿಕೆಟ್‌ನಿಂದ ಸೋತಿದೆ. ಆರ್‌ಸಿಬಿಯಿಂದ ಬಿ ಡಿ ವಿಲಿಯರ್ಸ್ (48 ರನ್, 27 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್ (39 ರನ್, 28), ವಿರಾಟ್ ಕೊಹ್ಲಿ (33 ರನ್, 29) ಮತ್ತು ಹರ್ಷಲ್ ಪಟೇಲ್ (5 ವಿಕೆಟ್) ಉತ್ತಮ ಪ್ರದರ್ಶನ ನೀಡಿದ್ದು ಗೆಲುವಿಗೆ ಕಾರಣವಾಗಿತ್ತು.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ 14ನೇ ವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯುವಾಗ ಅವರ ಶೂನಲ್ಲಿ ಏನೋ ಬರೆಯಲಾಗಿತ್ತು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶೂನಲ್ಲಿ ವಿಶೇಷ ಸಂದೇಶ

ಬ್ಯಾಟಿಂಗ್‌ ಸ್ಟಾರ್ ರೋಹಿತ್ ಶರ್ಮಾ ಬಹಳ ಹಿಂದಿನಿಂದಲೂ ಭಾರತದಲ್ಲಿ ಒಂದು ಕೊಂಬಿನ ಘೇಂಡಾಮೃಗಗಳ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೂ ರೋಹಿತ್, 'ಘೇಂಡಾಮೃಗಗಳನ್ನು ಉಳಿಸಿ' ಎನ್ನುವ ಸಂದೇಶ ಬರೆದಿದ್ದ ಶೂನೊಂದಿಗೆ ಮೈದಾನಕ್ಕಿಳಿದಿದ್ದರು.

ರೋಹಿತ್ ಶರ್ಮಾ ಟ್ವೀಟ್‌

ಈ ಬಗ್ಗೆ ಸ್ವತಃ ರೋಹಿತ್ ಅವರೇ ಟ್ವೀಟ್ ಮಾಡಿದ್ದರು. 'ನೆನ್ನೆ ನಾನು ಮೈದಾನಕ್ಕಿಳಿಯುವಾಗ ಅದು ಕೇವಲ ಪಂದ್ಯವಾಗಿರಲಿಲ್ಲ, ಅದಕ್ಕಿಂತಲೂ ಮಿಗಿಲಾಗಿತ್ತು. ಕ್ರಿಕೆಟ್ ಆಡೋದು ಮತ್ತು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿಸುವುದು ನನ್ನ ಕನಸಾಗಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸಿ ಎಲ್ಲರೂ ಮುಂದಡಿಯಿಡಬೇಕಾಗಿದೆ. ನಾನು ಇಷ್ಟಪಡುವುದನ್ನು ಮಾಡುವಾಗ ಮೈದಾನದಲ್ಲಿ ನನ್ನೊಂದಿಗೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರಣವನ್ನು ತೆಗೆದುಕೊಳ್ಳುವ ಸಂಗತಿ ನನಗೆ ವಿಶೇಷವೆನಿಸುತ್ತದೆ,' ಎಂದು ಟ್ವೀಟ್‌ನಲ್ಲಿ ರೋಹಿತ್ ಬರೆದುಕೊಂಡಿದ್ದರು. ಈ ಟ್ವೀಟ್‌ನಲ್ಲಿ ರೋಹಿತ್ ಶರ್ಮಾ ವಿಶೇಷ ಸಂದೇಶ ಬರೆದಿರುವ ಶೂನ ಚಿತ್ರ ಕೂಡ ಇತ್ತು.

ಬಲು ರೋಚಕ ಪಂದ್ಯ

ಬಲು ರೋಚಕ ಪಂದ್ಯ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು 4ನೇ ಓವರ್‌ ವೇಳೆ ಕೊಹ್ಲಿಯ ಥ್ರೋ ಮತ್ತು ಯುಜುವೇಂದ್ರ ಚಾಹಲ್ ಫೀಲ್ಡಿಂಗ್‌ನಿಂದಾಗಿ ರನ್‌ ಔಟ್ ಆಗಿ 19 ರನ್‌ನೊಂದಿಗೆ ನಿರಾಶೆ ಅನುಭವಿಸಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ, ಕ್ರಿಸ್ ಲಿನ್ 49, ಸೂರ್ಯಕುಮಾರ್ ಯಾದವ್ 35, ಇಶಾನ್ ಕಿಶಾನ್ 28 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, 20 ಓವರ್‌ಗೆ 8 ವಿಕೆಟ್ ಕಳೆದು 160 ರನ್ ರನ್ ಬಾರಿಸಿ ಗೆಲುವನ್ನಾಚರಿಸಿತು.

This News Article Is A Copy Of MYKHEL