ಎಂಎಸ್ ಧೋನಿಯ ತಂದೆ-ತಾಯಿಗೆ ಕೋವಿಡ್-19 ಸೋಂಕು

21-04-21 11:43 am       Source: MYKHEL   ಕ್ರೀಡೆ

ಭಾರತದ ಮಾಜಿ ನಾಯಕ, ಈಗ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿರುವ ಎಂಎಸ್ ಧೋನಿ ಅವರ ತಂದೆ-ತಾಯಿಗೆ ಕೊರೊನಾವೈರಸ್ ಸೋಂಕು ತಗುಲಿದೆ.

ರಾಂಚಿ: ಭಾರತದ ಮಾಜಿ ನಾಯಕ, ಈಗ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿರುವ ಎಂಎಸ್ ಧೋನಿ ಅವರ ತಂದೆ-ತಾಯಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಧೋನಿ ಹೆತ್ತವರಾದ ದೇವಕಿ ದೇವಿ ಮತ್ತು ಪಾನ್‌ ಸಿಂಗ್‌ಗೆ ಕೋವಿಡ್-19 ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ.

ಝಾರ್ಖಂಡ್‌ನ ರಾಂಚಿಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೇವಕಿ ದೇವಿ ಮತ್ತು ಪಾನ್‌ ಸಿಂಗ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಎಸ್ ಧೋನಿ ಸದ್ಯ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಎಸ್‌ಕೆ ಮುನ್ನಡೆಸುತ್ತಿದ್ದು, ಚೆನ್ನೈ ಉತ್ತಮ ಪ್ರದರ್ಶನ ನೀಡುತ್ತಿದೆ. ಈವರೆಗೆ ಸಿಎಸ್‌ಕೆ ಒಟ್ಟು 3 ಪಂದ್ಯಗಳನ್ನಾಡಿದ್ದು, ಇದರಲ್ಲಿ ಎರಡರಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ. 4ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಮಧ್ಯೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 21ರಂದು ನಡೆಯಲಿದೆ.

ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಂಡ ಬಳಿಕ ಕೊಂಚ ಕಾಲ ಧೋನಿ ತನ್ನ ಕುಟುಂಬಸ್ಥರ ಜೊತೆ ಕಳೆದಿದ್ದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ನಿವೃತ್ತಿ ನೀಡಿರುವುದರಿಂದ ಈ ಐಪಿಎಲ್ ಸೀಸನ್‌ಗೂ ಮುನ್ನ ಯಾವುದೇ ಟೂರ್ನಿಗಳಲ್ಲಿ ಧೋನಿ ಆಡಿರಲಿಲ್ಲ.

This News Article IsA Copy Of MYKHEL