ಆರ್‌ಸಿಬಿಯೇ ಐಪಿಎಲ್ 2021ರ ವಿಜೇತ ತಂಡ ಎಂದು ಘೋಷಿಸಿದ ಪೈಥಾನ್

13-05-21 11:12 am       MYKHEL: Madhukara Shetty   ಕ್ರೀಡೆ

ಪೈಥಾನ್ ಸಿಮ್ಯೂಲೇಶನ್ ಪ್ರೋಗ್ರಾಮ್ ಮೂಲಕ ಈ ಟೂರ್ನಿಯ ಫಲಿತಾಂಶವನ್ನು ಕಂಡುಕೊಳ್ಳಲಾಗಿದ್ದು ಆರ್‌ಸಿಬಿ ಟೂರ್ನಿಯ ವಿಜೇತ ತಂಡ ಎಂಬ ಫಲಿತಾಂಶ ಬಂದಿದೆ.

ಕಳೆದ 13 ಆವೃತ್ತಿಯ ಐಪಿಎಲ್‌ನಲ್ಲಿಯೂ ನಿರಾಸೆಯನ್ನು ಅನುಭವಿಸಿಕೊಂಡು ಬಂದಿದ್ದ ಆರ್‌ಸಿಬಿ ತಂಡ ಈ ಬಾರಿ ಆರಂಭದಿಂದಲೂ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಮುನ್ನುಗ್ಗಿತ್ತು. ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಾ ಎಲ್ಲಾ ವಿಭಾಗದಲ್ಲಿಯೂ ಮಿಂಚುತ್ತಾ ಸಾಗಿತ್ತು, ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಟೂರ್ನಿಯನ್ನು ಮುಂದೂಡಬೇಕಾಯಿತು. ಹೀಗಾಗಿ ಕಪ್ ಗೆಲ್ಲುವ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

ಆದರೆ ಈಗ ಆರ್‌ಸಿಬಿ ಅಭಿಮಾನಿಗಳು ಸಂತಸಪಡುವ ಸುದ್ದಿಯೊಂದು ಬಂದಿದೆ. ಪೈಥಾನ್ ಸಿಮ್ಯೂಲೇಶನ್ ಪ್ರೋಗ್ರಾಮ್ ಮೂಲಕ ಈ ಟೂರ್ನಿಯ ಫಲಿತಾಂಶವನ್ನು ಕಂಡುಕೊಳ್ಳಲಾಗಿದ್ದು ಆರ್‌ಸಿಬಿ ಟೂರ್ನಿಯ ವಿಜೇತ ತಂಡ ಎಂಬ ಫಲಿತಾಂಶ ಬಂದಿದೆ.



ಆರ್‌ಸಿಬಿ ಪರ ಫಲಿತಾಂಶ

ಈ ಬಾರಿಯ ಐಪಿಎಲ್‌ನ 29 ಪಂದ್ಯಗಳು ಮಾತ್ರವೇ ಸಂಪೂರ್ಣವಾಗಿದೆ. ಉಳಿದ 31 ಪಂದ್ಯಗಳ ಆಯೋಜನೆ ಇನ್ನಷ್ಟೇ ಆಗಬೇಕಿದೆ. ಆದರೆ ಈಗಾಗಲೇ ನಡೆದಿರುವ ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಅದರ ಲೆಕ್ಕಾಚಾರದ ಪ್ರಕಾರವೇ ಪ್ರತಿ ಪಂದ್ಯಗಳ ಫಲಿತಾಂಶವನ್ನು ಕಲೆ ಹಾಕಿ ಈ ರೆಡ್ಡಿಟ್ ಬಳಕೆದಾರ ಆದಿಶ್ ಜೈನ್ ಎಂಬವರು ಪ್ರೋಗ್ರಾಂ ಮಾಡಲು ನಿರ್ಧಾರಿಸಿದರು. ಇದರ ಫಲಿತಾಂಶ ಆರ್‌ಸಿಬಿ ಪರವಾಗಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ವಿಜೇತ ತಂಡ ಎಂದು ಘೋಷಿಸಿದೆ.



ಫಲಿತಾಂಶ ಪಡಿದಿದ್ದು ಹೇಗೆ!

ಈ ಫಲಿತಾಂಶವನ್ನು ಪಡೆಯುವ ಸಲುವಾಗಿ ಕಳೆದ ಐದು ವರ್ಷಗಳ ಪ್ರತಿ ಎಸೆತಗಳ ಅಂಕಿಅಂಶಗಳನ್ನು ಬಳಸಲಾಗಿದೆ. ಪ್ರತಿ ಆಟಗಾರನಿಗೂ ವಿಶೇಷ ಗುರುತು ನೀಡಲಾಗಿದ್ದು ಸಿಂಗಲ್ಸ್, ಡಬಲ್ಸ್ ರನ್‌ಗಳಿಸಿದ ಮಾದರಿ, ಸಿಕ್ಸ್ ಬೌಂಡರಿ ಗಳಿಸಿದ ವಿವರಗಳು ಇತ್ಯಾದಿಯನ್ನು ನೀಡಲಾಗಿದೆ. ಜೊತೆಗೆ ಔಟಾದ ವಿಧಾನವನ್ನು ಬಳಸಿಕೊಂಡು ಈ ಫಲಿತಾಂಶವನ್ನು ಪಡೆಯಲಾಗಿದೆ ಎಂದು ಆದಿಶ್ ಜೈನ್ ವಿವರಿಸಿದ್ದಾರೆ.


ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ ಗೆಲುವು

ಈ ಫಲಿತಾಂಶದ ಪ್ರಕಾರ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣೆಸಿದರೆ ಮೊದಲ ಎಲಿಮಿನೇಟರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಕ್ವಾಲಿಫೈಯರ್ ಎರಡರಲ್ಲಿ ಡೆಲ್ಲಿ ಹಾಗೂ ಪಂಜಾಬ್ ಮುಖಾಮುಖಿಯಾಗಿ ಬಳಿಕ ಫೈನಲ್ ಪಂದ್ಯದಲ್ಲಿ ಡೆಲ್ಲಿ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗಿದ್ದು ಆರ್‌ಸಿಬಿ ಗೆಲುವು ಸಾಧಿಸಿರುವ ಫಲಿತಾಂಶ ಪ್ರಕಟವಾಗಿದೆ.

(Kannada Copy of  Mykhel Kannada)